World Athlete Award ಶ್ರೀಜೆಶ್‌ಗೆ ಪ್ರತಿಷ್ಠಿತ ವರ್ಷದ ವಿಶ್ವ ಗೇಮ್ಸ್ ಅಥ್ಲೀಟ್ ಪ್ರಶಸ್ತಿ, ಈ ಸಾಧನೆ ಮಾಡಿದ 2ನೇ ಭಾರತೀಯ!
- ಹಾಕಿ ಪಟು ಶ್ರೀಜಿತ್‌ಗೆ World Games Athlete of the Year Award
- ಈ ಸಾಧನೆ ಮಾಡಿದ 2ನೇ ಭಾರತೀಯ ಕ್ರೀಡಾಪಟು ಶ್ರೀಜೆಶ್
- 2019ರಲ್ಲಿ ರಾಣಿ ರಾಂಪಾಲ್ ಈ ಪ್ರಶಸ್ತಿ ಗೆದ್ದ ಸಾಧನೆ
ನವದೆಹಲಿ(ಜ.31): ಭಾರತದ ಕ್ರೀಡೆಯಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದಾಖಲೆ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಅಧ್ಯಾಯ ಬರೆದಿದೆ. ಇದೀಗ ಭಾರತದ ಕ್ರೀಡಾ ಸಾಧನೆಗೆ ಮತ್ತೊಂದು ಕಿರೀಟ ಮುಡಿಗೇರಿದೆ. ಭಾರತದ ಹಾಕಿ ಪಟು ಪಿಆರ್ ಶ್ರೀಜೆಶ್(P. R. Sreejesh) ಪ್ರತಿಷ್ಠಿತ ವರ್ಷದ ವಿಶ್ವ ಗೇಮ್ಸ್ ಅಥ್ಲೀಟ್ 2021ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವರ್ಷದ ವಿಶ್ವ ಗೇಮ್ಸ್ ಅಥ್ಲೀಟ್ ಪ್ರಶಸ್ತಿ(World Games Athlete of the Year Award) ಪಡೆದ ಎರಡನೇ ಭಾರತೀಯ ಕ್ರೀಡಾಪಟು ಶ್ರೀಜೆಶ್. ಗೋಲ್‌ಕೀಪರ್ ಈ ಪ್ರಶಸ್ತಿಗೆ ಭಾಜನರಾಗುವ ಮೊದಲು 2019ರಲ್ಲಿ ಭಾರತೀಯ ಮಹಿಳಾ ಹಾಕಿ ನಾಯಕಿ ರಾಣಿ ರಾಂಪಾಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
Women's Asia Cup Hockey: ಚೀನಾವನ್ನು ಮಣಿಸಿ ಕಂಚು ಗೆದ್ದ ಭಾರತ
ವರ್ಷದ ವಿಶ್ವ ಗೇಮ್ಸ್ ಅಥ್ಲೀಟ್ 2021ರ ಪ್ರಶಸ್ತಿ ರೇಸ್‌ನಲ್ಲಿ ಶ್ರೀಜೆಶ್ ಹಲವು ಕ್ರೀಡಾಪಟುಗಳನ್ನು ಹಿಂದಿಕ್ಕಿ ಈ ಪ್ರಶಸ್ತಿ ಗೆದ್ದಿದ್ದಾರೆ. ಅದರಲ್ಲೂ ಸ್ಪೇನ್‌ನ ಸ್ಪೋರ್ಟ್ಸ್ ಕ್ಲೈಂಬರ್ ಅಲ್ಬರ್ಟೋ ಗಿನೆಸ್ ಲೊಪೆಜ್, ಇಟಲಿಯ ವುಶು ಪ್ಲೇಯರ್ ಮೈಕಲ್ ಗೊಯಿರ್ಡಾನೋ ಹಿಂದಿಕ್ಕಿದ ಶ್ರೀಜೆಶ್ ಪ್ರತಿಷ್ಥಿತ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಶ್ರೀಜೆಶ್ ಹಾಕಿ ಇಂಡಿಯಾದ ಮಾಜಿ ನಾಯಕ. ಪ್ರಮುಖವಾಗಿ ಟೊಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಭಾಗವಾಗಿದ್ದರು. ವರ್ಷದ ವಿಶ್ವ ಗೇಮ್ಸ್ ಅಥ್ಲೀಟ್ ಪ್ರಶಸ್ತಿಯಲ್ಲಿ ಶ್ರೀಜೆಶ್ 1,27,647 ಮತಗಳನ್ನು ಪಡೆದರೆ, ಲೊಪೆಝ್ 67,428 ಮತ ಹಾಗೂ ಗೊಯಿರ್ಡಾನ್ 52,046 ಮತ ಪಡೆದಿದ್ದಾರೆ.
ರಾಷ್ಟ್ರೀಯ ಮಹಿಳಾ ಕಿರಿಯರ ಹಾಕಿಯಲ್ಲಿ ಕನ್ನಡಿಗರ ಕಲರವ..!
33 ವರ್ಷದ ಶ್ರೀಜೆಶ್ ಹೆಸರನ್ನು ಅಂತಾರಾಷ್ಟ್ರೀಯ ಹಾಕಿ ಫೆಡರೆಶನ್ (FIH) ನಾಮ ನಿರ್ದೇಶನ ಮಾಡಿತ್ತು. 2021ರ ಅಕ್ಟೋಬರ್ ತಿಂಗಳಲ್ಲಿ FIH ವರ್ಷದ ಬೆಸ್ಟ್ ಗೋಲ್‌ಕೀಪರ್ ಪ್ರಶಸ್ತಿ ಸ್ವೀಕರಿಸಿದ್ದರು. ಇದೀಗ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿರುವುದು ಭಾರತೀಯರ ಸಂತಸ ಇಮ್ಮಡಿಗೊಳಿಸಿದೆ.
ಪ್ರಶಸ್ತಿ ಕುರಿತು ಸಂತಸ ಹಂಚಿಕೊಂಡ ಶ್ರೀಜೆಶ್, ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಅತೀವ ಸಂತಸದಲ್ಲಿದ್ದೇನೆ. ನನ್ನ ಹೆಸರನ್ನು ನಾಮ ನಿರ್ದೇಶನ ಮಾಡಿದ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ಗೆ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಹಾಕಿ ಇಂಡಿಯಾದ ಬೆಂಬಲವನ್ನು ನೆನೆಪಿಸಿದ್ದಾರೆ.
ಹಾಕಿ ಇಂಡಿಯಾಗೆ ಶ್ರೀಜೆಶ್ ಕೊಡುಗೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರ 2021ರಲ್ಲಿ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ನೀಡಿ ಗೌರವಿಸಿದೆ.
ಮೂಲತಃ ಕೇರಳದ ಶ್ರೀಜೆಶ್ 2004ರಲ್ಲಿ ಭಾರತೀಯ ಹಾಕಿ ಜ್ಯೂನಿಯರ್ ಟೀಮ್ ಮೂಲಕ ಹಾಕಿ ಜರ್ನಿ ಆರಂಭಗೊಂಡಿತು. ಅತ್ಯುತ್ತಮ ಪ್ರದರ್ಶನದ ಮೂಲಕ 2006ರಲ್ಲಿ ಭಾರತ ಹಾಕಿ ರಾಷ್ಟ್ರೀಯ ಹಾಕಿ ತಂಡಕ್ಕೆ ಪದಾರ್ಪಣೆ ಮಾಡಿದರು. 2008ರಲ್ಲಿ ಶ್ರೀಜೆಶ್ ಹೋರಾಟದಿಂದ ಭಾರತ ಜ್ಯೂನಿಯರ್ ಏಷ್ಯಾಕಪ್ ಪ್ರಶಸ್ತಿ ಗೆದ್ದುಕೊಂಡಿತು. ಈ ಟೂರ್ನಿಯಲ್ಲಿ ಶ್ರೀಜೆಶ್ ಟೂರ್ನಮೆಂಟ್ ಗೋಲ್‌ಕೀಪರ್ ಪ್ರಶಸ್ತಿ ಗೆದ್ದುಕೊಂಡರು.
ಶ್ರೀಜೆಶ್ 2012ರ ಲಂಡನ್ ಒಲಿಂಪಿಕ್ಸ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು 2014ರ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. 2014ರ ಏಷ್ಯಾನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ಚಿನ್ನದ ಪದಕ ಗೆದ್ದುಕೊಂಡಿತು. ಶ್ರೀಜೆಶ್ ಈ ಸಾಧನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.2014 ಹಾಗೂ 2018ರ ಹಾಕಿ ಚಾಂಪಿಯನ್ಸ್ ಟ್ರೋಫಿ ಯಲ್ಲಿ ಗೋಲ್‌ಕೀಪರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.