Asianet Suvarna News Asianet Suvarna News

ಪ್ರೊ ಲೀಗ್ ಹಾಕಿ: ಶೂಟೌಟಲ್ಲಿ ಗೆದ್ದ ಭಾರತ!

ಎಫ್‌ಐಎಚ್‌ ಪ್ರೊ ಲೀಗ್‌ ಟೂರ್ನಿಯಲ್ಲಿ ಹಾಕಿ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲೂ ಮಿಂಚಿನ ಪ್ರದರ್ಶನ ತೋರುವ ಮೂಲಕ ಜಯಭೇರಿ ಬಾರಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

Hockey Team India beats Netherlands in penalty shootout
Author
Bhubaneswar, First Published Jan 20, 2020, 12:52 PM IST
  • Facebook
  • Twitter
  • Whatsapp

ಭುವನೇಶ್ವರ(ಜ.20): ಭಾರತ ಪುರುಷರ ಹಾಕಿ ತಂಡಎಫ್‌ಐಎಚ್‌ ಪ್ರೊ ಲೀಗ್‌ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ನೆದರ್‌ಲ್ಯಾಂಡ್ಸ್‌ ವಿರುದ್ಧದ ಮುಖಾಮುಖಿಯ ಎರಡೂ ಪಂದ್ಯಗಳನ್ನು ಗೆದ್ದು 5 ಅಂಕ ಸಂಪಾದಿಸಿದೆ. 

ಪ್ರೊ ಲೀಗ್‌ ಹಾಕಿ: ನೆದರ್‌ಲ್ಯಾಂಡ್ ಎದುರು ಭಾರತ ಜಯಭೇರಿ

ಭಾನುವಾರ ನಡೆದ 2ನೇ ಪಂದ್ಯದ 50ನೇ ನಿಮಿಷದ ವರೆಗೂ 1-3 ಗೋಲುಗಳಿಂದ ಹಿಂದಿದ್ದ ಭಾರತ, ಬಳಿಕ ಪುಟಿದೆದ್ದು 3-3ರಲ್ಲಿ ಸಮಬಲ ಸಾಧಿಸಿತು. ಈ ಕಾರಣ, ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಅದರಲ್ಲಿ ಭಾರತ 3-1 ಗೋಲುಗಳಲ್ಲಿ ಜಯಿಸಿ ಸಂಭ್ರಮಿಸಿತು.

ಮೊದಲ ಪಂದ್ಯದಲ್ಲಿ 5-2 ಗೋಲುಗಳ ಭರ್ಜರಿ ಗೆಲುವು ಸಾಧಿಸಿದ್ದ ಭಾರತ 3 ಅಂಕ ಸಂಪಾದಿಸಿತ್ತು. ಭಾನುವಾರ ಪಂದ್ಯ ನಿಗದಿತ ಸಮಯದ ಮುಕ್ತಾಯಕ್ಕೆ ಡ್ರಾಗೊಂಡ ಕಾರಣ 1 ಅಂಕ ಪಡೆದ ಭಾರತ, ಶೂಟೌಟ್‌ನಲ್ಲಿ ಗೆದ್ದು ಮತ್ತೊಂದು ಬೋನಸ್‌ ಅಂಕ ಗಳಿಸಿತು.

ನೆದರ್‌ಲ್ಯಾಂಡ್ಸ್‌ 2 ಪಂದ್ಯಗಳಿಂದ 1 ಅಂಕ ಗಳಿಸಿತು. ಭಾರತ ತನ್ನ ಮುಂದಿನ ಪಂದ್ಯವನ್ನು ಫೆ.8 ಹಾಗೂ 9ರಂದು ಬೆಲ್ಜಿಯಂ ವಿರುದ್ಧ ಭುವನೇಶ್ವರದಲ್ಲಿ ಆಡಲಿದೆ.
 

Follow Us:
Download App:
  • android
  • ios