ಕೊರೋನಾ ಸಂಕಷ್ಟವನ್ನು ಎದುರಿಸುತ್ತಿರುವ ಭಾರತಕ್ಕೆ ಈಗಾಗಲೇ 25 ಲಕ್ಷ ರುಪಾಯಿಗಳನ್ನು ಪ್ರಧಾನ ಮಂತ್ರಿ ಕೇರ್ಸ್‌ಗೆ ನೀಡಿದ್ದ ಹಾಕಿ ಇಂಡಿಯಾ ಇದೀಗ ಮತ್ತೆ 75 ಲಕ್ಷಗಳನ್ನು ದೇಣಿಗೆಯಾಗಿ ನೀಡಿದೆ. ಈ ಮೂಲಕ ಒಂದು ಕೋಟಿ ರುಪಾಯಿಗಳನ್ನು ಹಾಕಿ ಇಂಡಿಯಾ ಸರ್ಕಾರಕ್ಕೆ ದೇಣಿಗೆ ನೀಡಿದಂತಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.05): ಕೊರೋನಾ ವಿರುದ್ಧ ಹೋರಾಟಕ್ಕೆ ಹಾಕಿ ಇಂಡಿಯಾ ಶನಿವಾರ ಹೆಚ್ಚುವರಿ 75 ಲಕ್ಷ ರು.ಗಳನ್ನು PM CARES ದೇಣಿಗೆಯಾಗಿ ನೀಡಿದೆ. ಏ.1ರಂದು ಸಂಸ್ಥೆ 25 ಲಕ್ಷ ರು.ಗಳನ್ನು ನೀಡಿತ್ತು. 

Scroll to load tweet…

‘ಭಾರತದ ಜನತೆ ಸದಾ ನಮಗೆ ಬೆಂಬಲ ನೀಡಿದ್ದಾರೆ. ಕೊರೋನಾ ಸೋಂಕನ್ನು ತಡೆಗಟ್ಟಲು ಇಡೀ ದೇಶಕ್ಕೆ ಒಟ್ಟಾಗಿ ಹೋರಾಡುತ್ತಿದೆ. ಇಂತಹ ಸಮಯದಲ್ಲಿ ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಬೇಕು. ಈ ಉದ್ದೇಶದಿಂದ ಕಾರ್ಯಕಾರಿ ಸಮಿತಿ ಹೆಚ್ಚುವರಿ ದೇಣಿಗೆ ನೀಡಲು ನಿರ್ಧರಿಸಿದೆ’ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ಮುಷ್ತಾಕ್‌ ಅಹ್ಮದ್‌ ಹೇಳಿದ್ದಾರೆ.

ಕೊರೋನಾ ಸಂಕಷ್ಟ: ದೇಶಕ್ಕೆ ಬರೋಬ್ಬರಿ 51 ಕೋಟಿ ರುಪಾಯಿ ದೇಣಿಗೆ ನೀಡಿದ ಬಿಸಿಸಿಐ..!

Scroll to load tweet…

ಹಾಕಿ ಇಂಡಿಯಾ ಯಾವಾಗಲೂ ಅಗತ್ಯವಿರುವ ಅಶಕ್ತರಿಗೆ ನೆರವಿನ ಹಸ್ತ ನೀಡುತ್ತಲೇ ಬಂದಿದೆ. ಕಾರ್ಯಕಾರಿ ಸಮಿತಿ ಒಮ್ಮತದಿಂದ ಸರ್ಕಾರಕ್ಕೆ ಒಂದು ಕೋಟಿ ರುಪಾಯಿ ಹಣ ನೀಡಲು ತೀರ್ಮಾನಿಸಿತು. ಈ ರೋಗದಿಂದ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿದೆ. ಇಂತಹ ಸಂದರ್ಭದಲ್ಲಿ ದೇಶಕ್ಕೆ ನೆರವಾಗುವುದು ರಾಷ್ಟ್ರೀಯ ಹಿತಾದೃಷ್ಟಿಯಿಂದ ಒಳ್ಳೆಯದ್ದು ಎಂದು ಹಾಕಿ ಇಂಡಿಯಾ ಹಾಕಿ ಇಂಡಿಯಾದ ಕಾರ್ಯದರ್ಶಿ ರಾಜೀಂದರ್ ಸಿಂಗ್ ತಿಳಿಸಿದ್ದಾರೆ.

3 ವಾರ, 3 ಮೈದಾನ, ಖಾಲಿ ಕ್ರೀಡಾಂಗಣ; IPL ಆಯೋಜನೆಗೆ ಹೊಸ ಪ್ಲಾನ್!

ಇನ್ನು ಭಾರತದ ಗಾಲ್ಫ್ ಪಟು ಅನಿರ್ಬನ್ ಲಹರಿ ಪಿಎಂ ಕೇರ್ಸ್‌ಗೆ 7 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ. ಪ್ಯಾರಾ ಶಟ್ಲರ್ ಪ್ರಮೋದ್ ಭಗತ್ ಒಂದು ಲಕ್ಷ ರುಪಾಯಿಗಳನ್ನು ಪಿಎಂ ಕೇರ್ಸ್‌ಗೆ ನೀಡಿದರೆ, ಪ್ಯಾರಾ ಹೈಜಂಪರ್ ಶರದ್ ಕುಮಾರ್ 2 ಲಕ್ಷ ರುಪಾಯಿಗಳನ್ನು ಓಡಿಶಾ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ.