FIH ಮೆನ್ಸ್ ಪ್ರೋ ಲೀಗ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಭಾರತ 4-3 ಅಂತರದಲ್ಲಿ ಮಣಿಸಿದೆ. ಅಂತಿಮ ಹಂತದಲ್ಲಿ ಪಾಕಿಸ್ತಾನ ಸತತ2 ಗೋಲು ಸಿಡಿಸಿ ಭಾರತಕ್ಕೆ ಆತಂಕ ಸೃಷ್ಟಿಸಿದರೂ ಗೆಲುವು ದಾಖಳಿಸುವಲ್ಲಿ ಯಶಸ್ವಿಯಾಗಿದೆ.

ಲಂಡನ್ (ಜೂ.23) ಪಾಕಿಸ್ತಾನ ವಿರುದ್ದ ಗೆಲುವಿನ ಸಂಭ್ರಮಾಚರಣೆ ಮುಂದುವರಿದಿದೆ. ಅದು ಆಪರೇಶನ್ ಸಿಂದೂರ್ ಆಗಿರಲಿ, ಕ್ರಿಕೆಟ್, ಫುಟ್ಬಾಲ್, ಹಾಕಿ ಆಗಿರಲಿ ಭಾರತಕ್ಕೆ ಗೆಲುವು. FIH ಪ್ರೋ ಲೀಗ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಹಾಕಿ ಇಂಡಿಯಾ 4-3 ಅಂತರದಲ್ಲಿ ಪಾಕಿಸ್ತಾನ ಮಣಿಸಿದೆ. ಆರಂಭದಲ್ಲೇ ಭಾರತ ತೀವ್ರ ಮುನ್ನಡೆ ಸಾಧಿಸಿತ್ತು. 3-1 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು. ಭಾರತ 4ನೇ ಗೋಲು ಸಿಡಿಸಿದ ಬೆನ್ನಲ್ಲೇ ಪಾಕಿಸ್ತಾನ ಸತತ 2 ಗೋಲು ಸಿಡಿಸಿ ಆಂತಕ ಸೃಷ್ಟಿಸಿತ್ತು. ಆಧರೆ ಭಾರತ 4-1 ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತದ ಪರ ಅಭಿಷೇಕ್, ನಿಲಕಂಠ ಶರ್ಮಾ, ಸುಖಜಿತ್ ಸಿಂಗ್ ಹಾಗೂ ರಾಜೇಂದ್ರ ಸಿಂಗ್ ಗೋಲು ಸಿಡಿಸಿದರು. ಇತ್ತ ಪಾಕಿಸ್ತಾನ ಪರ ಅಹಮ್ಮದ್ ನದೀಮ್, ಅಬು ಮೊಹಮ್ಮದ್ ಹಾಗೂ ಮೊಯಿನ್ ಶಕೀಲ್ ಗೋಲು ಸಿಡಿಸಿದರು. ಭಾರತದ ದಿಟ್ಟ ಹೋರಾಟದಿಂದ ಗೆಲುವಿನ ಸಂಭ್ರಮಾಚರಣೆ ನಡೆಸಿದೆ.

ಪಂದ್ಯ ಆರಂಭಗೊಂಡ 8ನೇ ನಿಮಿಷದಲ್ಲಿ ಪಾಕಿಸ್ತಾನ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶ ಸದುಪಯೋಗ ಪಡಿಸಿತು. ಪರಿಣಾಮ ಪಾಕಿಸ್ತಾನ ಮುನ್ನಡೆ ಸಾಧಿಸಿತು. ಆರಂಭಿಕ ಹಿನ್ನಡೆಯಲ್ಲಿದ್ದ ಭಾರತ ಅಷ್ಟೇ ವೇಗದಲ್ಲಿ ಪುಟಿದೆದ್ದಿತು. ಇತ್ತ ಫಸ್ಟ್ ಕ್ವಾರ್ಟರ್‌ನಲ್ಲಿ ಭಾರತ ಹಲವು ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಆದರೆ ಗೋಲಾಗಿ ಪರಿವರ್ತನೆ ಆಗಲಿಲ್ಲ. ಸೆಕೆಂಡ್ ಕ್ವಾರ್ಟರ್‌ನಲ್ಲಿ ಅಭಿಷೇಕ್ ಸಿಡಿಸಿದ ಗೋಲಿನಿಂದ ಭಾರತ ಖಾತೆ ತೆರೆದು ಹೋರಾಟ ಮುಂದುವರಿಸಿತು. ಸತತ ಸೋಲಿನಿಂದ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಜೂನ್ 25ಕ್ಕೆ ಇಂಗ್ಲೆಂಡ್ ವಿರುದ್ದ ಹೋರಾಟ

ಪಾಕಿಸ್ತಾನ ವಿರುದ್ದ ಗೆಲುವು ದಾಖಲಿಸಿದ ಭಾರತ ಜೂನ್ 25ಕ್ಕೆ ಆತಿಥೇಯ ಇಂಗ್ಲೆಂಡ್ ವಿರುದ್ದ ಹೋರಾಟ ನಡೆಸಲಿದೆ.