ಓವಲ್(ಜೂ.07): ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಟೀಂ ಇಂಡಿಯಾ ಇದೀಗ 2ನೇ ಪಂದ್ಯವನ್ನು ಎದುರುನೋಡುತ್ತಿದೆ. ಜೂನ್ 9 ರಂದು ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ. ಇದಕ್ಕಾಗಿ ಅಭ್ಯಾಸಕ್ಕೆ ಮುಂದಾದ ಟೀಂ ಇಂಡಿಯಾ ಸಂಕಷ್ಟ ಎದುರಾಗಿದೆ. ಟೀಂ ಇಂಡಿಯಾ ಅಭ್ಯಾಸ ರದ್ದಾಗಿದೆ.

ಇದನ್ನೂ ಓದಿ: ಭಾರತ ವಿರುದ್ಧ ವಿಶೇಷ ಸಂಭ್ರಮಾಚರಣೆ - ಪಾಕ್ ತಂಡದ ಮನವಿ ತಿರಸ್ಕರಿಸಿದ ಮಂಡಳಿ!

ಕೆನ್ನಿಂಗ್ಟನ್ ಓವಲ್‌ನಲ್ಲಿ ಟೀಂ ಇಂಡಿಯಾ ಅಭ್ಯಾಸಕ್ಕೆ ಸಜ್ಜಾಗಿತ್ತು. ಆದರೆ ಮಳೆಯಿಂದಾಗಿ ಕೊಹ್ಲಿ ಸೈನ್ಯದ ಅಭ್ಯಾಸ ರದ್ದಾಗಿದೆ. ಇದೀಗ ಭಾರತ ಹಾಗೂ ಆಸ್ಟ್ರೇಲಿಯಾ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಇದೀಗ ಟೀಂ ಇಂಡಿಯಾ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ:  ಸೇನಾ ಸಮವಸ್ತ್ರದಲ್ಲಿ ಹೀಗೆ ಮಿಂಚುತ್ತಾರೆ ಲೆಫ್ಟಿನೆಂಟ್ ಕರ್ನಲ್ ಎಂ. ಎಸ್ ಧೋನಿ!

ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತ್ತು. ಬಳಿಕ ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ಇದೀಗ ಇಂಡೋ-ಆಸಿಸ್ ಪಂದ್ಯಕ್ಕೂ ಮಳೆ ಅಡ್ಡಿಯಾಗೋ ಆತಂಕ ಎದುರಾಗಿದೆ.