ಆರಂಭಿಕ ಮುನ್ನಡೆ ಪಡೆದರೂ ಭಾರತ ಪಂದ್ಯದುದ್ದಕ್ಕೂ ಹಲವು ತಪ್ಪುಗಳನ್ನು ಮಾಡಿ, ಡಚ್ಗೆ ಶರಣಾಯಿತು. ಬಳಿಕ ಕ್ರಾಸ್ ಓವರ್ ಪಂದ್ಯದಲ್ಲಿ ಕೀನ್ಯಾವನ್ನು 9-4 ಗೋಲುಗಳಿಂದ ಸೋಲಿಸಿದ ಭಾರತ, ಬುಧವಾರ 5-6ನೇ ಸ್ಥಾನಕ್ಕೆ ಸೆಣಸಲಿದೆ
ಭಾರತದ ಪರ ಮುಮ್ತಾಜ್ ಖಾನ್ ಹಾಗೂ ದೀಪಿಕಾ ತಲಾ 2 ಗೋಲು ಬಾರಿಸಿದರೆ, ಮತ್ತೊಂದು ಗೋಲನ್ನು ಕುಜುರ್ ಮರಿಯಾನ ಹೊಡೆದರು. ಬುಧವಾರವೇ ನಡೆದ ಮತ್ತೊಂದು ಪಂದ್ಯದಲ್ಲಿ ಭಾರತ ತಂಡ, ಅಮೆರಿಕ ವಿರುದ್ಧ 7-3 ಗೆಲುವು ಸಾಧಿಸಿತು. ‘ಸಿ’ ಗುಂಪಿನಲ್ಲಿರುವ ಭಾರತ, ಗುಂಪು ಹಂತದ ಕೊನೆ ಪಂದ್ಯದಲ್ಲಿ ಗುರುವಾರ ನಮೀಬಿಯಾ ವಿರುದ್ಧ ಆಡಲಿದೆ.
ಭಾರತದ ಜೊತೆ ಗುಂಪಿನಲ್ಲಿ ಬೆಲ್ಜಿಯಂ, ಆಸ್ಟ್ರೇಲಿಯಾ, ಅರ್ಜೆಂಟೀನಾ, ನ್ಯೂಜಿಲೆಂಡ್, ಐರ್ಲೆಂಡ್ ತಂಡಗಳಿವೆ. ‘ಎ’ ಗುಂಪಿನಲ್ಲಿ ನೆದರ್ಲೆಂಡ್ಸ್, ಜರ್ಮನಿ, ಬ್ರಿಟನ್, ಸ್ಪೇನ್, ಫ್ರಾನ್ಸ್, ದ.ಆಫ್ರಿಕಾ ಸ್ಥಾನ ಪಡೆದಿವೆ. ಒಲಿಂಪಿಕ್ಸ್ ಹಾಕಿ ಜು.27ರಿಂದ ಆ.9ರ ವರೆಗೆ ನಡೆಯಲಿದೆ.
ಪಂದ್ಯದ 6ನೇ ನಿಮಿಷದಲ್ಲೇ ಕಾನ ಉರಾಟ ಪೆನಾಲ್ಟಿ ಕಾರ್ನರ್ ಮೂಲಕ ಬಾರಿಸಿದ ಗೋಲು ಜಪಾನ್ ಗೆಲುವನ್ನು ಖಚಿತಪಡಿಸಿತು. ಆ ಬಳಿಕ ಭಾರತ ತೀವ್ರ ಪೈಪೋಟಿ ನೀಡಿದರೂ ಹೊರತಾಗಿಯೂ ಯಾವುದೇ ಗೋಲು ಬಾರಿಸಲಾಗಲಿಲ್ಲ. ಒಟ್ಟು 9 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನೂ ಪಡೆದರೂ, ಭಾರತ ಬಳಸಿಕೊಳ್ಳಲಿಲ್ಲ.
ಗುರುವಾರದ ಸೆಮೀಸ್ ಪಂದ್ಯ ನಿಗದಿತ ಅವಧಿ ಮುಕ್ತಾಯಕ್ಕೆ 2-2 ಗೋಲುಗಳಿಂದ ಸಮಬಲಗೊಂಡಿತು. ಬಳಿಕ ಶೂಟೌಟ್ನ ಮೊದಲ 5 ಪ್ರಯತ್ನಗಳಲ್ಲಿ 3-3 ಟೈ ಆದ ಕಾರಣ ಸಡನ್ ಡೆತ್ ಮೊರೆ ಹೋಗಲಾಯಿತು. 2ನೇ ಪ್ರಯತ್ನದಲ್ಲಿ ಗೋಲು ಬಾರಿಸಿದ ಜರ್ಮನಿ ಫೈನಲ್ ಪ್ರವೇಶಿಸಿತು.
ಆತಿಥೇಯ ಭಾರತ ಟೂರ್ನಿಯಲ್ಲಿ ‘ಬಿ’ ಗುಂಪಿನ ಆರಂಭಿಕ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋತಿದ್ದರೂ. ಬಳಿಕ ನ್ಯೂಜಿಲೆಂಡ್ ಹಾಗೂ ಇಟಲಿಯನ್ನು ಸೋಲಿಸಿ ನಾಕೌಟ್ಗೇರಿದೆ. ಅತ್ತ ಜರ್ಮನಿ ತಂಡ ‘ಎ’ ಗುಂಪಿನಲ್ಲಿ ಆಡಿದ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 1ರಲ್ಲಿ ಡ್ರಾ ಸಾಧಿಸಿ ಅಗ್ರಸ್ಥಾನಿಯಾಗಿಯೇ ಸೆಮೀಸ್ಗೇರಿದೆ. ಗುರುವಾರದ ಮತ್ತೊಂದು ಸೆಮೀಸ್ನಲ್ಲಿ ಜಪಾನ್-ಅಮೆರಿಕ ಮುಖಾಮುಖಿಯಾಗಲಿವೆ.
ಒಲಿಂಪಿಕ್ ಕ್ವಾಲಿಫೈಯರ್ ಪಂದ್ಯ ಆರಂಭಕ್ಕೂ ಮೊದಲು ಇಟಲಿ ಮಹಿಳಾ ಹಾಕಿ ತಂಡ ರಾಂಚಿ ಜಗನ್ನಾಥನ ದರ್ಶನ ಪಡೆದಿದೆ. ಉತ್ತಮ ಪ್ರದರ್ಶನದ ಮೂಲಕ ಒಲಿಂಪಿಕ್ಗೆ ಅರ್ಹತೆ ಪಡೆಯಲು ಸಂಪೂರ್ಣ ತಂಡ ಜಗನ್ನಾಥನ ದರ್ಶನ ಪಡೆದಿದೆ.
ಮಹಿಳಾ ಹಾಕಿ ತಂಡದ ನಾಯಕಿ ಸವಿತಾ ಪೂನಿಯಾ ಶ್ರೇಷ್ಠ ಗೋಲ್ ಕೀಪರ್ ಪ್ರಶಸ್ತಿ ಪಡೆದಿದ್ದಾರೆ. ಇದು ಸವಿತಾಗೆ ಸತತ ಮೂರನೇ ಪ್ರಶಸ್ತಿ. ಇದೇ ವೇಳೆ ಹಾರ್ದಿಕ್ ಸಿಂಗ್ ಪುರುಷರ ವಿಭಾಗದಲ್ಲಿ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ 1-3 ಗೋಲುಗಳ ಸೋಲು ಎದುರಾಯಿತು. ಈ ಹಿಂದಿನ ಆವೃತ್ತಿಯಲ್ಲೂ ಭಾರತ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇನ್ನು ಫೈನಲಲ್ಲಿ ಫ್ರಾನ್ಸ್ ವಿರುದ್ಧ ಗೆದ್ದು ಜರ್ಮನಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಆರಂಭಿಕ ಪಂದ್ಯದಲ್ಲಿ ದ.ಕೊರಿಯಾವನ್ನು ಮಣಸಿದ್ದ ಭಾರತ, ಗುರುವಾರ ನೀರಸ ಪ್ರದರ್ಶನ ತೋರಿತು. ಮೊದಲ 18 ನಿಮಿಷಗಳಲ್ಲೇ 3 ಗೋಲು ಬಾರಿಸಿದ್ದ ಸ್ಪೇನ್ ಭಾರತದ ಹಲವು ಗೋಲು ಗಳಿಕೆ ಪ್ರಯತ್ನವನ್ನು ವಿಫಲಗೊಳಿಸಿತು.