ಸ್ವಿಸ್ ಓಪನ್‌: ಸಿಂಧು, ಸೆನ್‌ ಔಟ್‌, ಕಿದಂಬಿ ಕ್ವಾರ್ಟರ್‌ಗೆ ಲಗ್ಗೆ

ಮಾಜಿ ವಿಶ್ವ ನಂ.1 ಶ್ರೀಕಾಂತ್‌ ಪುರುಷರ ಸಿಂಗಲ್ಸ್‌ನಲ್ಲಿ ಮಲೇಷ್ಯಾದ ಲೀ ಜೀಜಿಯಾ ವಿರುದ್ಧ 21-16, 21-15ರಲ್ಲಿ ಗೆದ್ದರೆ, ಪ್ರಿಯಾನ್ಶುಗೆ ಚೀನಾದ ಲೀ ಲಾ ಕ್ಷಿ ವಿರುದ್ಧ 21-14, 21-13ರಲ್ಲಿ ಜಯ ಲಭಿಸಿತು. ಜಾರ್ಜ್‌ ಫ್ರಾನ್ಸ್‌ನ ಅಲೆಕ್ಸ್‌ ಲೇನಿಯರ್‌ ವಿರುದ್ಧ 18-21, 22-20, 21-18ರಲ್ಲಿ ಗೆದ್ದು ಅಂತಿಮ 8ರ ಘಟ್ಟ ಪ್ರವೇಶಿಸಿದರು.

PV Sindhu Lakshya Sen Bow Out Kidambi Srikanth In Quarterfinals Of Swiss Open kvn

ಬಾಸೆಲ್‌(ಸ್ವಿಜರ್‌ಲೆಂಡ್‌): ಭಾರತದ ತಾರಾ ಶಟ್ಲರ್‌ಗಳಾದ ಕಿದಂಬಿ ಶ್ರೀಕಾಂತ್‌, ಪ್ರಿಯಾನ್ಶು ರಾಜಾವತ್‌, ಕಿರಣ್‌ ಜಾರ್ಜ್‌ ಸ್ವಿಸ್‌ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೇರಿದ್ದಾರೆ. ಆದರೆ ಪದಕ ಬರ ಎದುರಿಸುತ್ತಿದ್ದ ಪಿ.ವಿ.ಸಿಂಧು, ಲಕ್ಷ್ಯ ಸೇನ್‌ ಸೋತು ಹೊರಬಿದ್ದಿದ್ದಾರೆ.

ಮಾಜಿ ವಿಶ್ವ ನಂ.1 ಶ್ರೀಕಾಂತ್‌ ಪುರುಷರ ಸಿಂಗಲ್ಸ್‌ನಲ್ಲಿ ಮಲೇಷ್ಯಾದ ಲೀ ಜೀಜಿಯಾ ವಿರುದ್ಧ 21-16, 21-15ರಲ್ಲಿ ಗೆದ್ದರೆ, ಪ್ರಿಯಾನ್ಶುಗೆ ಚೀನಾದ ಲೀ ಲಾ ಕ್ಷಿ ವಿರುದ್ಧ 21-14, 21-13ರಲ್ಲಿ ಜಯ ಲಭಿಸಿತು. ಜಾರ್ಜ್‌ ಫ್ರಾನ್ಸ್‌ನ ಅಲೆಕ್ಸ್‌ ಲೇನಿಯರ್‌ ವಿರುದ್ಧ 18-21, 22-20, 21-18ರಲ್ಲಿ ಗೆದ್ದು ಅಂತಿಮ 8ರ ಘಟ್ಟ ಪ್ರವೇಶಿಸಿದರು.

ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು, ಜಪಾನ್‌ನ 17ರ ಟೊಮೊಕಾ ಮಿಯಾಜಕಿ ವಿರುದ್ಧ 21-16, 19-21,16-21ರಲ್ಲಿ ಸೋಲುಂಡರು. ಸೇನ್‌ ಪುರುಷರ ಸಿಂಗಲ್ಸ್‌ನಲ್ಲಿ ಚೈನೀಸ್‌ ತೈಪೆಯ ಲೀ ಚಿಯಾ ಹೊ ವಿರುದ್ಧ 17-21, 15-21ರಲ್ಲಿ ಪರಾಭವಗೊಂಡರು. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ಟೊ ಕೂಡಾ ಸೋತು ಹೊರಬಿದ್ದರು.

IPL 2024: ಚಾಂಪಿಯನ್‌ಗೆ ಚೆನ್ನೈಗೆ ತಲೆಬಾಗಿದ ಆರ್‌ಸಿಬಿ!

ರಾಷ್ಟ್ರೀಯ ಪುರುಷರ ಕಬಡ್ಡಿ: ರಾಜ್ಯಕ್ಕೆ ಸತತ 2ನೇ ಜಯ

ಅಹ್ಮದ್‌ನಗರ(ಮಹಾರಾಷ್ಟ್ರ): ಇಲ್ಲಿ ನಡೆಯುತ್ತಿರುವ 70ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸತತ 2ನೇ ಗೆಲುವು ದಾಖಲಿಸಿದೆ. ಗುರುವಾರ ‘ಎಫ್‌’ ಗುಂಪಿನ ಮೊದಲ ಪಂದ್ಯದಲ್ಲಿ ರಾಜ್ಯ ತಂಡಕ್ಕೆ ಚತ್ತೀಸ್‌ಗಢ ವಿರುದ್ಧ 54-33 ಅಂಕಗಳ ಭರ್ಜರಿ ಗೆಲುವು ಲಭಿಸಿತು. ಶುಕ್ರವಾರ ನಡೆದ 2ನೇ ಪಂದ್ಯದಲ್ಲಿ ಕರ್ನಾಟಕ ತಂಡ ತೆಲಂಗಾಣವನ್ನು 49-32 ಅಂಕಗಳಿಂದ ಸೋಲಿಸಿತು.

ಜಾವೆಲಿನ್‌: ಕರ್ನಾಟಕದ ಕರಿಶ್ಮಾ, ರಮ್ಯಶ್ರೀಗೆ ಬೆಳ್ಳಿ

ಪಟಿಯಾಲಾ: ಇಲ್ಲಿ ನಡೆದ 3ನೇ ಆವೃತ್ತಿಯ ರಾಷ್ಟ್ರೀಯ ಓಪನ್‌ ಥ್ರೋ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಇಬ್ಬರು ಜಾವೆಲಿನ್‌ ಎಸೆತದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಮಹಿಳೆಯರ ಜಾವೆಲಿನ್‌ ಥ್ರೋನಲ್ಲಿ ರಾಜ್ಯದ ಕರೀಶ್ಮಾ ಸನಿಲ್‌ ಅವರು 51.02 ಮೀ. ದೂರ ದಾಖಲಿಸಿ 2ನೇ ಸ್ಥಾನಿಯಾದರು. ಮಹಿಳೆಯರ ಅಂಡರ್‌-20 ಜಾವೆಲಿನ್‌ ಥ್ರೋನಲ್ಲಿ ರಮ್ಯಶ್ರೀ ಜೈನ್‌ 46.37 ಮೀ. ದೂರದೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಭೇಟಿಕೊಟ್ಟ ಕೇಶವ್ ಮಹಾರಾಜ್..! ಜೈ ಶ್ರೀರಾಮ್ ಎಂದು ಘರ್ಜಿಸಿದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ

ಥಾಮಸ್ ಕಪ್‌: ಭಾರತಕ್ಕೆ ‘ಸಿ’ ಗುಂಪಿನಲ್ಲಿ ಸ್ಥಾನ

ಚೆಂಗ್ಡು(ಚೀನಾ): ಏ.27ರಿಂದ ಮೇ 5ರ ವರೆಗೆ ಚೀನಾದ ಚೆಂಗ್ಡು ನಗರದಲ್ಲಿ ನಡೆಯಲಿರುವ ಪ್ರತಿಷ್ಠಿತ ಬಿಡಬ್ಲ್ಯುಎಫ್‌ ಥಾಮಸ್ ಕಪ್‌ ಪುರುಷರ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಭಾರತ ‘ಸಿ’ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಗುಂಪಿನಲ್ಲಿ ಇಂಡೋನೇಷ್ಯಾ, ಥಾಯ್ಲೆಂಡ್‌ ಹಾಗೂ ಇಂಗ್ಲೆಂಡ್‌ ತಂಡಗಳಿವೆ. ಇದೇ ವೇಳೆ ಉಬರ್‌ ಕಪ್‌ ಮಹಿಳೆಯರ ಟೂರ್ನಿಯಲ್ಲಿ ಭಾರತ ತಂಡ ‘ಎ’ ಗುಂಪಿನಲ್ಲಿವೆ. ಚೀನಾ, ಕೆನಡಾ ಹಾಗೂ ಸಿಂಗಾಪೂರ ಕೂಡಾ ಇದೇ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಎರಡೂ ವಿಭಾಗಗಳಲ್ಲಿ ತಲಾ 16 ತಂಡಗಳು ಸ್ಪರ್ಧಿಸಲಿವೆ.

Latest Videos
Follow Us:
Download App:
  • android
  • ios