ಬೆಂಗಳೂರು[ಸೆ.12]: ಕರ್ನಾಟಕದ ರಘು ಪ್ರಸಾದ್, 2020ರ ಟೋಕಿಯೋ ಒಲಿಂಪಿಕ್ ಗೇಮ್ಸ್‌ನ ಹಾಕಿ ಟೂರ್ನಿಯ ಪಂದ್ಯಗಳಿಗೆ ಅಂಪೈರ್ ಆಗಿ ನೇಮಕವಾಗಿದ್ದಾರೆ. 

ಒಲಿಂಪಿಕ್‌ ಟೆಸ್ಟ್‌ ಹಾಕಿ: ಭಾರತ ಚಾಂಪಿಯನ್‌!

ಮೂಲತಃ ಬೆಂಗಳೂರಿನವರಾಗಿರುವ ರಘುಗೆ ಇದು ಅಂಪೈರ್ ಆಗಿ 2ನೇ ಒಲಿಂಪಿಕ್ ಕೂಟವಾಗಿದೆ. ಈ ಹಿಂದೆ ರಘು 2012ರ ಲಂಡನ್ ಒಲಿಂಪಿಕ್ ಗೇಮ್ಸ್‌ನಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. 2003ರಿಂದ ಅಂತಾರಾಷ್ಟ್ರೀಯ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಘು, ಹಾಕಿ ಆಟಗಾರರಾಗಿಯೂ ಆಡಿದ ಅನುಭವ ಹೊಂದಿದ್ದಾರೆ. ಈಗಲೂ ಅಗತ್ಯ ಬಿದ್ದರೇ ಸ್ಥಳೀಯ ಹಾಕಿ ಲೀಗ್ ಪಂದ್ಯಗಳಲ್ಲಿ ಆಟಗಾರರಾಗಿ ಆಡುತ್ತಿದ್ದಾರೆ. ರಾಜ್ಯ ಹಾಕಿ ಟೂರ್ನಿಗಳಲ್ಲಿ ರಘು ಆಡಿದ್ದಾರೆ. 

ಒಲಂಪಿಕ್‌ನಲ್ಲಿ ಚಿನ್ನ ಗೆಲ್ಲುವೆ : PV ಸಿಂಧು

ಬಿಸಿವೈಎ ತಂಡಗಳಲ್ಲಿ ರಘು ಈಗಲೂ ಖಾಯಂ ಆಟಗಾರರಾಗಿದ್ದಾರೆ. ರೈಟ್ ಅಪ್‌ನಲ್ಲಿ ಆಡುವ ರಘು 2001ರಲ್ಲಿ ದೇಸಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಪುರುಷರ ವಿಭಾಗದಲ್ಲಿ ರಘು ಹಾಗೂ ಜಾವೇದ್ ಶೇಕ್ ಒಲಿಂಪಿಕ್‌ನಲ್ಲಿ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಹಿಳಾ ವಿಭಾಗದಲ್ಲಿ ಭಾರತದ ಯಾವೊಬ್ಬ ಅಂಪೈರ್ ಕೂಡ ಸ್ಥಾನ ಪಡೆದಿಲ್ಲ. ಆರೋಗ್ಯ ಅಧಿಕಾರಿಯಾಗಿ ಭಾರತದ ಬಿಬು ನಾಯಕ್ ನೇಮಕಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಬುಧವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್ ಕೂಟದಲ್ಲಿ ಹಾಕಿ ಸ್ಪರ್ಧೆಗಳು ಜುಲೈ 25ರಿಂದ ಆಗಸ್ಟ್ 7 ರವರೆಗೆ ಇರಲಿದೆ. 

ಇ-ತ್ಯಾಜ್ಯದಿಂದ ಸಿದ್ಧಗೊಳ್ಳುತ್ತಿದೆ ಟೋಕಿಯೋ ಒಲಿಂಪಿಕ್ಸ್ ಪದಕ!