ಆರಂಭಿಕ ಮುನ್ನಡೆ ಪಡೆದರೂ ಭಾರತ ಪಂದ್ಯದುದ್ದಕ್ಕೂ ಹಲವು ತಪ್ಪುಗಳನ್ನು ಮಾಡಿ, ಡಚ್‌ಗೆ ಶರಣಾಯಿತು. ಬಳಿಕ ಕ್ರಾಸ್ ಓವರ್ ಪಂದ್ಯದಲ್ಲಿ ಕೀನ್ಯಾವನ್ನು 9-4 ಗೋಲುಗಳಿಂದ ಸೋಲಿಸಿದ ಭಾರತ, ಬುಧವಾರ 5-6ನೇ ಸ್ಥಾನಕ್ಕೆ ಸೆಣಸಲಿದೆ

ಮಸ್ಕಟ್(ಜ.31): ಎಫ್‌ಐಎಚ್ ಹಾಕಿ ಫೈವ್ಸ್ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊಹಮದ್ ರಾಹೀಲ್ ಹ್ಯಾಟ್ರಿಕ್ ಗೋಲುಗಳ ಹೊರತಾಗಿಯೂ ಭಾರತ, ನೆದರ್‌ಲೆಂಡ್ಸ್ ವಿರುದ್ಧ4-7 ಗೋಲುಗಳ ಸೋಲನುಭವಿಸಿದೆ. ಇದರೊಂದಿಗೆ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆಗುವ ಭಾರತದ ಕನಸು ಭಗ್ನಗೊಂಡಿದೆ. 

ಆರಂಭಿಕ ಮುನ್ನಡೆ ಪಡೆದರೂ ಭಾರತ ಪಂದ್ಯದುದ್ದಕ್ಕೂ ಹಲವು ತಪ್ಪುಗಳನ್ನು ಮಾಡಿ, ಡಚ್‌ಗೆ ಶರಣಾಯಿತು. ಬಳಿಕ ಕ್ರಾಸ್ ಓವರ್ ಪಂದ್ಯದಲ್ಲಿ ಕೀನ್ಯಾವನ್ನು 9-4 ಗೋಲುಗಳಿಂದ ಸೋಲಿಸಿದ ಭಾರತ, ಬುಧವಾರ 5-6ನೇ ಸ್ಥಾನಕ್ಕೆ ಸೆಣಸಲಿದೆ

Scroll to load tweet…

ಪ್ರೊ ಕಬಡ್ಡಿ: ಟೈಟಾನ್ಸ್ ವಿರುದ್ಧ ಪುಣೆ ಜಯಭೇರಿ

ಪಾಟ್ನಾ: 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಪುಣೇರಿ ಪಲ್ಟನ್ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಮಂಗಳವಾರ ನಡೆದ ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಪುಣೆ 60-29 ಅಂಕಗಳ ಬೃಹತ್ ಗೆಲುವು ಸಾಧಿಸಿತು. ಮೊದಲಾರ್ಧದಲ್ಲೇ 29-6 ಅಂಕಗಳ ಮುನ್ನಡೆ ಪಡೆದು ಪುಣೇರಿ ಗೆಲುವನ್ನು ಖಚಿತಪಡಿಸಿಕೊಂಡಿತು. 

U19 World Cup: ಕಿವೀಸ್ ಬಗ್ಗುಬಡಿದು ಸೆಮೀಸ್ ಹೊಸ್ತಿಲಲ್ಲಿ ಭಾರತ

ಇನ್ನು ದ್ವಿತೀಯಾರ್ಧದಲ್ಲಿ 23 ಅಂಕ ಪಡೆದರೂ, ಟೈಟಾನ್ಸ್ ದೊಡ್ಡ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಈ ಜಯದೊಂದಿಗೆ ಪುಣೇರಿ ಪಲ್ಟನ್ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ್ದು, ಪ್ಲೇ-ಆಫ್ ಪ್ರವೇಶಿ ಸುವ ನೆಚ್ಚಿನ ತಂಡಗಳಲ್ಲಿಒಂದೆನಿಸಿದೆ. ಇನ್ನು 17 ಪಂದ್ಯಗಳಲ್ಲಿ 15ನೇ ಸೋಲು ಕಂಡ ಟೈಟಾನ್ಸ್ ಕೊನೆ ಸ್ಥಾನದಲ್ಲೇ ಬಾಕಿಯಾಗಿದೆ. 

ಇಂದಿನ ಪಂದ್ಯಗಳು: ಬೆಂಗಳೂರು-ಪಾಟ್ನಾ, ರಾತ್ರಿ 8ಕ್ಕೆ
ಜೈಪುರ-ತಲೈವಾಸ್, ರಾತ್ರಿ 9ಕ್ಕೆ

ರಾಷ್ಟ್ರೀಯ ಹಿರಿಯರ ಕುಸ್ತಿ: ರಾಜ್ಯಕ್ಕೆ ಐದು ಪದಕ

ಬೆಂಗಳೂರು: ಅಮಾನತುಗೊಂಡಿರುವ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಪುಣೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನ ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಕರ್ನಾಟಕದ ಕುಸ್ತಿಪಟುಗಳು ಒಂದು ಚಿನ್ನ, 3 ಬೆಳ್ಳಿ ಹಾಗೂ 1 ಕಂಚು ಸೇರಿ 5 ಪದಕ ಜಯಿಸಿದ್ದಾರೆ. 

97 ಕೆ.ಜಿ. ವಿಭಾಗದಲ್ಲಿ ಸುನೀಲ್.ಪಿ ಚಿನ್ನ, 70 ಕೆ.ಜಿ. ವಿಭಾಗದಲ್ಲಿ ಮಹೇಶ್. ಎಲ್, 79 ಕೆ.ಜಿ. ವಿಭಾಗದಲ್ಲಿ ಸದಾಶಿವ. ಎನ್, 86 ಕೆ.ಜಿ. ವಿಭಾಗದಲ್ಲಿ ಗೋಪಾಲ ಬೆಳ್ಳಿ ಜಯಿಸಿದ್ದಾರೆ. 74 ಕೆ.ಜಿ. ವಿಭಾಗದಲ್ಲಿ ರೋಹನ್.ಎನ್ ಕಂಚಿಗೆ ತೃಪ್ತಿಪಟ್ಟಿದ್ದಾರೆ. ಪದಕ ವಿಜೇತರನ್ನು ಕರ್ನಾಟಕ ಕುಸ್ತಿ ಸಂಸ್ಥೆ ಅಧ್ಯಕ್ಷ ಗುಣರಂಜನ್ ಶೆಟ್ಟಿ ಅಭಿನಂದಿಸಿದ್ದಾರೆ. 

'ನಂಗೆ ಹುಡುಗೀರಂದ್ರೆ ಇಷ್ಟ': ಮೂರನೇ ಮದುವೆ ಬೆನ್ನಲ್ಲೇ ಶೋಯೆಬ್ ಮಲಿಕ್ ಹಳೇ ವಿಡಿಯೋ ವೈರಲ್..!

ಭಾರತೀಯ ಒಲಿಂಪಿಕ್ಸ್ ಸಂಸ್ಥೆಯಿಂದ ನೇಮಕಗೊಂಡಿರುವ ಡಬ್ಲ್ಯುಎಫ್‌ಐನ ತಾತ್ಕಾಲಿಕ ಆಡಳಿತ ಸಮಿತಿಯು ಫೆ.2ರಿಂದ 5ರ ವರೆಗೂ ಜೈಪುರದಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ನಡೆಸಲಿದ್ದು, ರಾಜ್ಯದ ಕುಸ್ತಿಪಟುಗಳು ಅದರಲ್ಲೂ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ