ಬ್ರಿಸ್ಟಲ್(ಜೂ.07): ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಕೂಡ ಪ್ರಶಸ್ತಿ ಗೆಲ್ಲೋ ಭರವಸೆ ಮೂಡಿಸಿದೆ. ಮೊದಲ ಪಂದ್ಯದಲ್ಲಿ ಸೋಲು ಕಂಡರೂ 2ನೇ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನೇ ಮಣಿಸಿ ಕಮ್‌ಬ್ಯಾಕ್ ಮಾಡಿದೆ. ಆದರರೆ 3ನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯದ ಬಳಿಕ ಪಾಕಿಸ್ತಾನವೇ ಈ ಬಾರಿ ಪ್ರಶಸ್ತಿ ಗೆಲ್ಲುತ್ತೆ ಅನ್ನೋ ಮಾತುಗಳು ಕೇಳಿಬರುತ್ತಿದೆ. 

ಇದನ್ನೂ ಓದಿ: ಎಬಿ ಡಿವಿಲಿಯರ್ಸ್ ಮಾಡಿದ ಅತೀ ದೊಡ್ಡ ತಪ್ಪು- ಅಕ್ತರ್ ಹೇಳಿದ ಸೀಕ್ರೆಟ್!

ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯದ ಬಳಿಕ ಇದೀಗ ಪಾಕಿಸ್ತಾನ ಪ್ರಶಸ್ತಿ ಗೆಲ್ಲುತ್ತೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಕಾರಣ 1992ರಲ್ಲೂ ಪಾಕಿಸ್ತಾನ ಇದೇ ರೀತಿ ಫಲಿತಾಂಶ ಬಂದಿತ್ತು. 1992ರ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಪಾಕ್, 2ನೇ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಇನ್ನೂ 3ನೇ ಪಂದ್ಯ ರದ್ದಾಗಿತ್ತು. ಬಳಿಕ ಅದ್ಬುತ ಪದರ್ಶನದ ಮೂಲಕ ಪಾಕಿಸ್ತಾನ ಪ್ರಶಸ್ತಿ ಗೆದ್ದಿತ್ತು.

ಇದನ್ನೂ ಓದಿ: ಗೆಳತಿ ಜೊತೆ ತೆರಳಿದ ಮುಂಬೈ ಕ್ರಿಕೆಟಿಗನ ಕೊಲೆ!

2019ರಲ್ಲೂ ಆರಂಭಿಕ ಪಂದ್ಯ ಸೋತು ಪಾಕ್, 2ನೇ ಪಂದ್ಯ ಗೆದ್ದಿತ್ತು. ಬಳಿಕ 3ನೇ ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಅಭಿಮಾನಿಗಳು ಈ ಭಾರಿ ಪಾಕಿಸ್ತಾನ ಪ್ರಶಸ್ತಿ ಗೆಲ್ಲಲಿದೆ ಎಂದಿದ್ದಾರೆ.