ಆಕ್ಲೆಂಡ್‌(ಜ.26): ಭಾರತ ಮಹಿಳಾ ಹಾಕಿ ತಂಡ, ನ್ಯೂಜಿಲೆಂಡ್‌ ಪ್ರವಾಸವನ್ನು ಜಯದೊಂದಿಗೆ ಆರಂಭಿಸಿದೆ. ಒಲಿಂಪಿಕ್‌ ವರ್ಷದ ಮೊದಲ ಪ್ರವಾಸದ ಪ್ರಥಮ ಪಂದ್ಯದಲ್ಲಿ ರಾಣಿ ರಾಂಪಾಲ್‌ 4-0 ಗೋಲುಗಳಲ್ಲಿ ಗೆದ್ದಿದೆ.

ಕಿವೀಸ್‌ ಪ್ರವಾಸ: ಭಾರತ ಮಹಿಳಾ ಹಾಕಿ ತಂಡ ಪ್ರಕಟ

ಶನಿವಾರ ನಡೆದ ಪಂದ್ಯದಲ್ಲಿ ರಾಣಿ 2 ಆಕರ್ಷಕ ಗೋಲು ಬಾರಿಸಿ ಜಯದಲ್ಲಿ ಮಹತ್ವದ ಪಾತ್ರವಹಿಸಿದರು. ಶರ್ಮಿಳಾ ಮತ್ತು ನಮಿತಾ ಟೊಪ್ಪೊ ತಲಾ 1 ಗೋಲುಗಳಿಸಿ ಜಯದ ಅಂತರವನ್ನು ಹೆಚ್ಚಿಸಿದರು.

ಪ್ರೊ ಲೀಗ್ ಹಾಕಿ: ಶೂಟೌಟಲ್ಲಿ ಗೆದ್ದ ಭಾರತ!

ಈ ಪ್ರವಾಸದಲ್ಲಿ ಭಾರತ ಆತಿಥೇಯ ನ್ಯೂಜಿಲೆಂಡ್‌ ವಿರುದ್ಧ ಒಟ್ಟು 4 ಹಾಗೂ ಗ್ರೇಟ್‌ ಬ್ರಿಟನ್‌ ವಿರುದ್ಧ 1 ಪಂದ್ಯವನ್ನಾಡಲಿದೆ.