ನವದೆಹಲಿ(ಜ.15): ಜ.25 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್‌ ಪ್ರವಾಸಕ್ಕಾಗಿ 20 ಆಟಗಾರ್ತಿಯರ ಭಾರತ ಮಹಿಳಾ ಹಾಕಿ ತಂಡವನ್ನು ಹಾಕಿ ಇಂಡಿಯಾ ಮಂಗಳವಾರ ಪ್ರಕಟಿಸಿದೆ. 

ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಹೇಳಿದ ಸುನಿತಾ

ರಾಣಿ ರಾಂಪಾಲ್‌ ತಂಡದ ನೇತೃತ್ವ ವಹಿಸಿದ್ದಾರೆ. ಗೋಲ್‌ಕೀಪರ್‌ ಸವಿತಾ ಉಪನಾಯಕಿಯಾಗಿದ್ದಾರೆ. ಜ.25, ಜ.27 ಮತ್ತು ಜ.29 ರಂದು ಆಕ್ಲೆಂಡ್‌ನಲ್ಲಿ ಪಂದ್ಯಗಳು ನಡೆಯಲಿವೆ. ಫೆ. 4ರಂದು ಭಾರತ, ಗ್ರೇಟ್‌ ಬ್ರಿಟನ್‌ ಎದುರು ಸೆಣಸಲಿದೆ. ಫೆ.5 ರಂದು ಭಾರತ ಮತ್ತೆ ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದೆ.

ಹಾಕಿ: ಸಂಭವನೀಯರ ಪಟ್ಟಿಯಲ್ಲಿ ರಾಜ್ಯದ ಸುನಿಲ್‌

ತಂಡ: ರಾಣಿ (ನಾಯಕಿ), ಸವಿತಾ, ರಜಿನಿ, ದೀಪ್‌ ಗ್ರೇಸ್‌ ಎಕ್ಕಾ, ಗುರ್ಜಿತ್‌, ರೀನಾ, ಸಲೀಮಾ, ಸುಶೀಲಾ, ನಿಶಾ, ನಮಿತಾ, ಉದಿತಾ, ಮೋನಿಕಾ, ಲಿಲಿಮಾ, ನೇಹಾ, ಸೋನಿಕಾ, ಶರ್ಮಿಳಾ, ನವನೀತ್‌, ಲಾಲ್ರೆಮ್ಸಿಮಿ, ವಂದನಾ, ನವಜೋತ್‌.