IPL 2024: ಡೆಲ್ಲಿ ಕ್ಯಾಪಿಟಲ್ಸ್‌ಗಿಂದು ಪಂಜಾಬ್ ಕಿಂಗ್ಸ್ ಚಾಲೆಂಜ್‌

ನಾಯಕ ರಿಷಭ್ ಪಂತ್ 15 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ ಗೆ ಮರಳುತ್ತಿರುವುದು ಡೆಲ್ಲಿಗೆ ನೈತಿಕ ಬಲ ಒದಗಿಸಿದೆ. ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ಟ್ರಿಸ್ಟನ್ ಸ್ಟಬ್ಸ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಬೌಲಿಂಗ್ ವಿಭಾಗದಲ್ಲಿ ಏನ್ರಿಚ್ ನೋಕಿಯಾ, ಮುಕೇಶ್ ಕುಮಾರ್, ಕುಲ್ದೀಪ್, ಅಕ್ಷರ್ ಪಟೇಲ್ ಅಸಾಧಾರಣ ಪ್ರದರ್ಶನ ನೀಡಬೇಕಿದೆ.

IPL 2024 Delhi Capitals take on Punjab Kings challenge in Chandigarh kvn

ಚಂಡೀಗಢ: ಈ ವರೆಗೂ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗಿರುವ ಡೆಲ್ಲಿ ಕ್ಯಾಪಿಟಲ್ಸ್ -ಪಂಜಾಬ್ ಕಿಂಗ್ಸ್ 17ನೇ ಆವೃತ್ತಿ ಟೂರ್ನಿಯಲ್ಲಿ ಶನಿವಾರ ಮುಖಾಮುಖಿಯಾಗಲಿವೆ. ಪಂದ್ಯಕ್ಕೆ ಪಂಜಾಬ್‌ನ ಹೊಸ ತವರು ಮುಲ್ಲಾನ್ಪುರ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ನಾಯಕ ರಿಷಭ್ ಪಂತ್ 15 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ ಗೆ ಮರಳುತ್ತಿರುವುದು ಡೆಲ್ಲಿಗೆ ನೈತಿಕ ಬಲ ಒದಗಿಸಿದೆ. ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ಟ್ರಿಸ್ಟನ್ ಸ್ಟಬ್ಸ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಬೌಲಿಂಗ್ ವಿಭಾಗದಲ್ಲಿ ಏನ್ರಿಚ್ ನೋಕಿಯಾ, ಮುಕೇಶ್ ಕುಮಾರ್, ಕುಲ್ದೀಪ್, ಅಕ್ಷರ್ ಪಟೇಲ್ ಅಸಾಧಾರಣ ಪ್ರದರ್ಶನ ನೀಡಬೇಕಿದೆ.

IPL 2024: ಚಾಂಪಿಯನ್‌ಗೆ ಚೆನ್ನೈಗೆ ತಲೆಬಾಗಿದ ಆರ್‌ಸಿಬಿ!

ಅತ್ತ ಪಂಜಾಬ್ ಕಳೆದ 5 ಆವೃತ್ತಿಗಳಲ್ಲಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕಿಂತ ಮೇಲೇರಿಲ್ಲ. ಲಿಯಾಮ್‌ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರನ್, ಸಿಕಂದರ್ ರಾಜಾ ತಂಡದಲ್ಲಿರುವ ತಜ್ಞ ಆಲ್ರೌಂಡರ್‌ಗಳು. ಕನ್ನಡಿಗ ವೇಗಿ ವಿದ್ವತ್ ಕಾವೇರಪ್ಪ ಆಡುವ ಅವಕಾಶ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಐಪಿಎಲ್ ಇತಿಹಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಒಟ್ಟು 32 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಉಭಯ ತಂಡಗಳು ಸಮಬಲದ ಪ್ರದರ್ಶನ ತೋರಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು 16 ಪಂದ್ಯಗಳನ್ನು ಜಯಿಸಿದರೆ, ಪಂಜಾಬ್ ಕಿಂಗ್ಸ್ ತಂಡವು ಕೂಡಾ 16 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ವಿರಾಟ್ ಕೊಹ್ಲಿಗೆ ಸಪೋರ್ಟ್ ಮಾಡಲು ಮಗ ಅಕಾಯ್ ಜತೆ ಅನುಷ್ಕಾ ಶರ್ಮಾ ಭಾರತಕ್ಕೆ ಬರ್ತಾರಾ?

ಸಂಭವನೀಯ ಆಟಗಾರರ ಪಟ್ಟಿ ಹೀಗಿದೆ:

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚಲ್ ಮಾರ್ಷ್, ರಿಷಭ್ ಪಂತ್(ನಾಯಕ), ಟ್ರಿಸ್ಟಿನ್ ಸ್ಟಬ್ಸ್, ಅಕ್ಷರ್ ಪಟೇಲ್, ಕುಮಾರ್ ಕುಶಾಗ್ರ, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್, ಏನ್ರಿಚ್ ನೋಕಿಯಾ, ಖಲೀಲ್ ಅಹಮ್ಮದ್.

ಪಂಜಾಬ್ ಕಿಂಗ್ಸ್‌: ಶಿಖರ್ ಧವನ್(ನಾಯಕ), ಜಾನಿ ಬೇರ್‌ಸ್ಟೋವ್, ಪ್ರಭ್‌ಸಿಮ್ರನ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಸ್ಯಾಮ್ ಕರ್ರನ್, ಹರ್‌ಪ್ರೀತ್, ಹರ್ಷಲ್ ಪಟೇಲ್, ಕಗಿಸೋ ರಬಾಡ, ಅರ್ಶ್‌ದೀಪ್ ಸಿಂಗ್, ರಾಹುಲ್ ಚಹರ್.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ, ಸ್ಟಾರ್ ಸ್ಪೋರ್ಟ್ಸ್ & ಜಿಯೋ ಸಿನಿಮಾ
 

Latest Videos
Follow Us:
Download App:
  • android
  • ios