ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್‌ಗೆ ಈಗಾಗಲೇ ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ಅ.16ರಿಂದ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ ಪಂದ್ಯಕ್ಕಾಗಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದು, ಭಾನುವಾರ ಅಭ್ಯಾಸ ಆರಂಭಿಸಿದ್ದಾರೆ. 

ತಾರಾ ಆಟಗಾರರಾದ ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌ ಹಾಗೂ ರೋಹಿತ್‌ ಶರ್ಮಾ ನೆಟ್ಸ್‌ನಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರ ಜೊತೆ ಭಾರತದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಕೂಡಾ ಕಾಣಿಸಿಕೊಂಡರು. ಅಭ್ಯಾಸದ ವೇಳೆ ದ್ರಾವಿಡ್‌ ಅಟಗಾರರ ಜೊತೆ ಮಾತುಕತೆ ನಡೆಸುತ್ತಿರುವ ವಿಡಿಯೋಗಳು ವೈರಲ್‌ ಆಗಿವೆ. 

Scroll to load tweet…

ಇನ್ನು, ನ್ಯೂಜಿಲೆಂಡ್‌ ಆಟಗಾರರು ಈಗಾಗಲೇ ನಗರಕ್ಕೆ ಆಗಮಿಸಿದ್ದು, ಅಭ್ಯಾಸ ಆರಂಭಿಸಿದ್ದಾರೆ. ಬೆಂಗಳೂರು ಟೆಸ್ಟ್‌ ಬಳಿಕ ಉಭಯ ತಂಡಗಳು ಅ.24ರಿಂದ ಪುಣೆ, ನ.1ರಿಂದ ಮುಂಬೈನಲ್ಲಿ 2 ಟೆಸ್ಟ್‌ ಪಂದ್ಯಗಳನ್ನಾಡಲಿವೆ.

ನ್ಯೂಜಿಲೆಂಡ್‌ ಎದುರಿನ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ತಂಡ; ಮಾರಕ ವೇಗಿಗೆ ಉಪನಾಯಕ ಪಟ್ಟ!

ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:

ರೋಹಿತ್ ಶರ್ಮಾ(ನಾಯಕ), ಜಸ್ಪ್ರೀತ್ ಬುಮ್ರಾ(ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್(ವಿಕೆಟ್ ಕೀಪರ್), ದೃವ್ ಜುರೆಲ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

ಭಾರತ ಎದುರಿನ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ: 

ಟಾಮ್‌ ಲೇಥಮ್‌ (ನಾಯಕ), ಟಾಮ್‌ ಬ್ಲಂಡೆಲ್‌, ಮೈಕಲ್‌ ಬ್ರೇಸ್‌ವೆಲ್‌ (ಮೊದಲ ಟೆಸ್ಟ್‌ಗೆ ಮಾತ್ರ), ಮಾರ್ಕ್‌ ಚಾಪ್ಮನ್‌, ಡೆವೊನ್‌ ಕಾನ್‌ವೇ, ಮ್ಯಾಟ್‌ ಹೆನ್ರಿ, ಡ್ಯಾರೆಲ್‌ ಮಿಚೆಲ್‌, ವಿಲ್‌ ಓ’ ರೌರ್ಕೆ, ಅಜಾಜ್‌ ಪಟೇಲ್‌, ಗ್ಲೆನ್‌ ಫಿಲಿಪ್ಸ್‌, ರಚಿನ್‌ ರವೀಂದ್ರ, ಮಿಚೆಲ್‌ ಸ್ಯಾಂಟ್ನರ್‌, ಬೆನ್‌ ಸೀರ್ಸ್‌, ಇಶ್‌ ಸೋಧಿ (2, 3ನೇ ಟೆಸ್ಟ್‌ಗೆ), ಟಿಮ್‌ ಸೌಥಿ, ಕೇನ್‌ ವಿಲಿಯಮ್ಸನ್‌, ವಿಲ್‌ ಯಂಗ್‌.

ಸಿರಾಜ್‌ಗೂ ಮೊದಲೇ DSP ಆಗಿ ಅಧಿಕಾರ ಸ್ವೀಕರಿಸಿದ್ದಾರೆ ಟೀಂ ಇಂಡಿಯಾದ ಈ ಇಬ್ಬರು ವಿಶ್ವಕಪ್‌ ಹೀರೋಗಳು

ಶುಭಮ್‌ ಸೆಂಚುರಿ: ಕರ್ನಾಟಕ ವಿರುದ್ಧ ಮ.ಪ್ರ. ಬೃಹತ್‌ ಮೊತ್ತ

ಇಂದೋರ್‌: ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ 8 ಬಾರಿ ಚಾಂಪಿಯನ್‌ ಕರ್ನಾಟಕ ವಿರುದ್ಧ 2021-22ರ ಚಾಂಪಿಯನ್‌ ಮಧ್ಯಪ್ರದೇಶ ಬೃಹತ್‌ ಮೊತ್ತ ಕಲೆಹಾಕಿದೆ. ನಾಯಕ ಶುಭಮ್‌ ಶರ್ಮಾ ಆಕರ್ಷಕ ಶತಕದ ನೆರವಿನಿಂದ ಆತಿಥೇಯ ತಂಡ 3ನೇ ದಿನದಂತ್ಯಕ್ಕೆ 8 ವಿಕೆಟ್‌ಗೆ 425 ರನ್‌ ಗಳಿಸಿದೆ. ಸೋಮವಾರ ಕೊನೆ ದಿನವಾಗಿದ್ದು, ಪಂದ್ಯ ಡ್ರಾಗೊಳ್ಳುವುದು ಬಹುತೇಕ ಖಚಿತ.

ಮಧ್ಯಪ್ರದೇಶ ಮೊದಲ ದಿನ 4 ವಿಕೆಟ್‌ಗೆ 232 ರನ್‌ ಗಳಿಸಿತ್ತು. 2ನೇ ದಿನದಾಟ ಮಳೆಗೆ ಬಲಿಯಾಗಿತ್ತು. 3ನೇ ದಿನವಾದ ಭಾನುವಾರವೂ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಇದರ ಹೊರತಾಗಿಯೂ ಆತಿಥೇಯ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಹರ್ಪ್ರೀತ್‌ ಸಿಂಗ್‌ 91 ರನ್‌ ಗಳಿಸಿದ್ದಾಗ ಕೌಶಿಕ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಆದರೆ ಶುಭಮ್‌ ಶರ್ಮಾ ಕರ್ನಾಟಕ ಬೌಲರ್‌ಗಳನ್ನು ಚೆಂಡಾಡಿ ಶತಕ ಪೂರ್ಣಗೊಳಿಸಿದರು. ಅವರು ಅವರು 243 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ ಔಟಾಗದೆ 143 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಶರನ್ಸ್‌ ಜೈನ್ 51 ರನ್‌ ಕೊಡುಗೆ ನೀಡಿದರು. ಕರ್ನಾಟಕ ಪರ ವೈಶಾಕ್‌, ಹಾರ್ದಿಕ್‌ ರಾಜ್‌ ಹಾಗೂ ವಾಸುಕಿ ಕೌಶಿಕ್‌ ತಲಾ 2 ವಿಕೆಟ್‌ ಪಡೆದರು.

ಸ್ಕೋರ್: ಮಧ್ಯಪ್ರದೇಶ 425/8 (3ನೇ ದಿನದಂತ್ಯಕ್ಕೆ) (ಶುಭಮ್‌ 143*, ಹರ್‌ಪ್ರೀತ್‌ 91, ಶರನ್ಶ್‌ 51, ಕೌಶಿಕ್‌ 2-78, ಹಾರ್ದಿಕ್‌ 2-79, ವೈಶಾಖ್‌ 2-83)