ಟೊಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತ ಮಹಿಳಾ ಹಾಕಿ!

ಟೊಕಿಯೊ ಒಲಿಂಪಿಕ್ಸ್ ಟೂರ್ನಿಗೆ ಭಾರತೀಯ ಮಹಿಳಾ ಹಾಕಿ ತಂಡ ಅರ್ಹತೆ ಪಡೆದಿದೆ. ಯುಎಸ್ಎ ವಿರುದ್ದ ನಡೆದ ಮಹತ್ವದ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡ ಮಹತ್ವಗ ಗೋಲು ಸಡಿಸಿ, ಅರ್ಹತೆ ಪಡೆದುಕೊಂಡಿತು.

india women hockey qualifies Tokyo Olympics 2020 after beat usa

ಭುಬನೇಶ್ವರ್(ನ.02): ಭಾರತೀಯ ಮಹಿಳಾ ಹಾಕಿ ತಂಡ ಇತಿಹಾಸ ರಚಿಸಿದೆ. ಭುಬನೇಶ್ವರ್‌ದಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಯುಎಸ್ಎ ತಂಡವನ್ನು ಮಣಿಸಿದ ಭಾರತ ಮಹಿಳಾ ತಂಡ 2020ರ ಟೊಕಿಯೊ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಪಡೆದಿದೆ.

ಇದನ್ನೂ ಓದಿ: 2020ರ ಒಲಿಂಪಿಕ್ಸ್‌ಗಿಲ್ಲ ಪಾಕಿ​ಸ್ತಾನ ಹಾಕಿ ತಂಡ!

ಶುಕ್ರವಾರ ನಡೆದ ಮೊದಲ ಲೆಗ್ ಪಂದ್ಯದಲ್ಲಿ ಭಾರತ 5-1 ಅಂತರದಲ್ಲಿ ಯುಎಸ್‍ಎ ತಂಡವನ್ನು ಮಣಿಸಿತ್ತು. ದ್ವಿತೀಯ ಲೆಗ್‌ನಲ್ಲಿ ಭಾರತ ಹಿನ್ನಡೆ ಸಾಧಿಸಿದರೂ, ಗೋಲುಗಳ ಸರಾಸರಿ ಆಧಾರದಲ್ಲಿ ಟೊಕಿಯೊ ಒಲಿಂಪಿಕ್ಸ್ ಟೂರ್ನಿಗೆ ಮಹಿಳಾ ಹಾಕಿ ತಂಡ ಅರ್ಹತೆ ಪಡೆದಿದೆ. 

ದ್ವಿತೀಯ ಲೆಗ್‌ನ ಮೊದಲಾರ್ಧದಲ್ಲಿ ಯುಎಸ್‌ಎ 4 ಗೋಲು ಸಿಡಿಸಿತು. ದ್ವಿತೀಯಾರ್ಧದಲ್ಲಿ ಭಾರತದ ರಾಣಿ ರಾಂಪಾಲ್ 1 ಗೋಲು ಸಿಡಿಸಿ ಫಲಿತಾಂಶವನ್ನೇ ಬದಲಿಸಿದರು. ಮೊದಲ ಲೆಗ್‌ನಲ್ಲಿ 5 ಗೋಲು ಹಾಗೂ ದ್ವಿತೀಯ ಲೆಗ್‌ನಲ್ಲಿ 1 ಗೋಲು ಸಿಡಿಸೋ ಮೂಲಕ ಭಾರತ ಒಟ್ಟು 6 ಗೋಲು ಬಾರಿಸಿತು. ಇನ್ನು ಯುಎಸ್‌ಎ ಮೊದಲ ಲೆಗ್‌ನಲ್ಲಿ 1 ಹಾಗೂ ದ್ವಿತೀಯ ಲೆಗ್‌ನಲ್ಲಿ 4 ಸೇರಿದಂತೆ ಒಟ್ಟು 5 ಗೋಲು ಸಿಡಿಸಿತು. ಈ ಮೂಲಕ ಭಾರತ ಕೇವಲ 1 ಗೋಲಿನ ಅಂತರದಲ್ಲಿ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿತು.

Latest Videos
Follow Us:
Download App:
  • android
  • ios