Asianet Suvarna News Asianet Suvarna News

ಬೆಂಗಳೂರು ಬಳಿಯ ನೂತನ ಎನ್‌ಸಿಎ ಉದ್ಘಾಟನೆಗೆ ಸಿದ್ಧ; ಸಿಹಿ ಸುದ್ದಿ ಹಂಚಿಕೊಂಡ ಜಯ್ ಶಾ..!

ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಕುರಿತಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೊಸ ಅಪ್‌ಡೇಟ್ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

45 practice pitches 3 World Class Cricket Ground BCCI secretary Jay Shah announces new NCA in Bengaluru kvn
Author
First Published Aug 4, 2024, 10:57 AM IST | Last Updated Aug 5, 2024, 10:54 AM IST

ಬೆಂಗಳೂರು: ನಗರದ ಹೊರವಲಯದ ದೇವನಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ನೂತನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ) ಉದ್ಘಾಟನೆಗೆ ಸಿದ್ಧವಾಗಿದೆ. ಎರಡೂವರೆ ವರ್ಷಗಳ ಹಿಂದೆ ಆರಂಭಗೊಂಡಿದ್ದ ಅಕಾಡೆಮಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು ಘೋಷಿಸಿದ್ದಾರೆ.

ಅಕಾಡೆಮಿಯ ಕೆಲ ಫೋಟೋಗಳನ್ನು ಕೂಡಾ ಅವರು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಹೊಸ ಎನ್‌ಸಿಎ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಚಾಲನೆ ಸಿಗಲಿದೆ’ ಎಂದು ಅವರು ತಿಳಿಸಿದ್ದಾರೆ. 45 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಅಕಾಡೆಮಿಯಲ್ಲಿ 3 ವಿಶ್ವಶ್ರೇಷ್ಠ ಮೈದಾನಗಳನ್ನು ಹೊಂದಿದ್ದು, 45 ಪ್ರ್ಯಾಕ್ಟೀಸ್ ಪಿಚ್‌, ಒಳಾಂಗಣ ಕ್ರಿಕೆಟ್‌ ಪಿಚ್‌, ಒಲಿಂಪಿಕ್ಸ್‌ ದರ್ಜೆಯ ಈಜುಕೊಳ, ಜಿಮ್‌ ಕೂಡಾ ಇದೆ.

2000ದಿಂದಲೂ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲೇ ಎನ್‌ಸಿಎ ಕಾರ್ಯಾಚರಿಸುತ್ತಿದೆ. ಆದರೆ 2022ರ ಫೆಬ್ರವರಿಯಲ್ಲಿ ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಜಯ್‌ ಶಾ ದೇವನಹಳ್ಳಿ ಬಳಿ ಹೊಸ ಎನ್‌ಸಿಎಗೆ ಶಿಲಾನ್ಯಾಸ ಮಾಡಿದ್ದರು.

ಧೋನಿ-ರೋಹಿತ್ ಇಬ್ಬರಲ್ಲಿ ಯಾರು ಬೆಸ್ಟ್ ಕ್ಯಾಪ್ಟನ್: ಅಚ್ಚರಿ ಉತ್ತರ ಕೊಟ್ಟ ಮಾಜಿ ಕೋಚ್ ರವಿಶಾಸ್ತ್ರಿ..!

ಭಾರತ vs ಶ್ರೀಲಂಕಾ 2ನೇ ಏಕದಿನ ಇಂದು

ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ 2ನೇ ಏಕದಿನ ಪಂದ್ಯ ಭಾನುವಾರ ನಡೆಯಲಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ನಾಟಕೀಯ ರೀತಿಯಲ್ಲಿ ಟೈ ಆಗಿದ್ದರಿಂದ ಈ ಬಾರಿ ಉಭಯ ತಂಡಗಳು ಸರಣಿಯಲ್ಲಿ ಮುನ್ನಡೆ ಸಾಧಿಸಲು ಎದುರು ನೋಡುತ್ತಿದೆ.

ಆರಂಭಿಕ ಪಂದ್ಯದಲ್ಲಿ ಲಂಕಾ ನೀಡಿದ್ದ 231 ರನ್ ಗುರಿಯನ್ನು ಬೆನ್ನತ್ತಲು ಭಾರತ ವಿಫಲವಾಗಿತ್ತು. ಒಂದು ಹಂತದಲ್ಲಿ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿದ್ದರೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದಾಗಿ ತಂಡ ಆಘಾತಕಾರಿ ಸೋಲನುಭವಿಸಿತ್ತು. ಲಂಕಾ ಸ್ಪಿನ್ನರ್‌ಗಳನ್ನು ಎದುರಿಸಲು ಪರದಾಡಿದ್ದ ಭಾರತದ ಬ್ಯಾಟರ್‌ಗಳು ಈ ಪಂದ್ಯದಲ್ಲಾದರೂ ಅಬ್ಬರಿಸಬೇಕಾದ ಅಗತ್ಯವಿದೆ.

ಆರ್‌ಸಿಬಿಗೆ ದೊಡ್ಡ ಶಾಕ್ ಕೊಟ್ಟ ಸ್ಟಾರ್ ಕ್ರಿಕೆಟಿಗ..! ಬೆಂಗಳೂರು ತಂಡ ತೊರೆಯೋದು ಗ್ಯಾರಂಟಿ..?

ರೋಹಿತ್ ಲಯ ಮುಂದುವರಿಸುವ ಕಾತರದಲ್ಲಿದ್ದು, ವಿರಾಟ್ ಕೊಹ್ಲಿ, ಶುಭ್‌ಮನ್ ಗಿಲ್ ಮೇಲೆ ದೊಡ್ಡ ನಿರೀಕ್ಷೆ ಇದೆ. ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ಕೆ.ಎಲ್.ರಾಹುಲ್ ಹಾಗೂ ಶ್ರೇಯಸ್‌ ಅಯ್ಯರ್ ಸ್ಥಾನ ಗಟ್ಟಿಗೊಳಿಸಬೇಕಿದ್ದರೆ ಈ ಸರಣಿಯಲ್ಲಿ ಅಬ್ಬರಿಬೇಕಾದ ಅಗತ್ಯವಿದೆ.

ಅತ್ತ ಲಂಕಾ ಟಿ20 ಸರಣಿ ಕ್ಲೀನ್‌ ಸ್ವೀಪ್ ಮುಖಭಂ ಗಕ್ಕೊಳಗಾಗಿದ್ದು, ಸುಧಾರಿತ ಪ್ರದರ್ಶನ ನೀಡುವ ಮೂಲಕ ಏಕದಿನ ಸರಣಿಯಲ್ಲಿ ಮುನ್ನಡೆ ಸಾಧಿಸುವ ಕಾತರದಲ್ಲಿದೆ. 

ಪಂದ್ಯ ಆರಂಭ: ಮಧ್ಯಾಹ್ನ 2.30 ಗಂಟೆಗೆ
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲೈವ್
 

Latest Videos
Follow Us:
Download App:
  • android
  • ios