Asianet Suvarna News Asianet Suvarna News

Women's Asia Cup Hockey: ಚೀನಾವನ್ನು ಮಣಿಸಿ ಕಂಚು ಗೆದ್ದ ಭಾರತ

* ಏಷ್ಯಾಕಪ್‌ ಮಹಿಳಾ ಹಾಕಿ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದ ಭಾರತ ಹಾಕಿ ತಂಡ

* ಚೀನಾ ಎದುರು 2-0 ಅಂತರದಲ್ಲಿ ಗೆದ್ದು ಬೀಗಿದ ಮಹಿಳಾ ಹಾಕಿ ತಂಡ

* ಕೊರಿಯಾ ವಿರುದ್ದ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದ ಜಪಾನ್

Womens Asia Cup Hockey Indian Womens Hockey Team beat China and win bronze Medal kvn
Author
Bengaluru, First Published Jan 29, 2022, 10:52 AM IST

ಮಸ್ಕಟ್(ಜ.29)‌: ಕಳೆದ ಬಾರಿಯ ಚಾಂಪಿಯನ್‌ ಭಾರತ, ಈ ಆವೃತ್ತಿಯ ಏಷ್ಯಾಕಪ್‌ ಮಹಿಳಾ ಹಾಕಿ ಟೂರ್ನಿಯಲ್ಲಿ (Women's Asia Cup Hockey) ಕಂಚಿನ ಪದಕ ಜಯಿಸಿದೆ. ಶುಕ್ರವಾರ ನಡೆದ 3 ಹಾಗೂ 4ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ, ಚೀನಾ ವಿರುದ್ಧ 2-0 ಗೋಲುಗಳಿಂದ ಗೆಲುವು ಸಾಧಿಸಿತು. ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿ ಬೀಗಿದ್ದ ಭಾರತ ಮಹಿಳಾ ಹಾಕಿ ತಂಡವು ಈ ಬಾರಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. 

ಸೆಮೀಸ್‌ನಲ್ಲಿ ಕೊರಿಯಾ ವಿರುದ್ಧ ಸೋತಿದ್ದ ಭಾರತ, ಚೀನಾ ವಿರುದ್ಧ ಮೊದಲಾರ್ಧದಲ್ಲೇ 2 ಗೋಲು ಬಾರಿಸಿತು. ಎರಡೂ ಗೋಲುಗಳು ಪೆನಾಲ್ಟಿ ಕಾರ್ನರ್‌ ಮೂಲಕವೇ ದಾಖಲಾದವು. 13ನೇ ನಿಮಿಷದಲ್ಲಿ ಶರ್ಮಿಳಾ ದೇವಿ ಹಾಗೂ 19ನೇ ನಿಮಿಷದಲ್ಲಿ ಗುರ್ಜಿತ್‌ ಕೌರ್‌ ಗೋಲು ಬಾರಿಸಿದರು. ದ್ವಿತೀಯಾರ್ಧದಲ್ಲಿ ಗೋಲು ಗಳಿಸಲು ಭಾರತ ವಿಫಲವಾಯಿತು.

ಚೀನಾ ವಿರುದ್ದದ ಪದಕ ಸುತ್ತಿನ ಪಂದ್ಯದ ಆರಂಭದಿಂದಲೇ ಭಾರತ ಮಹಿಳಾ ಹಾಕಿ ತಂಡವು ಆಕ್ರಮಣಕಾರಿ ಆಟಕ್ಕೆ ಮೊರೆಹೋಯಿತು. ಮೊದಲಾರ್ಧದಲ್ಲೇ ಭಾರತ ಎರಡು ಗೋಲು ಬಾರಿಸುವ ಮೂಲಕ ಚೀನಾ ಮೇಲೆ ಸಾಕಷ್ಟು ಒತ್ತಡ ಹೇರುವಲ್ಲಿ ಯಶಸ್ವಿಯಾಯಿತು. ಇನ್ನು ಚೀನಾ ಕೂಡಾ ತಿರುಗೇಟು ನೀಡಲು ಯತ್ನಿಸಿತಾದರೂ ಯಶಸ್ಸು ದಕ್ಕಲಿಲ್ಲ. ಚೀನಾಗೆ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಭಾರತ ಮಹಿಳಾ ಹಾಕಿ ತಂಡದ ಹಂಗಾಮಿ ನಾಯಕಿ ಹಾಗೂ ಗೋಲು ಕೀಪರ್ ಸವಿತಾ ಪೂನಿಯಾ ವಿಫಲಗೊಳಿಸಿದರು. ಇನ್ನೇನು ಪಂದ್ಯ ಮುಕ್ತಾಯಕ್ಕೆ ಕೊನೆಯ 10 ನಿಮಿಷ ಬಾಕಿ ಇದ್ದಾಗ ಚೀನಾ ತಂಡಕ್ಕೆ ಮತ್ತೊಮ್ಮೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಇನ್ನು ಪಂದ್ಯ ಮುಕ್ತಾಯಕ್ಕೆ ಕೊನೆಯ 2 ನಿಮಿಷಗಳಿದ್ದಾಗ ಚೀನಾಗೆ ಸತತ ಮೂರು ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತಾದರೂ, ಈ ಸುವರ್ಣಾವಕಾಶವನ್ನು ಗೋಲಾಗಿ ಪರಿವರ್ತಿಸಲು ಭಾರತೀಯ ಗೋಲು ಕೀಪರ್ ಸವಿತಾ ಪೂನಿಯಾ ಅವಕಾಶ ನೀಡಲಿಲ್ಲ.

Pro Kabaddi League : ಪುಣೇರಿ ಪಲ್ಟನ್‌ಗೆ ಹ್ಯಾಟ್ರಿಕ್‌ ಜಯ

ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದಲ್ಲಿ ಮಿಂಚಿನ ಪ್ರದರ್ಶನ ತೋರುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತ ಮಹಿಳಾ ಹಾಕಿ ತಂಡವು(Indian Women's Hockey Team), ಕೊರೋನಾ ವೈರಸ್‌ನಿಂದಾಗಿ ಸರಿಯಾದ ತರಬೇತಿ ನಡೆಸಲು ಸಾಧ್ಯವಾಗಿರಲಿಲ್ಲ. ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಆಘಾತಕಾರಿ ಸೋಲು ಕಾಣುವ ಮೂಲಕ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವಲ್ಲಿ ಭಾರತ ವಿಫಲವಾಗಿತ್ತು.

ಚಾಂಪಿಯನ್ ಪಟ್ಟ ಅಲಂಕರಿಸಿದ ಜಪಾನ್‌: 2021-22ನೇ ಸಾಲಿನ ಏಷ್ಯಾಕಪ್‌ ಮಹಿಳಾ ಹಾಕಿ ಟೂರ್ನಿಯಲ್ಲಿ ಕೊರಿಯಾ ಹಾಗೂ ಜಪಾನ್‌ ತಂಡಗಳು ಫೈನಲ್‌ ಪ್ರವೇಶಿಸಿದ್ದವು. ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಜಪಾನ್ ಮಹಿಳಾ ಹಾಕಿ ತಂಡವು 4-2 ಗೋಲುಗಳ ಅಂತರದಲ್ಲಿ ಕೊರಿಯಾ ವಿರುದ್ದ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. 

ಪ್ರೊ ಕಬಡ್ಡಿ ಲೀಗ್: ಪಾಟ್ನಾ ಪೈರೇಟ್ಸ್‌ಗೆ ಭರ್ಜರಿ ಜಯ

ಬೆಂಗಳೂರು: ಮೂರು ಬಾರಿಯ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (Pro Kabaddi League) ಟೂರ್ನಿಯಲ್ಲಿ 8ನೇ ಗೆಲುವು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ತಂಡವು ತಮಿಳ್ ತಲೈವಾಸ್ ವಿರುದ್ದ 52-24 ಅಂಕಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತು. ಸತತ 7ನೇ ಪಂದ್ಯದಲ್ಲೂ ಗೆಲುವು ದಾಖಲಿಸಲು ವಿಫಲವಾದ ತಮಿಳ್ ತಲೈವಾಸ್ ತಂಡವು 10ನೇ ಸ್ಥಾನದಲ್ಲೇ ಉಳಿದುಕೊಂಡಿದೆ.
 

Follow Us:
Download App:
  • android
  • ios