ಕೊಡವ ಹಾಕಿ ಅಕಾಡೆಮಿ 26 ವರ್ಷಗಳ ಹಿಂದೆ ಕೊಡವ ಹಾಕಿ ಹಬ್ಬದ ಜನಕ ದಿ. ಪಾಂಡಂಡ ಕುಟ್ಟಣಿ ಅವರ ನೇತೃತ್ವದಲ್ಲಿ 1997 ರಲ್ಲಿ ಸ್ಥಾಪಿತಗೊಂಡಿತು. ಅಂದಿನಿಂದ ಇಂದಿನವರೆಗೆ ಹಾಕಿ ಹಬ್ಬ ನಡೆಯುತ್ತಿದೆ ಎಂದರು.

ಮಡಿಕೇರಿ(ಮಾ.23) ಕೊಡವ ಕುಟುಂಬಗಳ ನಡುವಿನ ಪ್ರತಿಷ್ಠಿತ ಕುಂಡ್ಯೋಳಂಡ ಹಾಕಿ ಹಬ್ಬ ಮಾ.30 ರಿಂದ ಏ.28ರ ವರೆಗೆ ನಾಪೋಕ್ಲು ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ದಾಖಲೆಯ 360 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ಕೂರ್ಗ್ 11 ಮತ್ತು ಇಂಡಿಯನ್ ನೇವಿ ನಡುವೆ ಉದ್ಘಾಟನಾ ಪಂದ್ಯ ಆಯೋಜಿಸಲಾಗಿದೆ.

ಈ ಬಗ್ಗೆ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ, ಕ್ರೀಡಾಕೂಟದ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಅಧ್ಯಕ್ಷ ರಮೇಶ್ ಮುದ್ದಯ್ಯ ಹಾಗೂ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕೊಡವ ಹಾಕಿ ಅಕಾಡೆಮಿ 26 ವರ್ಷಗಳ ಹಿಂದೆ ಕೊಡವ ಹಾಕಿ ಹಬ್ಬದ ಜನಕ ದಿ. ಪಾಂಡಂಡ ಕುಟ್ಟಣಿ ಅವರ ನೇತೃತ್ವದಲ್ಲಿ 1997 ರಲ್ಲಿ ಸ್ಥಾಪಿತಗೊಂಡಿತು. ಅಂದಿನಿಂದ ಇಂದಿನವರೆಗೆ ಹಾಕಿ ಹಬ್ಬ ನಡೆಯುತ್ತಿದೆ ಎಂದರು.

ಹಾಕಿ ಹಬ್ಬದೊಂದಿಗೆ ಮ್ಯಾರಥಾನ್ ಓಟ, ವಧು-ವರರ ಸಮಾವೇಶ, ಆಹಾರ ಉತ್ಸವ, ಆರೋಗ್ಯ ಶಿಬಿರ, ವೃತ್ತಿ ಮಾರ್ಗದರ್ಶನ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಕಿ ಆಟಗಾರರ ಪುನರ್‌ಮಿಲನ ಮತ್ತು ಬಾಳೋಪಾಟ್ ತರಬೇತಿ ಮತ್ತಿತರ ಕಾರ್ಯಕ್ರಮಗಳು ಕೂಡ ನಡೆಯಲಿವೆ ಎಂದು ಮಾಹಿತಿ ನೀಡಿದರು.

IPL 2024: ಡೆಲ್ಲಿ ಕ್ಯಾಪಿಟಲ್ಸ್‌ಗಿಂದು ಪಂಜಾಬ್ ಕಿಂಗ್ಸ್ ಚಾಲೆಂಜ್‌

ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿ: ಭಾರತ vs ಆಫ್ಘಾನ್ 0-0 ಡ್ರಾ

ಅಭಾ(ಸೌದಿ ಅರೇಬಿಯಾ): ಭಾರತ ಫುಟ್ಬಾಲ್ ತಂಡದ ಕಳಪೆ ಪ್ರದರ್ಶನ ಮುಂದುವರಿದಿದ್ದು, ಫಿಫಾ ಫುಟ್ಬಾಲ್ ವಿಶ್ವಕಪ್‌ನ 2ನೇ ಸುತ್ತಿನ ಅರ್ಹತಾ ಟೂರ್ನಿಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ವಿಶ್ವ ರ್ಯಾಂಕಿಂಗ್‌ನಲ್ಲಿ 158ನೇ ಸ್ಥಾನದಲ್ಲಿರುವ ಆಫ್ಘನ್ ವಿರುದ್ಧ ಗೆಲ್ಲುವ ನಿರೀಕ್ಷೆಯಲ್ಲಿದ್ದ ಭಾರತ, ಗುರುವಾರ ಮಧ್ಯರಾತ್ರಿ ನಡೆದ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿತು. 

ಸ್ವಿಸ್ ಓಪನ್‌: ಸಿಂಧು, ಸೆನ್‌ ಔಟ್‌, ಕಿದಂಬಿ ಕ್ವಾರ್ಟರ್‌ಗೆ ಲಗ್ಗೆ

ಪಂದ್ಯದುದ್ದಕ್ಕೂ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಹೊರತಾಗಿಯೂ ಗೋಲು ಗಳಿಕೆಯಲ್ಲಿ ಭಾರತಕ್ಕೆ ಯಶಸ್ಸು ಸಿಗಲಿಲ್ಲ. ವಿಶ್ವ ನಂ.117 ಭಾರತ ‘ಎ’ ಗುಂಪಿನಲ್ಲಿ ಆಡಿದ 3 ಪಂದ್ಯಗಳಲ್ಲಿ ತಲಾ ೧ ಜಯ, ಸೋಲು, ಡ್ರಾದೊಂದಿಗೆ 4 ಅಂಕ ಸಂಪಾದಿಸಿದ್ದು, 2ನೇ ಸ್ಥಾನದಲ್ಲಿದೆ. ಕತಾರ್(9 ಅಂಕ) ಅಗ್ರಸ್ಥಾನದಲ್ಲಿದ್ದು, ಕುವೈತ್(3 ಅಂಕ) ಹಾಗೂ ಅಫ್ಘಾನಿಸ್ತಾನ(1 ಅಂಕ) ಕ್ರಮವಾಗಿ 3, 4ನೇ ಸ್ಥಾನಗಳಲ್ಲಿವೆ. ಮಾ.26ಕ್ಕೆ ಭಾರತ ಮತ್ತೆ ಆಫ್ಘನ್ ವಿರುದ್ಧ ಆಡಲಿದೆ

16 ತಿಂಗಳ ಬಳಿಕ ರಾಷ್ಟ್ರೀಯ ಶಿಬಿರಕ್ಕೆ ಡಬ್ಲ್ಯುಎಫ್‌ಐ ಸಜ್ಜು

ನವದೆಹಲಿ: ಭಾರತೀಯ ಒಲಿಂಪಿಕ್‌ ಸಂಸ್ಥೆಯು ಸ್ವತಂತ್ರ ಸಮಿತಿಯನ್ನು ವಿಸರ್ಜಿಸಿದ ಬಳಿಕ ಭಾರತೀಯ ಕುಸ್ತಿ ಒಕ್ಕೂಟದ ಅಧಿಕಾರವನ್ನು ಮರಳಿ ಪಡೆದಿರುವ ಸಂಜಯ್ ಸಿಂಗ್‌ ನೇತೃತ್ವದ ಹೊಸ ಸಮಿತಿಯು ಮಾ.27ರಿಂದ ರಾಷ್ಟ್ರೀಯ ಶಿಬಿರ ಆಯೋಜಿಸಲಿದೆ.

ಇದು ಕಳೆದ 16 ತಿಂಗಳಲ್ಲೇ ಡಬ್ಲ್ಯುಎಫ್‌ಐ ನಡೆಸುತ್ತಿರುವ ಮೊದಲ ರಾಷ್ಟ್ರೀಯ ಶಿಬಿರ. 2023ರ ಜನವರಿಯಲ್ಲಿ ಡಬ್ಲ್ಯುಎಫ್‌ಐನ ಆಗಿನ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಅತ್ಯಾಚಾರ, ಬೆದರಿಕೆ ಆರೋಪ ಹೊರಿಸಿ ದೇಶದ ಅಗ್ರ ಕುಸ್ತಿಪಟುಗಳು ಪ್ರತಿಭಟನೆ ಆರಂಭಿಸಿದ್ದರು.

ಆ ಬಳಿಕ ಡಬ್ಲ್ಯುಎಫ್‌ಐ ಯಾವುದೇ ಶಿಬಿರ ಆಯೋಜಿಸಿಲ್ಲ. ಈ ನಡುವೆ ಡಬ್ಲ್ಯುಎಫ್‌ಐ ಅನ್ನು ನಿಯಂತ್ರಿಸುತ್ತಿದ್ದ ಸ್ವತಂತ್ರ ಸಮಿತಿಯು ಇತ್ತೀಚೆಗೆ ರಾಷ್ಟ್ರೀಯ ಶಿಬಿರ ಆಯೋಜಿಸಿತ್ತು.