ನವದೆಹಲಿ(ಜೂ.07): ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್‌ನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸಂಕಷ್ಟ ಎದುರಾಗಿದೆ. ಸೌತ್ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಕೊಹ್ಲಿಗೆ ದಂಡ ವಿಧಿಸಲಾಗಿದೆ. ಈ ಬಾರಿ ಕೊಹ್ಲಿಗೆ ದಂಡ ವಿಧಿಸಿರೋದು, ಪಂದ್ಯಕ್ಕಲ್ಲ, ಬದಲಾಗಿ ಕುಡಿಯುವ ನೀರಿನಲ್ಲಿ ಕಾರು ತೊಳೆದ ಕಾರಣಕ್ಕೆ ಕೊಹ್ಲಿ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾಗೆ ಆರಂಭದಲ್ಲೇ ವಿಘ್ನ!

ನವದೆಹಲಿ ಸೇರಿದಂತೆ ಭಾರತದ ಬಹುತೇಕ ಪ್ರದೇಶಗಳಲ್ಲಿ ಬರಗಾಲ ಜನ ಜೀವನವನ್ನು ಹೈರಾಣಾಗಿಸಿದೆ. ಕುಡಿಯಲು ನೀರಿನಲ್ಲದೆ ಜನ-ಜಾನುವಾರುಗಳು ಪರದಾಡುತ್ತಿದೆ. ಮಹಾನಗರ ದೆಹಲಿಯಲ್ಲೂ ಕುಡಿಯು ನೀರಿನ ಅಭಾವ ಎದುರಾಗಿದೆ. ಈ ಸಂದರ್ಭದಲ್ಲಿ ಗುರಗಾಂವ್‌ನಲ್ಲಿರುವ ಕೊಹ್ಲಿ ಮನೆಯಲ್ಲಿ ಐಷಾರಾಮಿ ಹಾಗೂ ದುಬಾರಿ ಕಾರುಗಳನ್ನು ಕಾರ್ಪೋರೇಶನ್ ಕುಡಿಯುವ ನೀರಿನಲ್ಲಿ ತೊಳೆಯಲಾಗಿದೆ. 

ಇದನ್ನೂ ಓದಿ: ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ - ಭವಿಷ್ಯ ನುಡಿದ ತೆಂಡುಲ್ಕರ್!

ಕುಡಿಯುವ ನೀರಿನಲ್ಲಿ ಕಾರು ತೊಳೆದ ಕಾರಣಕ್ಕೆ ಅಧಿಕಾರಿಗಳು ಕೊಹ್ಲಿಗೆ ದಂಡ  ವಿಧಿಸಿದ್ದಾರೆ. ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು ಫೀಲ್ಡ್ ವಿಸಿಟ್ ವೇಳೆ ಕೊಹ್ಲಿ ಮನೆ ಕೆಲದವರು ಕಾರು ತೊಳೆಯುತ್ತಿರುವುದನ್ನು ಗಮನಿಸಿದ್ದಾರೆ. ಕುಡಿಯುವ ನೀರಿನಲ್ಲಿ ಕಾರು ತೊಳೆದು ನೀರು ಪೋಲು ಮಾಡಿದ ಕೊಹ್ಲಿಗೆ 500 ರೂಪಾಯಿ ದಂಡ ವಿಧಿಸಿದ್ದಾರೆ.