ಬೆಂಗಳೂರು[ಜೂ. 09]  ಐಪಿಎಲ್ 12ರ ಕೊನೆ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತ್ತು. ಆದರೆ ಅಂದು ಎಲ್ಲದಕ್ಕಿಂತ ದೊಡ್ಡ ಸುದ್ದಿ ಮಾಡಿದ್ದವಳು ಈ ಚೆಲುವೆ.

ಆರ್ ಸಿಬಿ ಗರ್ಲ್ ದೀಪಿಕಾ ರಾತ್ರಿ ಕಳೆದು ಬೆಳಕು ಹರಿಯುವಷ್ಟರಲ್ಲಿ 'ಸೆಲೆಬ್ರಿಟಿ ಸ್ಟಾರ್' ಎನಿಸಿಕೊಂಡಿದ್ದಳು. ಸೋಶಿಯಲ್ ಮೀಡಿಯಾದಲ್ಲಿ ಈಕೆಯನ್ನು ಲಕ್ಷಾಂತರ ಜನ ಕೊಂಡಾಡಿದ್ದರು. 

ರಾತ್ರೋರಾತ್ರಿ ಸೆಲೆಬ್ರಿಟಿಯಾಗಿದ್ದ RCB ಅಭಿಮಾನಿಗೆ ನೆಟ್ಟಿಗರ ಕಿರುಕುಳ!

RCB ಗರ್ಲ್ ಟ್ರೆಂಡಿಂಗ್, ಎಲ್ಲಾ ಮ್ಯಾಚಿಗೂ ಕರೆಸಿ ಎಂದು ಕೊಹ್ಲಿಗೆ ಮನವಿ ಈಗ ವಿಶ್ವಕಪ್ 2019ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾವನ್ನು ಹುರಿದುಂಬಿಸಲು ದೀಪಿಕಾ ಮುಂದಾಗಿದ್ದಾಳೆ.

ಹೊಸ ನ್ಯಾಷನಲ್ ಕ್ರಶ್ ಎನಿಸಿಕೊಂಡ ಈಕೆ ಹೆಸರು ದೀಪಿಕಾ, ಸದ್ಯ ಆಕೆ ಬಗ್ಗೆ ಅನೇಕ ಮೀಮ್ಸ್, ಟ್ರಾಲ್ ಗಳು ಬಂದಿದ್ದು, ಎಲ್ಲವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಳು. ಕೆಲ ಕಿಡಿಗೇಡಿಗಳು ಇವಳನ್ನು ಕಾಡಿದ್ದು ಸುದ್ದಿಯಾಗಿತ್ತು. ಇದೀಗ ಟೀಂ ಇಂಡಿಯಾಕ್ಕೆ ನೃತ್ಯದ ಮೂಲಕ ಶುಭ ಕೋರಿದ್ದಾರೆ.