ನವದೆಹಲಿ[ಜೂ.08]: ದಕ್ಷಿಣ ಆಫ್ರಿಕಾ ವಿರುದ್ಧ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಆದರೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಪ್ಯಾರಾ ಸ್ಪೆಷಲ್ ಫೋರ್ಸ್ ಚಿನ್ಹೆಯಾದ ’ಬಲಿದಾನ್’ ಚಿತ್ರವನ್ನು ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್ ನಲ್ಲಿ ಬಳಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಧೋನಿಗೆ ಸಂಕಷ್ಟ-ಗ್ಲೌಸ್ ಮೇಲಿನ ಸೇನೆ ಚಿಹ್ನೆ ತೆಗೆಯಲು ಐಸಿಸಿ ಸೂಚನೆ!

40ನೇ ಓವರ್ ನಲ್ಲಿ ಯಜುವೇಂದ್ರ ಚಹಲ್ ಬೌಲಿಂಗ್ ನಲ್ಲಿ ಆ್ಯಂಡಿಲೆ ಫೆಲುಕ್ವಾಯೋರನ್ನು ಧೋನಿ ಸ್ಟಂಪಿಂಗ್ ಮಾಡುವ ವೇಳೆ ಧೋನಿ ಗ್ಲೌಸ್ ನಲ್ಲಿ ಭಾರತೀಯ ಸೇನೆಯ ’ಬಲಿದಾನ್’ ಚಿನ್ಹೆ ಕಂಡುಬಂದಿತ್ತು. ಧೋನಿ ಈ ಚಿನ್ಹೆ ಬಳಸಿರುವುದು ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದರೆ, ಮತ್ತೆ ಕೆಲವರು ಧೋನಿಯ ನಡೆಯನ್ನು ಟೀಕಿಸಿದ್ದಾರೆ. ಇದರ ಬೆನ್ನಲ್ಲೇ ಐಸಿಸಿ, ಬಿಸಿಸಿಐಗೆ ಬಲಿದಾನ್ ಚಿನ್ಹೆ ಬಳಸದಂತೆ ಸೂಚಿಸಿತ್ತು. 
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಸಿಸಿಐ, ಯಾವುದೇ ರಾಜಕೀಯ, ಧಾರ್ಮಿಕ ಅಥವಾ ಜನಾಂಗೀಯ ಸಂದೇಶವಾಗಲಿ ಈ ಚಿನ್ಹೆ ನೀಡುತ್ತಿಲ್ಲ ಎಂದಿತ್ತು. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್, ಧೋನಿ ಬೆಂಬಲಕ್ಕೆ ನಿಂತಿದ್ದಾರೆ.

ಧೋನಿ ಗ್ಲೌಸಲ್ಲಿ IA ಚಿಹ್ನೆಗೆ ICC ವಿರೋಧ: ಪಾಕ್‌ಗಿಲ್ಲದ ನಿಯಮ ನಮಗ್ಯಾಕೆ?

ಸರಿಯಾದ ದಿಕ್ಕಿನಲ್ಲಿ ಕ್ರಿಕೆಟ್ ನಡೆಸುವುದು ಐಸಿಸಿಯ ಕೆಲಸವೇ ಹೊರತು, ಅದನ್ನು ಬಿಟ್ಟು ಯಾರು ಯಾವ ಗ್ಲೌಸ್ ಧರಿಸಿದ್ದಾರೆ, ಯಾವ ಸ್ಟಿಕ್ಕರ್ ಅಂಟಿಸಿಕೊಂಡಿದ್ದಾರೆ ಎನ್ನುವುದಲ್ಲ ಎಂದು ಐಸಿಸಿ ಮೇಲೆ ಗಂಭೀರ್ ಕಿಡಿಕಾರಿದ್ದಾರೆ. 

ಐಸಿಸಿ ಬೌಲಿಂಗ್ ಸ್ನೇಹಿ ಪಿಚ್ ರೂಪಿಸುವತ್ತ ಗಮನ ಹರಿಸಲಿ. ಸತತ 300+ ರನ್ ದಾಖಲಾಗುವಂತಹ ಪಿಚ್ ನಿರ್ಮಾಣವಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ಬಲಿದಾನ್ ಚಿನ್ಹೆ ವಿಚಾರಕ್ಕೆ ಸುಮ್ಮನೆ ಇಲ್ಲದ ಪ್ರಚಾರ ನೀಡಲಾಗುತ್ತಿದೆ ಎಂದು ಗಂಭೀರ್ ಅಸಮಾದಾನ ವ್ಯಕ್ತಪಡಿಸಿದ್ದಾರೆ.