ಬೆಲ್ಜಿಯಂ ಬಗ್ಗುಬಡಿದ ಹಾಕಿ ಟೀಂ ಇಂಡಿಯಾ
ಹಾಕಿ ಇಂಡಿಯಾ ಬೆಲ್ಜಿಯಂ ವಿರುದ್ಧ ದಾಖಲೆಯ ಜಯ ಸಾಧಿಸಿದೆ. ಇಲ್ಲಿ ನಡೆದ 5ನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತ ಪ್ರಾಬಲ್ಯ ಮೆರೆಯಿತು. ಬೆಲ್ಜಿಯಂ ಪ್ರವಾಸದ ಎಲ್ಲಾ 5 ಪಂದ್ಯಗಳನ್ನೂ ಭಾರತ ಗೆದ್ದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಲ್ಜಿಯಂ(ಅ.04): ಹಾಲಿ ವಿಶ್ವ ಹಾಗೂ ಯುರೋಪಿಯನ್ ಚಾಂಪಿಯನ್ ಬೆಲ್ಜಿಯಂ ವಿರುದ್ಧ ಭಾರತ 5-1ರಿಂದ ಗೆದ್ದು, ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ವಿಶ್ವ ನಂ.2 ಬೆಲ್ಜಿಯಂ ವಿರುದ್ಧ ಭಾರತಕ್ಕೆ ಇದು ದಾಖಲೆ ಗೆಲುವಾಗಿದೆ.
2020 ಒಲಿಂಪಿಕ್ಸ್ ಹಾಕಿ: ರಾಜ್ಯದ ರಘು ಅಂಪೈರ್
ಗುರುವಾರ ಇಲ್ಲಿ ನಡೆದ 5ನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತ ಪ್ರಾಬಲ್ಯ ಮೆರೆಯಿತು. ಬೆಲ್ಜಿಯಂ ಪ್ರವಾಸದ ಎಲ್ಲಾ 5 ಪಂದ್ಯಗಳನ್ನೂ ಭಾರತ ಗೆದ್ದಿತು. ಮೊದಲ ಪಂದ್ಯದಲ್ಲಿ ಆತಿಥೇಯ ಬೆಲ್ಜಿಯಂ ವಿರುದ್ಧ 2-0ಯಿಂದ ಭಾರತ ಗೆದ್ದಿತ್ತು. 2ನೇ ಹಾಗೂ 3ನೇ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಭಾರತ ಕ್ರಮವಾಗಿ 6-1, 5-1ರಿಂದ ಭರ್ಜರಿ ಜಯ ಸಾಧಿಸಿತ್ತು. ಕಳೆದ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 2-1ರಿಂದ ಭಾರತ ಜಯಿಸಿತ್ತು.
ಮಹಿಳಾ ಹಾಕಿ; ಬ್ರಿಟನ್ ವಿರುದ್ದ ಮುಗ್ಗರಿಸಿದ ಭಾರತ, ಸರಣಿ ಸಮಬಲ!
ಭಾರತ ಪರ ಸಿಮ್ರನ್‌ಜಿತ್ (7ನೇ ನಿ.), ಲಲಿತ್ ಉಪಾಧ್ಯಾಯ (36ನೇ ನಿ.), ವಿವೇಕ್ ಸಾಗರ್ (37ನೇ ನಿ.), ಹರ್ಮನ್‌ಪ್ರೀತ್ (41ನೇ ನಿ.), ರಮಣ್‌ದೀಪ್ (43ನೇ ನಿ.) ಗೋಲುಗಳಿಸಿದರು. ಬೆಲ್ಜಿಯಂ ಪರ ಅಲೆಕ್ಸಾಂಡರ್ ಹೆನ್ರಿಕ್ಸ್ (39ನೇ ನಿ.) ಏಕೈಕ ಗೋಲು ದಾಖಲಿಸಿದರು.