ಮದುವೆಯಾಗೋದಾಗಿ ನಂಬಿಸಿ ವಂಚನೆ ಆರೋಪ; ಭಾರತ ಹಾಕಿ ಆಟಗಾರನ ಮೇಲೆ ಪೋಕ್ಸೊ ಪ್ರಕರಣ ದಾಖಲು!
ಮದುವೆಯಾಗುವುದಾಗಿ ನಂಬಿಸಿ ಯುವತಿ ವಂಚಿಸಿರುವ ಆರೋಪ ಹಿನ್ನೆಲೆ ಭಾರತೀಯ ಹಾಕಿ ತಂಡದ ಡಿಫೆಂಡರ್ ಆಗಿರುವ ವರುಣ್ ಕುಮಾರ್ ವಿರುದ್ಧ ಜ್ಙಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು (ಫೆ.6): ಮದುವೆಯಾಗುವುದಾಗಿ ನಂಬಿಸಿ ಯುವತಿ ವಂಚಿಸಿರುವ ಆರೋಪ ಹಿನ್ನೆಲೆ ಭಾರತೀಯ ಹಾಕಿ ತಂಡದ ಡಿಫೆಂಡರ್ ಆಗಿರುವ ವರುಣ್ ಕುಮಾರ್ ವಿರುದ್ಧ ಜ್ಙಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮೂಲತಃ ಹಿಮಾಚಲ ಪ್ರದೇಶದವನಾಗಿರುವ ಆರೋಪಿ ವರುಣ್ ಕುಮಾರ್, ಹಾಕಿ ಪಂದ್ಯದ ವೇಳೆ ಬೆಂಗಳೂರಿನ ಜ್ಙಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾಗ ಯುವತಿ ಪರಿಚಯವಾಗಿದ್ದಾನೆ. ಪರಿಚಯ ಪ್ರೀತಿಗೆ ತಿರುಗಿದೆ. ಯುವತಿ 16 ವರ್ಷದವಳಾಗಿದ್ದಾಗಲೇ ಪ್ರೀತಿ ಮಾಡಿದ್ದ ಆರೋಪಿ. 2019 ರಿಂದಲೂ ಸೋಷಿಯಲ್ ಮೀಡಿಯಾ ಮೂಲಕ ಯುವತಿಯೊಂದಿಗೆ ಸಂಪರ್ಕದಲ್ಲಿ ಆರೋಪಿ. ಮದುವೆಯಾಗೋದಾಗಿ ನಂಬಿಸಿ ಕಳೆದ ಐದು ವರ್ಷಗಳಲ್ಲಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆಂದು ಸಂತ್ರಸ್ತೆ ಆರೋಪ ಮಾಡಿದ್ದಾರೆ.
ಗದಗ: ವಿದ್ಯಾರ್ಥಿನಿ ಮೊಬೈಲ್‌ಗೆ ಅಶ್ಲೀಲ ಫೋಟೊ, ಪೊಲೀಸರಿಂದಲೇ ಯುವತಿಗೆ ಕಿರುಕುಳ!
ಇನ್ನು 2017ರಲ್ಲಿ ಭಾರತ ತಂಡದ ಪರ ಹಾಕಿ ಆಟಕ್ಕೆ ಪಾದಾರ್ಪಣೆ ಮಾಡಿದ್ದ ವರುಣ್ ಕುಮಾರ್ ಹಾಕಿ ಇಂಡಿಯಾ ಲೀಗ್ ಪಂಜಾಬ್ ವಾರಿಯರ್ ತಂಡವನ್ನು ಪ್ರತಿನಿಧಿಸಿ ಹಲವು ರಾಷ್ಟ್ರಮಟ್ಟ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಹಾಕಿ ತಂಡದಲ್ಲಿ ಆಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಭಾರತೀಯ ಹಾಕಿ ತಂಡದಲ್ಲಿ ಒಬ್ಬರಾಗಿದ್ದ ಆರೋಪಿ ವರುಣ್ ಕುಮಾರ್.
ಸ್ನೇಹಿತನ ಮಾತು ಕೇಳಿ ಹುಡುಗಿಯ ಮೈಮುಟ್ಟಿ ಅಸಭ್ಯ ವರ್ತನೆ; ಪರಪ್ಪನ ಅಗ್ರಹಾರ ಸೇರಿದ ಕಾಮುಕ
2020 ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದ ಸಾಧನೆಗೆ ಹಿಮಾಚಲ ಪ್ರದೇಶ ಸರ್ಕಾರ ವರುಣ್ ಕುಮಾರ್‌ಗೆ 1 ಕೋಟಿ ಬಹುಮಾನ ಘೋಷಿಸಿತ್ತು. 2021 ನೇ ಸಾಲಿನ ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದರು. 2022ರ ಬರ್ಮಿಂಗ್ ಹ್ಯಾಂ - ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ, 2022 ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದರು. ಇಂತಹ ಉದಯೋನ್ಮುಖ ಹಾಕಿ ಆಟಗಾರನ ವಿರುದ್ಧ ಇದೀಗ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಸದ್ಯ ಆರೋಪಿ ವರುಣ್ ಕುಮಾರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.