ಒಲಿಂಪಿಕ್ಸ್‌ ಹಾಕಿ: ಕ್ವಾರ್ಟರ್‌ನಲ್ಲಿ ಭಾರತಕ್ಕಿಂದು ಬಲಿಷ್ಠ ಬ್ರಿಟನ್‌ ಸವಾಲು

ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿಂದು ಭಾರತ ತಂಡವು ಬಲಿಷ್ಠ ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Paris Olympics 2024 Count down begins for India vs Great Britain hockey quarter finals kvn

ಪ್ಯಾರಿಸ್‌: ಒಲಿಂಪಿಕ್ಸ್‌ನ ಹಾಕಿ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ ಪುರುಷರ ತಂಡ ಭಾನುವಾರ ಬ್ರಿಟನ್‌ ವಿರುದ್ಧ ಸೆಣಸಾಡಲಿದೆ. ಕಳೆದ ಬಾರಿ ಕಂಚು ವಿಜೇತ ಭಾರತ ತಂಡ, ‘ಬಿ’ ಗುಂಪಿನಲ್ಲಿ ಆಡಿದ 5 ಪಂದ್ಯಗಳಲ್ಲಿ 3 ಗೆಲುವು, ತಲಾ ಡ್ರಾ, ಸೋಲಿನೊಂದಿಗೆ 10 ಅಂಕ ಸಂಪಾದಿಸಿ 2ನೇ ಸ್ಥಾನ ಪಡೆದಿತ್ತು.

ಅತ್ತ ಬ್ರಿಟನ್‌ ‘ಎ’ ಗುಂಪಿನಲ್ಲಿ 5 ಪಂದ್ಯಗಳಲ್ಲಿ ತಲಾ 2 ಗೆಲುವು, ಸೋಲು ಹಾಗೂ 1 ಡ್ರಾದೊಂದಿಗೆ 8 ಅಂಕ ಗಳಿಸಿ 3ನೇ ಸ್ಥಾನಿಯಾಗಿತ್ತು. ಭಾರತ ಹಾಗೂ ಬ್ರಿಟನ್‌ ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಕ್ವಾರ್ಟರ್‌ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಭಾರತ ತಂಡ 3-1ರಿಂದ ಗೆದ್ದು ಸೆಮೀಸ್‌ಗೇರಿತ್ತು. ಇಂದು ಮಧ್ಯಾಹ್ನ 1.30ರಿಂದ ಭಾರತ ಹಾಗೂ ಗ್ರೇಟ್ ಬ್ರಿಟನ್‌ ತಂಡಗಳ ನಡುವೆ ಹೈವೋಲ್ಟೇಜ್ ಕದನ ನಡೆಯಲಿದ್ದು, ಸ್ಪೋರ್ಟ್ಸ್‌ 18 ಹಾಗೂ ಜಿಯೋ ಸಿನಿಮಾದಲ್ಲಿ ಈ ಪಂದ್ಯವು ನೇರ ಪ್ರಸಾರವಾಗಲಿದೆ. 

ಬೆಂಗಳೂರು ಬಳಿಯ ನೂತನ ಎನ್‌ಸಿಎ ಉದ್ಘಾಟನೆಗೆ ಸಿದ್ಧ; ಸಿಹಿ ಸುದ್ದಿ ಹಂಚಿಕೊಂಡ ಜಯ್ ಶಾ..!

ಭಾನುವಾರ ಇತರ 3 ಕ್ವಾರ್ಟರ್‌ ಫೈನಲ್‌ಗಳಲ್ಲಿ ಜರ್ಮನಿ-ಅರ್ಜೆಂಟೀನಾ, ಆಸ್ಟ್ರೇಲಿಯಾ-ನೆದರ್‌ಲೆಂಡ್ಸ್‌, ಸ್ಪೇನ್‌-ಬೆಲ್ಜಿಯಂ ಸೆಣಸಾಡಲಿವೆ. ಕಳೆದ ಒಲಿಂಪಿಕ್ಸ್‌ನ ಕ್ವಾರ್ಟರ್‌ನಲ್ಲೂ ಈ 8 ತಂಡಗಳೇ ಪರಸ್ಪರ ಮುಖಾಮುಖಿಯಾಗಿದ್ದವು ಎಂಬುದು ಗಮನಾರ್ಹ. ಬೆಲ್ಜಿಯಂ ಚಾಂಪಿಯನ್‌ ಆಗಿದ್ದರೆ, ಆಸ್ಟ್ರೇಲಿಯಾ ರನ್ನರ್‌-ಅಪ್‌ ಸ್ಥಾನ ಪಡೆದಿತ್ತು.

ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ದೀಪಿಕಾ ಔಟ್‌

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪದಕದ ಭರವಸೆ ಇಟ್ಟುಕೊಂಡಿದ್ದ ಆರ್ಚರಿ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳು ನಿರಾಸೆ ಅನುಭವಿಸಿದ್ದಾರೆ. ಶನಿವಾರ ತಾರಾ ಆರ್ಚರಿ ಪಟು ದೀಪಿಕಾ ಕುಮಾರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. ಇದರೊಂದಿಗೆ ಕ್ರೀಡಾಕೂಟದ ಆರ್ಚರಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ.

ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪ್ರಿ ಕ್ವಾರ್ಟರ್‌ನಲ್ಲಿ ಜರ್ಮನಿಯ ಮಿಚೆಲ್ಲೆ ಕ್ರೊಪ್ಪೆನ್‌ ವಿರುದ್ಧ 6-4 ಅಂತರದಲ್ಲಿ ಗೆದ್ದ ದೀಪಿಕಾ, ಕ್ವಾರ್ಟರ್‌ನಲ್ಲಿ ದ.ಕೊರಿಯಾದ ಸುಹ್ಯೋನ್‌ ನಾಮ್‌ ವಿರುದ್ಧ 4-6ರಲ್ಲಿ ಪರಾಭವಗೊಂಡರು. ಮೊದಲ ಹಾಗೂ 3ನೇ ಸೆಟ್‌ನಲ್ಲಿ ಗೆದ್ದಿದ್ದ ದೀಪಿಕಾ ಸೆಮಿಫೈನಲ್‌ಗೇರುವ ನಿರೀಕ್ಷೆಯಲ್ಲಿದ್ದರು. ಆದರೆ ಕೊನೆ 2 ಸೆಟ್‌ಗಳಲ್ಲಿ ಕಳಪೆ ಆಟವಾಡಿದ ದೀಪಿಕಾ ಸೋಲೊಪ್ಪಿಕೊಂಡರು. ಇದಕ್ಕೂ ಮುನ್ನ ಭಜನ್‌ ಕೌರ್‌ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲೇ ಸೋತಿದ್ದರು. ಭಾರತದಿಂದ ಈ ಬಾರಿ ಒಟ್ಟು 6 ಮಂದಿ ಆರ್ಚರಿಯಲ್ಲಿ ಸ್ಪರ್ಧಿಸಿದ್ದರು. ಆದರೆ ಯಾರೂ ಫೈನಲ್‌ಗೇರಿಲ್ಲ.

ಒಲಿಂಪಿಕ್ಸ್ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್‌ ಸೆಮಿಫೈನಲ್‌ಗೇರಿದ ಮೊದಲ ಭಾರತೀಯ ಎನಿಸಿಕೊಂಡ ಲಕ್ಷ್ಯಸೆನ್‌!

ನಿಶಾಂತ್‌ಗೆ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು

ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ನಿಶಾಂತ್ ದೇವ್ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನುಭವಿಸಿದ್ದು, ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ. ಶನಿವಾರ ರಾತ್ರಿ ಪುರುಷರ ವಿಭಾಗದ 71 ಕೆ.ಜಿ. ಸ್ಪರ್ಧೆಯಲ್ಲಿ 23ರ ನಿಶಾಂತ್, ಮೆಕ್ಸಿಕೋದ ಮಾರ್ಕೊ ವರ್ಡೆ ವಿರುದ್ಧ 1-4 ಅಂತರದಲ್ಲಿ ಸೋಲನುಭವಿಸಿದರು. ಈ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದರೆ ನಿಶಾಂತ್‌ಗೆ ಕನಿಷ್ಠ ಕಂಚಿನ ಪದಕವಾದರೂ ಖಚಿತವಾಗುತ್ತಿತ್ತು. ಬಾಕ್ಸಿಂಗ್‌ನಲ್ಲಿ ಸೆಮೀಸ್ ಗೇರಿದವರಿಗೂ ಕಂಚು ನೀಡಲಾಗುತ್ತದೆ.

Latest Videos
Follow Us:
Download App:
  • android
  • ios