ಇಸ್ಲಾಮಾಬಾದ್(ಜೂ.08): ವಿಶ್ವಕಪ್ ಟೂರ್ನಿಯಲ್ಲಿ ಸೌತ್ಆಫ್ರಿಕಾ ಸತತ ಸೋಲು ಕಾಣುತ್ತಿದ್ದಂತೆ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಭಾರಿ ಸುದ್ದಿಯಾಗಿದ್ದಾರೆ. ವಿದಾಯ ಹೇಳಿದ್ದ ಎಬಿ ಡಿವಿಲಿಯರ್ಸ್ 2019ರ ವಿಶ್ವಕಪ್ ಆಡಲು ಬಯಸಿದ್ದರು. ಆದರೆ ಮಂಡಳಿ ಎಬಿಡಿ ಮನವಿಯನ್ನು ತಿರಸ್ಕರಿಸಿದ ಮಾಹಿತಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರರ ಬೆನ್ನಲ್ಲೇ ಎಬಿಡಿ ಮಾಡಿದ ತಪ್ಪನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯಿಬ್ ಅಕ್ತರ್ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ಛೇ, ಎಬಿಡಿಗೆ ಹೀಗಾಗಬಾರದಿತ್ತು...!

ವಿದಾಯ ಹೇಳಿದ್ದರೂ ಎಬಿಡಿಗೆ ವಿಶ್ವಕಪ್ ಆಡಲು ಅವಕಾಶ ನೀಡಬೇಕಿತ್ತು ಅನ್ನೋ ಕೂಗುಗಳು ಕೇಳಿಬಂದ ಬೆನ್ನಲ್ಲೇ ವಿರೋಧವೂ ವ್ಯಕ್ತವಾಗಿದೆ. ಎಬಿ ಡಿವಿಲಿಯರ್ಸ್ ದೇಶಕ್ಕಿಂತ ಹಣವೇ ಮುಖ್ಯವಾಗಿತ್ತು. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ  ಹೇಳಿ ಐಪಿಎಲ್ ಹಾಗೂ ಪಾಕಿಸ್ತಾನ ಸೂಪರ್ ಲೀಗ್ ಆಡಿದ್ದಾರೆ. ದಿಢೀರ್ ನಿವೃತ್ತಿ ಹೇಳಿದಾಗ ಇಲ್ಲದ ದೇಶಪ್ರೇಮ ಈಗ ಎಲ್ಲಿಂದ ಬಂತು ಎಂದು ಶೋಯಿಬ್ ಅಕ್ತರ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ - ಭವಿಷ್ಯ ನುಡಿದ ತೆಂಡುಲ್ಕರ್!

ಎಬಿಡಿಗೆ ದೇಶವೇ ಮುಖ್ಯವಾಗಿದ್ದರೆ ಐಪಿಎಲ್, ಪಿಎಸ್ಎಲ್ ಹಾಗೂ ಇತರ ಲೀಗ್ ಪಂದ್ಯದಿಂದ ದೂರವಿದ್ದು, ಸೌತ್ಆಫ್ರಿಕಾ ತಂಡಕ್ಕಾಗಿ ಆಡಬಹುದಿತ್ತು. ಆದರೆ ಎಬಿಡಿ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಇದೀಗ ಮತ್ತೆ ಸೌತ್ಆಫ್ರಿಕಾ ತಂಡಕ್ಕಾಗಿ ಆಡಲು ಬಯಿಸುವುದು ತಪ್ಪು. ಇಲ್ಲಿ ಸೌತ್ಆಫ್ರಿಕಾ ಕ್ರಿಕೆಟ್ ಮಂಡಳಿ ನಿರ್ಧಾರವೇ ಸರಿ ಎಂದು ಶೋಯಿಬ್ ಅಕ್ತರ್ ಹೇಳಿದ್ದಾರೆ.