Asianet Suvarna News Asianet Suvarna News

ಹಾಕಿ ಲೀಗ್‌: ಹರ್ಮನ್‌ಪ್ರೀತ್‌, ಅಭಿಷೇಕ್‌ಗೆ ಬಂಪರ್‌ ಮೊತ್ತ

ಹರಾಜಿನಲ್ಲಿ ಎಲ್ಲಾ 8 ತಂಡಗಳು ಪ್ರಮುಖ ಆಟಗಾರರಿಗೆ ಬಹಳಷ್ಟು ಮೊತ್ತ ವ್ಯಯಿಸಿದವು. ಅಭಿಷೇಕ್‌ ಬೆಂಗಾಲ್ ಟೈಗರ್ಸ್‌ ತಂಡಕ್ಕೆ ₹72 ಲಕ್ಷಕ್ಕೆ, ಹಾರ್ದಿಕ್‌ ಸಿಂಗ್‌ ಯುಪಿ ರುದ್ರಾಸ್‌ಗೆ ₹70 ಲಕ್ಷಕ್ಕೆ ಹರಾಜಾದರು.

Hockey India League 2024 Auction Harmanpreet joins Soorma Hockey Club for 78 lakhs kvn
Author
First Published Oct 14, 2024, 12:24 PM IST | Last Updated Oct 14, 2024, 12:24 PM IST

ನವದೆಹಲಿ: ಭಾರತ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ನಿರೀಕ್ಷೆಯಂತೆಯೇ ಹಾಕಿ ಇಂಡಿಯಾ ಲೀಗ್‌ ಆಟಗಾರರ ಹರಾಜಿನಲ್ಲಿ ಬಂಪರ್‌ ಮೊತ್ತ ಗಳಿಸಿದ್ದಾರೆ. ಭಾನುವಾರ ನಡೆದ ಮೊದಲ ಸುತ್ತಿನ ಹರಾಜು ಪ್ರಕ್ರಿಯೆಯಲ್ಲಿ ಹರ್ಮನ್‌ಪ್ರೀತ್‌ ಸೂರ್ಮ ಕ್ಲಬ್‌ಗೆ ₹78 ಲಕ್ಷಕ್ಕೆ ಬಿಕರಿಯಾದರು.

ಹರಾಜಿನಲ್ಲಿ ಎಲ್ಲಾ 8 ತಂಡಗಳು ಪ್ರಮುಖ ಆಟಗಾರರಿಗೆ ಬಹಳಷ್ಟು ಮೊತ್ತ ವ್ಯಯಿಸಿದವು. ಅಭಿಷೇಕ್‌ ಬೆಂಗಾಲ್ ಟೈಗರ್ಸ್‌ ತಂಡಕ್ಕೆ ₹72 ಲಕ್ಷಕ್ಕೆ, ಹಾರ್ದಿಕ್‌ ಸಿಂಗ್‌ ಯುಪಿ ರುದ್ರಾಸ್‌ಗೆ ₹70 ಲಕ್ಷಕ್ಕೆ ಹರಾಜಾದರು. ಅಮಿತ್‌ ರೋಹಿದಾಸ್‌ ತಮಿಳುನಾಡು ಡ್ರ್ಯಾಗನ್ಸ್‌ಗೆ ₹48 ಲಕ್ಷಕ್ಕೆ, ಜುಗ್ರಾಜ್‌ ಸಿಂಗ್‌ ಬೆಂಗಾಲ್‌ಗೆ ₹48 ಲಕ್ಷಕ್ಕೆ ಬಿಕರಿಯಾದರು. ಐರ್ಲೆಂಡ್‌ನ ಡೇವಿಡ್‌ ಹಾರ್ಟೆ ತಮಿಳುನಾಡು ತಂಡಕ್ಕೆ ₹32 ಲಕ್ಷಕ್ಕೆ ಹರಾಜಾದರು. ಸೋಮವಾರವೂ ಹರಾಜು ಮುಂದುವರಿಯಲಿದೆ.

ಆಸೀಸ್‌ಗೆ ಶರಣಾದ ಕೌರ್ ಪಡೆ: ಸೆಮೀಸ್‌ ರೇಸ್‌ನಿಂದ ಭಾರತ ಬಹುತೇಕ ಔಟ್‌!

ಏಷ್ಯನ್‌ ಟೇಬಲ್‌ ಟೆನಿಸ್‌ನಲ್ಲಿ 3 ಪದಕ ಗೆದ್ದ ಭಾರತೀಯರು

ಅಸ್ತಾನ(ಕಜಕಸ್ತಾನ): ಏಷ್ಯನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮೂರು ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಭಾನುವಾರ ಮಹಿಳಾ ಡಬಲ್ಸ್‌ನಲ್ಲಿ ಭಾರತ ಐತಿಹಾಸಿಕ ಕಂಚಿನ ಪದಕ ತನ್ನದಾಗಿಸಿಕೊಂಡಿತು.

ಮೊದಲೆರಡು ಪದಕಗಳು ಭಾರತ ಪುರುಷ ಹಾಗೂ ಮಹಿಳಾ ತಂಡಗಳಿಗೆ ಒಲಿದಿತ್ತು. ಇತ್ತಂಡಗಳು ಕಂಚು ಜಯಸಿದ್ದವು. ಕೂಟದ ಕೊನೆ ದಿನ ಐಹಿಕಾ ಮುಖರ್ಜಿ ಹಾಗೂ ಸುತೀರ್ಥ ಮುಖರ್ಜಿ ಮಹಿಳಾ ಡಬಲ್ಸ್‌ನ ಸೆಮಿಫೈನಲ್‌ನಲ್ಲಿ ಜಪಾನ್‌ನ ಮಿಮಾ ಹರಿಮೊಟೊ-ಮಿಯು ಕಿಹಾರ ವಿರುದ್ಧ 4-11, 9-11, 8-11ರಲ್ಲಿ ಸೋಲನುಭವಿಸಿದರು. ಇದರೊಂದಿಗೆ ಭಾರತೀಯ ಜೋಡಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ಬೆಂಗ್ಳೂರಿನಲ್ಲಿ ಅಭ್ಯಾಸ ಶುರು ಆರಂಭಿಸಿದ ಟೀಂ ಇಂಡಿಯಾ; ರೋಹಿತ್, ಕೊಹ್ಲಿ ಭೇಟಿ ಮಾಡಿದ ಮಾಜಿ ಕೋಚ್ ದ್ರಾವಿಡ್

ಮಹಿಳಾ ತಂಡ ವಿಭಾಗದಲ್ಲಿ ಮನಿಕಾ ಬಾತ್ರಾ, ಐಹಿಕಾ, ಸುತೀರ್ಥಾ, ಪುರುಷರ ತಂಡ ವಿಭಾಗದಲ್ಲಿ ಶರತ್‌ ಕಮಲ್‌, ಮಾನವ್‌ ಠಕ್ಕರ್‌, ಹರ್ಮೀತ್‌ ದೇಸಾಯಿ ಕಂಚು ಜಯಿಸಿದ್ದರು.

ಮಹಿಳಾ ಮ್ಯಾರಥಾನ್‌ನಲ್ಲಿ ಕೀನ್ಯಾದ ರುಥ್‌ ವಿಶ್ವದಾಖಲೆ

ಷಿಕಾಗೊ: ಮಹಿಳಾ ಮ್ಯಾರಥಾನ್‌ನಲ್ಲಿ ಕೀನ್ಯಾದ ರುಥ್‌ ಚೆಪ್ಂಗೆಟಿಚ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಭಾನುವಾರ ಷಿಕಾಗೊ ಮ್ಯಾರಥಾನ್‌ನಲ್ಲಿ 30 ವರ್ಷದ ರುಥ್‌ 2 ಗಂಟೆ 09.56 ನಿಮಿಷಗಳಲ್ಲಿ ಗುರಿ ತಲುಪಿದರು. ಇದರೊಂದಿಗೆ 2023ರ ಬರ್ಲಿನ್‌ ಮ್ಯಾರಥಾನ್‌ನಲ್ಲಿ ಎಥಿಯೋಪಿಯಾದ ಟಿಗಿಸ್ಟ್‌ ಅಸ್ಸೆಫಾ(2 ಗಂಟೆ 11.53 ನಿಮಿಷ) ಬರೆದಿದ್ದ ದಾಖಲೆಯನ್ನು ಮುರಿದರು. ರುಥ್‌ ಮಹಿಳಾ ಮ್ಯಾರಥಾನ್‌ನಲ್ಲಿ 2 ಗಂಟೆ 10 ನಿಮಿಷಗಳೊಳಗೆ ಗುರಿ ಮುಟ್ಟಿದ ಮೊದಲ ಅಥ್ಲೀಟ್‌ ಎನಿಸಿಕೊಂಡಿದ್ದಾರೆ.
 

Latest Videos
Follow Us:
Download App:
  • android
  • ios