ಜೋಹರ್ ಕಪ್ ಕಿರಿಯರ ಹಾಕಿ ಟೂರ್ನಿಯಲ್ಲಿ ಭಾರತ ನಿರಾಸೆ ಅನುಭವಿಸಿದೆ. ದಿಟ್ಟ ಹೋರಾಟ ನೀಡುತ್ತಿದ್ದ ಹಾಕಿ ಇಂಡಿಯಾ ಜಪಾನ್ ವಿರುದ್ದ ಮುಗ್ಗರಿಸಿದೆ.

ಜೋಹರ್‌ ಬಹ್ರು (ಮಲೇಷ್ಯಾ)ಅ.16: ಸುಲ್ತಾನ್‌ ಆಫ್‌ ಜೋಹರ್‌ ಕಪ್‌ ಕಿರಿಯರ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಮೊದಲ ಸೋಲು ಕಂಡಿದೆ. ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಜಪಾನ್‌ ವಿರುದ್ಧ ಭಾರತ 3-4 ಗೋಲುಗಳಿಂದ ಸೋಲುಂಡಿತು. 

ಇದನ್ನೂ ಓದಿ: ಜೋಹರ್ ಕಪ್ ಹಾಕಿ; ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು!

ಜಪಾನ್‌ ಪರ ಮೊದಲ ನಿಮಿಷವೇ ಮಟ್ಸುಮೊಟೊ ವಟಾರು ಗೋಲು ಹೊಡೆದರು. 22ನೇ ಹಾಗೂ 37ನೇ ನಿಮಿಷಗಳಲ್ಲಿ ಕವಾಬೆ ಕೊಸೈ ಅವಳಿ ಗೋಲು ದಾಖಲಿಸಿದರು. 31ನೇ ನಿಮಷದಲ್ಲಿ ಗುರ್ಸಾಹಿಬ್‌ಜಿತ್‌ ಭಾರತದ ಖಾತೆ ತೆರೆದರು. 38ನೇ ನಿಮಿಷದಲ್ಲಿ ಎರಡೂ ತಂಡಗಳಿಂದ ಗೋಲು ದಾಖಲಾಯಿತು. 

ಇದನ್ನೂ ಓದಿ: ಭೀಕರ ಅಪಘಾತ; ನಾಲ್ವರು ರಾಷ್ಟ್ರೀಯ ಹಾಕಿ ಪಟುಗಳ ದುರ್ಮರಣ!

ಜಪಾನ್‌ ಪರ ವಟಾನಬೆ ಕೀಟ, ಭಾರತ ಪರ ಶಾರ್ದಾನಂದ್‌ ಗೋಲು ಹೊಡೆದರು. 53ನೇ ನಿಮಿಷ ಪ್ರತಾಪ್‌ ಲೇಕಾ ಗೋಲು ಬಾರಿಸಿ ಸೋಲಿನ ಅಂತರ ತಗ್ಗಿ​ಸಿ​ದರು. ಬುಧ​ವಾರ ಭಾರತ ತಂಡ ಆಸ್ಪ್ರೇ​ಲಿ​ಯಾ​ವನ್ನು ಎದು​ರಿ​ಸ​ಲಿದೆ.