ಕಾರ್ಡಿಫ್(ಜೂ.04): ಮಳೆಯಿಂದ ತಾತ್ಕಾಲಿಕ ಸ್ಥಗಿತಗೊಂಡಿದ್ದ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ನಡುವಿನ ವಿಶ್ವಕಪ್ ಲೀಗ್ ಪಂದ್ಯ ಮತ್ತೆ ಆರಂಭಗೊಂಡಿದೆ. ನಿರಂತರ ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭಗೊಂಡಿದೆ. ಹೀಗಾಗಿ ಪಂದ್ಯವನ್ನು 41 ಓವರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಇನ್ನಿಂಗ್ಸ್ ಬ್ರೇಕ್ ಸಮಯವನ್ನು 10 ನಿಮಿಷಕ್ಕೆ ಇಳಿಸಲಾಗಿದೆ.

 

 

ಇದನ್ನೂ ಓದಿ: ವಿಶ್ವಕಪ್ 2019: ಟೀಂ ಇಂಡಿಯಾ ಬೆಂಬಲಿಸಲು ಇಂಗ್ಲೆಂಡ್ ತೆರಳಿದ ವಿಶೇಷ ಅತಿಥಿ!

ಸದ್ಯ ಶ್ರೀಲಂಕಾ 33 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 182 ರನ್ ಸಿಡಿಸಿದೆ. ಇದೀಗ ಶ್ರೀಲಂಕಾ ತಂಡಕ್ಕೆ 8 ಓವರ್ ಬ್ಯಾಟಿಂಗ್ ಮಾಡೋ ಅವಕಾಶವಿದೆ. ಆದರೆ ಲಂಕಾ ಬಳಿಕ 2 ವಿಕೆಟ್ ಮಾತ್ರ ಉಳಿದಿದೆ. ಇತ್ತ ಅದ್ಬುತ ಪ್ರದರ್ಶನ ನೀಡಿರುವ ಅಫ್ಘಾನಿಸ್ತಾನ ಇದೀಗ ಲಂಕಾ ನೀಡೋ  ಗುರಿಯನ್ನು 41 ಓವರ್‌ನಲ್ಲಿ ಚೇಸ್ ಮಾಡಬೇಕಿದೆ.