ಜೋಹರ್ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ಕಿರಿಯರ ತಂಡ ಭರ್ಜರಿ ಗೆಲುವು ದಾಖಲಿಸಿದೆ. ನ್ಯೂಜಿಲೆಂಡ್ ವಿರುದ್ದ ಹೋರಾಡಿದ ಭಾರತ, ಗೋಲುಗಳ ಸುರಿಮಳೆಗೈಯಿತು.

ಜೋಹರ್ ಬಹ್ರು(ಅ.14): ಕಿರಿಯರ ಸುಲ್ತಾನ್ ಜೋಹರ್ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡ 2ನೇ ಗೆಲುವು ದಾಖಲಿಸಿದೆ. ಭಾನುವಾರ(ಅ.13) ನಡೆದ ರೌಂಡ್ ರಾಬಿನ್ ಹಂತದ 2ನೇ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ದ 8-2 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿತು.

Add Asianetnews Kannada as a Preferred SourcegooglePreferred

ಇದನ್ನೂ ಓದಿ: ಬೆಲ್ಜಿಯಂ ಬಗ್ಗುಬಡಿದ ಹಾಕಿ ಟೀಂ ಇಂಡಿಯಾ

ಭಾರತದ ಪರ ಸಂಜಯ್(17, 22ನೇ ನಿಮಿಷ) ದಿಲ್‌ಪ್ರೀತ್(6ನೇ ನಿಮಿಷ), ಶೀಲಾನಂದ ಲಾಕ್ರ(14ನೇ ನಿಮಿಷ),ಮನ್‌ದೀಪ್ (22ನೇ ನಿಮಿಷ), ಸುಮನ್ (45ನೇ ನಿಮಿಷ), ಪ್ರತಾಪ್ 50ನೇ ನಿಮಿಷ) ಮತ್ತು ಸುದೀಪ್(51 ನೇ ನಿಮಿಷ) ಸಿಡಿಸಿದ ಗೋಲುಗಳಿಂದ ಭಾರತ ಬರೋಬ್ಬರಿ 8 ಗೋಲು ದಾಖಲಿಸಿತು.

ಇದನ್ನೂ ಓದಿ: 2020 ಒಲಿಂಪಿಕ್ಸ್ ಹಾಕಿ: ರಾಜ್ಯದ ರಘು ಅಂಪೈರ್

ಮಂಗಳವಾರ ನಡೆಯಲಿರುವ ಗೆಲುವಿನ ಅಲೆಯಲ್ಲಿರುವ ಭಾರತ, ಬಲಿಷ್ಠ ಜಪಾನ್ ವಿರುದ್ಧ ಹೋರಾಟ ನಡೆಸಲಿದೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ಮಲೇಷ್ಯಾ ವಿರುದ್ಧ ಗೆಲುವು ಸಾಧಿಸಿತು. ಸತತ 2ನೇ ಗೆಲುವು ದಾಖಲಿಸಿರುವ ಭಾರತ, ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದೆ.