2023ರ ಹಾಕಿ ವಿಶ್ವಕಪ್‌ಗೆ ಭಾರತ ಆತಿಥ್ಯ; ದಿನಾಂಕ ಪ್ರಕಟ!
ಟೊಕಿಯೊ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಪಡೆದಿರುವ ಹಾಕಿ ಇಂಡಿಯಾ ಇದೀಗ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ನಡೆಸಿದ ಸುದ್ದಿಗೋಷ್ಠಿ ಭಾರತೀಯ ಹಾಕಿ ಅಭಿಮಾನಗಳ ಸಂಭ್ರಮ ಡಬಲ್ ಮಾಡಿದೆ.
ಲೌಸಾನ್(ನ.08): ಹಾಕಿ ಅಭಿಮಾನಿಗಳ ಸಂತಸ ಇಮ್ಮಡಿಯಾಗಿದೆ. ರಷ್ಯಾ ಮಣಿಸಿ ಟೊಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಬೆನ್ನಲ್ಲೇ ಇದೀಗ ಭಾರತೀಯ ಹಾಕಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. 2023ರ ಹಾಕಿ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ ಎಂದು ಅಂತಾರಾಷ್ಟ್ರೀ ಹಾಕಿ ಫೆಡರೇಶನ್(FIH) ಪ್ರಕಟಿಸಿದೆ.
ಇದನ್ನೂ ಓದಿ: ರಷ್ಯಾ ವಿರುದ್ದ ಭರ್ಜರಿ ಗೆಲುವು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಹಾಕಿ ಇಂಡಿಯಾ!
2023ರ ಪುರುಷರ ಹಾಕಿ ವಿಶ್ವಕಪ್ ಟೂರ್ನಿಗೆ ಭಾರತದಲ್ಲಿ ನಡೆಯಲಿದೆ. 2022ರ ಜನವರಿ 13 ರಿಂದ 29 ವರೆಗೆ ಪ್ರತಿಷ್ಠಿತ ಟೂರ್ನಿ ನಡೆಯಲಿದೆ. ವಿಶ್ವಕಪ್ ಟೂರ್ನಿ ಪಂದ್ಯಾವಳಿ ನಡೆಯುವ ಕ್ರೀಡಾಂಗಣದ ವಿವರಗಳನ್ನು ಆತಿಥ್ಯ ರಾಷ್ಟ್ರದ ಜೊತೆ ಚರ್ಚಿಸಿ ಅಂತಿಮಗೊಳಿಸಲಿದ್ದೇವೆ ಎಂದು ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಟೊಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತ ಮಹಿಳಾ ಹಾಕಿ!
2022ರ ಮಹಿಳಾ ವಿಶ್ವಕಪ್ ಟೂರ್ನಿಗೂ ಭಾರತ ಆತಿಥ್ಯ ವಹಿಸಿದೆ. ಭಾರತದ ಜೊತೆಗೆ ನೆದರ್ಲೆಂಡ್ ಹಾಗೂ ಸ್ಪೇನ್ ಆತಿಥ್ಯದ ಜವಾಬ್ದಾರಿವಹಿಸಿದೆ. ಮಹಿಳಾ ವಿಶ್ವಕಪ್ ಟೂರ್ನಿ 2022ರ ಜುಲೈ 1 ರಿಂದ 22ರ ವರೆಗೆ ನಡೆಯಲಿದೆ ಎಂದು FIH ಹೇಳಿದೆ.