MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Hockey
  • Hockey: ಆರೆಂಜ್ ಜರ್ಸಿ ಧರಿಸಿದ್ದರ ಹಿಂದಿನ ಅಸಲಿ ಗುಟ್ಟು ಕೊನೆಗೂ ರಟ್ಟು! ಟೀಮ್ ಇಂಡಿಯಾ ಕ್ಯಾಪ್ಟನ್ ಬಿಚ್ಚಿಟ್ಟ ಸತ್ಯ ಇಲ್ಲಿದೆ!

Hockey: ಆರೆಂಜ್ ಜರ್ಸಿ ಧರಿಸಿದ್ದರ ಹಿಂದಿನ ಅಸಲಿ ಗುಟ್ಟು ಕೊನೆಗೂ ರಟ್ಟು! ಟೀಮ್ ಇಂಡಿಯಾ ಕ್ಯಾಪ್ಟನ್ ಬಿಚ್ಚಿಟ್ಟ ಸತ್ಯ ಇಲ್ಲಿದೆ!

ಮುಂಬರುವ ಹಾಕಿ ವಿಶ್ವಕಪ್‌ಗಾಗಿ ಭಾರತ ತಂಡದ ಸಾಂಪ್ರದಾಯಿಕ ನೀಲಿ ಜರ್ಸಿಯನ್ನು ಕಿತ್ತಳೆ ಬಣ್ಣಕ್ಕೆ ಬದಲಿಸಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆದರೆ,ಈ ಕುರಿತು ಹಾಕಿ ತಂಡದ ನಾಯಕ ಸತ್ಯ ಬಿಚ್ಚಿಟ್ಟ ದ್ದಾನೆ. ಅದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!

2 Min read
Author : Bhimasi M Koleppanavar
Published : Aug 01 2026, 12:42 PM IST
Share this Photo Gallery
  • FB
  • TW
  • Linkdin
  • Whatsapp
16
ಕ್ರೀಡೆ ಎಂದರೆ ಆಟವಲ್ಲ, ಅದೊಂದು ಭಾವನೆ!
Image Credit : ANI/X

ಕ್ರೀಡೆ ಎಂದರೆ ಆಟವಲ್ಲ, ಅದೊಂದು ಭಾವನೆ!

ಭಾರತದಲ್ಲಿ ಕ್ರೀಡೆ ಎಂದರೆ ಕೇವಲ ಆಟವಲ್ಲ, ಅದೊಂದು ಭಾವನೆ. ಅದರಲ್ಲೂ ಭಾರತದ ರಾಷ್ಟ್ರೀಯ ಕ್ರೀಡೆಯಾದ ಹಾಕಿಗೆ ದೇಶದಲ್ಲಿ ವಿಶೇಷ ಗೌರವವಿದೆ. ಸಾಮಾನ್ಯವಾಗಿ 'ಮೆನ್ ಇನ್ ಬ್ಲೂ' ಎಂದೇ ಕರೆಯಲ್ಪಡುವ ಭಾರತೀಯ ಹಾಕಿ ತಂಡ, ಮೈದಾನಕ್ಕಿಳಿದರೆ ನೀಲಿ ಜರ್ಸಿಯಲ್ಲಿ ಮಿಂಚುವುದನ್ನು ನೋಡಿ ಅಭಿಮಾನಿಗಳಿಗೆ ಅಭ್ಯಾಸವಾಗಿ ಹೋಗಿದೆ. ಆದರೆ, ಮುಂಬರುವ ಎಫ್‌ಐಎಚ್ ಪುರುಷ ಮತ್ತು ಮಹಿಳಾ ಹಾಕಿ ವಿಶ್ವಕಪ್ ಪಂದ್ಯಾವಳಿಗಾಗಿ ಹಾಕಿ ಇಂಡಿಯಾ ಅನಾವರಣಗೊಳಿಸಿದ ಹೊಸ 'ಕಿತ್ತಳೆ' (Orange) ಬಣ್ಣದ ಜರ್ಸಿ ಈಗ ದೇಶಾದ್ಯಂತ ದೊಡ್ಡ ಚರ್ಚೆ ಹುಟ್ಟುಹಾಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ವಿವಾದಕ್ಕೆ ಕಾರಣವೇನು?
Image Credit : X

ವಿವಾದಕ್ಕೆ ಕಾರಣವೇನು?

ಜುಲೈ 27 ರಿಂದ ಆರಂಭವಾಗಲಿರುವ ಹಾಕಿ ವಿಶ್ವಕಪ್‌ಗಾಗಿ ಹಾಕಿ ಇಂಡಿಯಾ ಸಾಂಪ್ರದಾಯಿಕ ನೀಲಿ ಜರ್ಸಿಯ ಬದಲಿಗೆ ಕಿತ್ತಳೆ ಬಣ್ಣದ ಹೊಸ ಜರ್ಸಿಯನ್ನು ಬಿಡುಗಡೆ ಮಾಡಿತು. ಈ ಹಠಾತ್ ಬದಲಾವಣೆ ಹಲವು ಮಾಜಿ ಹಾಕಿ ಆಟಗಾರರು, ಕ್ರೀಡಾ ಪ್ರೇಮಿಗಳು ಮತ್ತು ದಂತಕಥೆಗಳ ಅಸಮಾಧಾನಕ್ಕೆ ಕಾರಣವಾಯಿತು. ಕ್ರೀಡಾ ವಲಯದಿಂದ ಹಿಡಿದು ರಾಜಕೀಯ ಅಂಗಳದವರೆಗೆ "ದಿಢೀರ್ ಜರ್ಸಿ ಬಣ್ಣ ಬದಲಾಯಿಸಿದ್ದು ಏಕೆ?" ಎಂಬ ಪ್ರಶ್ನೆಗಳು ಎದ್ದವು. ಈ ವಿವಾದ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದಂತೆ, ಸ್ವತಃ ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಹಿರಿಯ ಆಟಗಾರ ಮನ್ಪ್ರೀತ್ ಸಿಂಗ್ ಮೌನ ಮುರಿದು ಅಸಲಿ ಕಾರಣವನ್ನು ಹಂಚಿಕೊಂಡಿದ್ದಾರೆ.

Related Articles

Related image1
Range Rover Sport ಭಾರತದಲ್ಲಿ ರೇಂಜ್ ರೋವರ್ ಸ್ಪೋರ್ಟ್ಸ್ ಬುಕಿಂಗ್ ಆರಂಭ!
Related image2
Sports Visa Scam: ಭಾರತದ ಕುಸ್ತಿಪಟುಗಳೆಂದು ಸುಳ್ಳು ಹೇಳಿ ಹಂಗೇರಿ ವೀಸಾಗೆ 11 ಅರ್ಜಿ!
36
ಬೇಸರಕ್ಕೆ ಕಾರಣವೇನು?
Image Credit : ANI

ಬೇಸರಕ್ಕೆ ಕಾರಣವೇನು?

ಮುಂದುವರಿದು ಮಾತನಾಡಿದ ಅವರು, "ನಾವು ಅತ್ಯಂತ ಪ್ರಮುಖವಾದ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಸಜ್ಜಾಗುತ್ತಿದ್ದೇವೆ. ಇಂತಹ ಸಮಯದಲ್ಲಿ ನಾವು ಪಂದ್ಯದ ಮೇಲೆ ಗಮನ ಹರಿಸುವ ಬದಲು ಇಂತಹ ವಿವಾದಗಳಲ್ಲಿ ಸಿಲುಕಿಕೊಂಡಿದ್ದೇವೆ ಎಂಬುದು ನಿಜಕ್ಕೂ ಬೇಸರ ತರುತ್ತದೆ. ನಾವು ಮೈದಾನದಲ್ಲಿ ಯಾವುದೇ ಬಣ್ಣದ ಜರ್ಸಿ ಧರಿಸಿ ಆಡಿದರೂ, ನಮ್ಮ ಮುಖ್ಯ ಉದ್ದೇಶ ದೇಶಕ್ಕಾಗಿ ಆಡುವುದು ಮತ್ತು ಪಂದ್ಯವನ್ನು ಗೆಲ್ಲುವುದು. ದೇಶದ ಹೆಮ್ಮೆಯನ್ನು ಎತ್ತಿಹಿಡಿಯುವುದೇ ನಮ್ಮ ಗುರಿ" ಎಂದು ತಮ್ಮ ಮನದ ನೋವನ್ನು ತೆರೆದಿಟ್ಟರು.

46
ಇದು ರಾಜಕೀಯವಲ್ಲ, ಟೆಕ್ನಿಕಲ್ ಇಶ್ಯು!
Image Credit : X

ಇದು ರಾಜಕೀಯವಲ್ಲ, ಟೆಕ್ನಿಕಲ್ ಇಶ್ಯು!

ತಂಡದ ಮತ್ತೊಬ್ಬ ಸ್ಟಾರ್ ಆಟಗಾರ ಮನ್ಪ್ರೀತ್ ಸಿಂಗ್ ಅವರು ಜರ್ಸಿ ಬದಲಾವಣೆಯ ಹಿಂದಿರುವ ಪ್ರಮುಖ ತಾಂತ್ರಿಕ ಕಾರಣವನ್ನು ವಿವರಿಸಿದರು. "ನೀವು ಹಿಂದಿನ ಇತಿಹಾಸವನ್ನು ಗಮನಿಸಿದರೆ, 2014ರ ವಿಶ್ವಕಪ್ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಳೆಯಲ್ಲೂ ಭಾರತ ತಂಡ ಹಳದಿ ಬಣ್ಣದ ಜರ್ಸಿ ಧರಿಸಿ ಆಡಿತ್ತು. ಆಗ ಈ ವಿಚಾರ ಇಷ್ಟೊಂದು ದೊಡ್ಡ ಸುದ್ದಿಯಾಗಿರಲಿಲ್ಲ. ಪ್ರಸ್ತುತ ನಡೆಯುತ್ತಿರುವ ಚರ್ಚೆಗಳಿಗೂ, ಆಟಕ್ಕೂ ಸಂಬಂಧವಿಲ್ಲ. ಈ ನಿರ್ಧಾರವನ್ನು ಯಾರೂ ಹೊರಗಿನಿಂದ ನಮ್ಮ ಮೇಲೆ ಹೇರಿಲ್ಲ" ಎಂದರು.

56
ಸ್ಪಷ್ಟನೆಕೊಟ್ಟ ಕ್ಯಾಪ್ಟನ್!
Image Credit : X

ಸ್ಪಷ್ಟನೆಕೊಟ್ಟ ಕ್ಯಾಪ್ಟನ್!

ಮುಖ್ಯ ಕಾರಣವನ್ನು ವಿವರಿಸಿದ ಅವರು, "ಇತ್ತೀಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 'ಬ್ಲೂ ಟರ್ಫ್' (ನೀಲಿ ಬಣ್ಣದ ಮೈದಾನ) ಬಳಸಲಾಗುತ್ತದೆ. ಆಟಗಾರರು ಧರಿಸುವ ಸಾಕ್ಸ್ ಹಾಗೂ ಜರ್ಸಿ ಎರಡೂ ನೀಲಿ ಬಣ್ಣದ್ದಾಗಿದ್ದಾಗ, ಮೈದಾನದ ಬಣ್ಣದೊಂದಿಗೆ ಜರ್ಸಿ ಬಣ್ಣ ಒಂದಕ್ಕೊಂದು ಮಿಶ್ರಣವಾಗುತ್ತಿತ್ತು . ಇದರಿಂದ ಆಟಗಾರರಿಗೆ ಸಹ-ಆಟಗಾರರನ್ನು ಗುರುತಿಸಲು ಮತ್ತು ಚೆಂಡನ್ನು ಪಾಸ್ ಮಾಡಲು ಮೈದಾನದಲ್ಲಿ ತೊಂದರೆಯಾಗುತ್ತಿತ್ತು. ಇದು ಪ್ರದರ್ಶನದ ಮೇಲೆಯೂ ಪರಿಣಾಮ ಬೀರುತ್ತಿತ್ತು. ಹಾಗಾಗಿಯೇ ನಾವು ಬಣ್ಣ ಬದಲಾಯಿಸಿದೆವು" ಎಂದು ಹೇಳಿದರು.

66
ಹಾಕಿ ಇಂಡಿಯಾ ನೀಡಿದ ಅಧಿಕೃತ ಸ್ಪಷ್ಟೀಕರಣ!
Image Credit : X

ಹಾಕಿ ಇಂಡಿಯಾ ನೀಡಿದ ಅಧಿಕೃತ ಸ್ಪಷ್ಟೀಕರಣ!

ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ಹಾಕಿ ಇಂಡಿಯಾ ಕೂಡ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. "ಆಟಗಾರರು ಹಾಗೂ ತಾಂತ್ರಿಕ ಸಿಬ್ಬಂದಿಯ ಜತೆ ಸುದೀರ್ಘ ಸಮಾಲೋಚನೆ ನಡೆಸಿದ ನಂತರವೇ ಈ ತೀರ್ಮಾನಕ್ಕೆ ಬರಲಾಗಿದೆ. ನೀಲಿ ಟರ್ಫ್ ಮೈದಾನದಲ್ಲಿ ನೀಲಿ ಜರ್ಸಿ ಧರಿಸಿ ಆಡುವಾಗ ದೃಶ್ಯಾವಳಿಗಳ ಸ್ಪಷ್ಟತೆ ಕಡಿಮೆಯಾಗುತ್ತಿತ್ತು. ಆಟಗಾರರು ಮೈದಾನದಲ್ಲಿ ಸ್ಪಷ್ಟವಾಗಿ ಕಾಣಿಸಲಿ ಎಂಬ ಒಂದೇ ಒಂದು ತಾಂತ್ರಿಕ ಕಾರಣಕ್ಕೆ ಕಿತ್ತಳೆ ಜರ್ಸಿ ಆಯ್ಕೆ ಮಾಡಲಾಗಿದೆ" ಎಂದು ತಿಳಿಸಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

BM
Bhimasi M Koleppanavar
ಹುಬ್ಬಳ್ಳಿ-ಧಾರವಾಡದ ಮಧ್ಯದ ಶಿವಳ್ಳಿ ನನ್ನ ಹುಟ್ಟೂರು. ಮೈಸೂರಿನಲ್ಲಿ ಎಂ.ಎ. ವ್ಯಾಸಂಗ ಮಾಡುವಾಗಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟೆ. ಹುಬ್ಬಳ್ಳಿಯ ‘ಉದಯವಾಣಿ’ಯಿಂದ ಆರಂಭವಾದ ನನ್ನ ಮಾಧ್ಯಮ ಜರ್ನಿ, ‘ವಿಜಯವಾಣಿ’ ಮತ್ತು ‘ನ್ಯೂಸ್ 18’ ಸಂಸ್ಥೆಗಳ ಮೂಲಕ ಸಾಗಿತು. ಪ್ರಸ್ತುತ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜಕೀಯ, ಕ್ರೈಂ, ಸುದ್ದಿಗಳೇ ಅಚ್ಚು ಮೆಚ್ಚು.
ಹಾಕಿ
ಕ್ರೀಡೆಗಳು
ಸುದ್ದಿ
ಟೀಮ್ ಇಂಡಿಯಾ
Latest Videos
Recommended Stories
Recommended image1
ಸವಾಲಿಗೆ ನಮ್ಮ ತಂಡ ಸಿದ್ಧ: ಮಹಿಳಾ ಟೀಂ ಕೋಚ್ ಮರೀನೆ , SWABನಿಂದ ವಿಶ್ವ ಕ್ರೀಡಾ ಪತ್ರಕರ್ತರ ದಿನ ಆಚರಣೆ
Recommended image2
ಪಾಕಿಸ್ತಾನ ಬಗ್ಗು ಬಡಿದ ಹಾಕಿ ಇಂಡಿಯಾ, ಅಂತಿಮ ಹಂತದಲ್ಲಿ ಆತಂಕ ಎದುರಿಸಿದರೂ 4-3 ಅಂತರದ ಗೆಲುವು
Recommended image3
ಆಸೀಸ್‌ನಲ್ಲಿ ಪಾತ್ರೆ ತೊಳೆಯುತ್ತಿದ್ದೆವು.! ಪಾಕಿಸ್ತಾನ ಹಾಕಿ ಅವ್ಯವಸ್ಥೆ ಬಿಚ್ಚಿಟ್ಟ ನಾಯಕನಿಗೆ 2 ವರ್ಷ ಬ್ಯಾನ್!
Related Stories
Recommended image1
Range Rover Sport ಭಾರತದಲ್ಲಿ ರೇಂಜ್ ರೋವರ್ ಸ್ಪೋರ್ಟ್ಸ್ ಬುಕಿಂಗ್ ಆರಂಭ!
Recommended image2
Sports Visa Scam: ಭಾರತದ ಕುಸ್ತಿಪಟುಗಳೆಂದು ಸುಳ್ಳು ಹೇಳಿ ಹಂಗೇರಿ ವೀಸಾಗೆ 11 ಅರ್ಜಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved