3 ವಾರ, 3 ಮೈದಾನ, ಖಾಲಿ ಕ್ರೀಡಾಂಗಣ; IPL ಆಯೋಜನೆಗೆ ಹೊಸ ಪ್ಲಾನ್!
ಕೊರೋನಾ ವೈರಸ್ ಕಾರಣ ಭಾರತವೇ ಲಾಕ್‌ಡೌನ್ ಆಗಿದೆ. ಮಾರ್ಚ್ 29ಕ್ಕೆ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯಲ್ಲಿ ಎಪ್ರಿಲ್ 15ವರೆಗೆ ಮುಂದೂಡಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗುತ್ತಿರುವ ಕಾರಣ ಸದ್ಯಕ್ಕೆ ಐಪಿಎಲ್ ಆಯೋಜನೆ ಕಷ್ಟ, ಹಾಗಂತ ಅಭಿಮಾನಿಗಳು ಬೇಸರ ಬಡಬೇಕಿಲ್ಲ. ಶೀಘ್ರದಲ್ಲೇ ಚುಟುಕು ಹಾಗೂ ಹೊಸ ಮಾದರಿ ಐಪಿಎಲ್ ಆಯೋಜಿಸಲು ಕಸರತ್ತು ನಡೆಯುತ್ತಿದೆ. ಈ ಕುರಿತ ವಿವರ ಇಲ್ಲಿದೆ.
ಬಿಸಿಸಿಐಗೆ ತಲೆನೋವಾದ 2020ರ ಐಪಿಎಲ್ ಟೂರ್ನಿ ಆಯೋಜನೆ
ಮಾರ್ಚ್ 29ಕ್ಕೆ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಕೊರೋನಾದಿಂದ ಮುಂದೂಡಿದ ಬಿಸಿಸಿಐ
ಹೊಸ ಮಾದರಿಯಲ್ಲಿ 2020ರ ಐಪಿಎಲ್ ಟೂರ್ನಿ ನಡೆಯಲಿದೆ ಎಂದ ಮಾಜಿ ಕ್ರಿಕೆಟಿಗ ಕೇವಿನ್ ಪೀಟರ್ಸನ್
3 ಸುರಕ್ಷಿತ ಮೈದಾನಗಳಲ್ಲಿ ಐಪಿಎಲ್ ಆಯೋಜಿಸಲು ಮಾಸ್ಟರ್ ಪ್ಲಾನ್
2 ತಿಂಗಳು ನಡೆಯುತ್ತಿದ್ದ ಐಪಿಎಲ್ ಟೂರ್ನಿಯನ್ನು 3 ವಾರಕ್ಕೆ ಸೀಮಿತ
ಪ್ರೇಕ್ಷಕರ ಪ್ರವೇಶ ನಿರಾಕರಿಸಿ, ಖಾಲಿ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜನೆ ಎಂದು ಪೀಟರ್ಸನ್
ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಐಪಿಎಲ್ ಆಯೋಜನೆ ಸಾಧ್ಯ ಎಂದ ಇಂಗ್ಲೆಂಡ್ ಮಾಜಿ ಕ್ರಿಕೆಟರ್
ಐಪಿಎಲ್ ಟೂರ್ನಿ ನಡೆಯಲಿದೆ ಅನ್ನೋ ವಿಶ್ವಾಸ ನನಗಿದೆ ಎಂದು ಪೀಟರ್ಸನ್
ವಿಶ್ವದ ಇತರ ಕ್ರಿಕೆಟಿಗರೂ ಐಪಿಎಲ್ ಆಡಲು ಕಾತರರಾಗಿದ್ದಾರೆ, ಹೀಗಾಗಿ ಐಪಿಎಲ್ ಆಯೋಜನೆ ಉತ್ತಮ ಎಂದ ಪೀಟರ್ಸನ್
ಬಿಸಿಸಿಐಗೆ ಹೊಸ ಪ್ಲಾನ್ ಹೇಳಿದ ಕೆವಿನ್ ಪೀಟರ್ಸನ್
ಮೊದಲು ಆರೋಗ್ಯ ಮುಖ್ಯ, ಸದ್ಯಕ್ಕೆ ಐಪಿಎಲ್ ಆಯೋಜನೆ ಇಲ್ಲ ಎಂದಿರುವ ಗಂಗೂಲಿ