ಕೊರೋನಾಗಿಂತ ಡೇಂಜರಸ್ ಚಿಕ್ಕಬಳ್ಳಾಪುರದಲ್ಲಿ ಪತ್ತೆಯಾದ ಝೀಕಾ ವೈರಸ್, ರೋಗ ಲಕ್ಷಣ ಹೇಗಿರುತ್ತೆ?

ಕೇರಳ ರಾಜ್ಯದಲ್ಲಿ ಝೀಕಾ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಈಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆತಂಕ ಸೃಷ್ಟಿಗೆ ಕಾರಣವಾಗಿದೆ. ಸೊಳ್ಳೆಗಳಿಂದ ಹರಡೋ ಝೀಕಾ ವೈರಸ್ ಕೊರೋನಾಗಿಂತಲೂ ಡೇಂಜರಸ್ ಎಂದು ಹೇಳಲಾಗ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Zika virus found in mosquitoes in Karnatakas Chikkaballapur, Symptoms of dangerous virus Vin


ಕೇರಳ ರಾಜ್ಯದಲ್ಲಿ ಝೀಕಾ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಈಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆತಂಕ ಸೃಷ್ಟಿಗೆ ಕಾರಣವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ದಿಬ್ಬೂರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಝೀಕಾ ವೈರಸ್‌ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಇಲಾಖೆಯು ಕಟ್ಟೆಚ್ಚರ ವಹಿಸಿದ್ದು, ಝೀಕಾ ವೈರಸ್‌ ಹರಡುವುದನ್ನು ನಿಯಂತ್ರಿಸಲು ಮಾರ್ಗಸೂಚಿ ಪ್ರಕಟ ಮಾಡಿದೆ. ಗರ್ಭಿಣಿಯರು ಮತ್ತು ಜ್ವರದಿಂದ ಬಳಲುತ್ತಿದ್ದವರ ರಕ್ತವನ್ನು ಪರೀಕ್ಷೆಗಾಗಿ ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿದೆ. , ಈವರೆಗೆ ಯಾವುದೇ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿಲ್ಲ. ಹೀಗಿದ್ದರೂ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮಗಳಿಗಾಗಿ ಮಾರ್ಗಸೂಚಿಯನ್ನು ಸರ್ಕಾರ ರವಾನಿಸಿದೆ.

ಝೀಕಾ ವೈರಸ್ ಮುಂಜಾಗ್ರತಾ ಕ್ರಮವಾಗಿ ರಾಜ್ಯದಾದ್ಯಂತ 69 ಕಡೆಗಳಲ್ಲಿ ಕೀಟಶಾಸ್ತ್ರಜ್ಞರು ಸೊಳ್ಳೆಗಳ ಪರೀಕ್ಷೆ ನಡೆಸಿದ್ದರು. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯ 6 ಕಡೆಗಳಲ್ಲಿ ಕೀಟಶಾಸ್ತ್ರಜ್ಞರಿಂದ ಸೊಳ್ಳೆಗಳ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದಲ್ಲಿ ನಡೆದ ಪರೀಕ್ಷೆಯಲ್ಲಿ ಸೊಳ್ಳೆಗಳಲ್ಲಿ ಝೀಕಾ ವೈರಸ್ ಇರುವುದು ಪತ್ತೆಯಾಗಿತ್ತು. ಝೀಕಾ ವೈರಸ್ ಕೊರೋನಾ ಸೋಂಕಿಗಿಂತಲೂ ಹೆಚ್ಚು ಡೇಂಜರಸ್ ಎಂದು ತಿಳಿದುಬಂದಿದೆ. ಹೀಗಾಗಿ ಈ ವೈರಸ್‌ನ ರೋಗ ಲಕ್ಷಣ ಹೇಗಿರುತ್ತೆ ತಿಳ್ಕೊಳ್ಳೋಣ.

ಝೀಕಾ ವೈರಸ್‌ ಪತ್ತೆ ಹಿನ್ನೆಲೆ: ಸರ್ಕಾರದ ಮಾರ್ಗಸೂಚಿ, ಪಾಸಿಟಿವ್‌ ಬಂದರೆ 5 ಕಿ.ಮೀ. ಕಂಟೈನ್ಮೆಂಟ್‌..!

ಝೀಕಾ ವೈರಸ್‌ನ ರೋಗ ಲಕ್ಷಣಗಳು
ಝೀಕಾ ವೈರಸ್‌ನ ಲಕ್ಷಣಗಳು ಡೆಂಗ್ಯೂ ಮತ್ತು ವೈರಲ್‌ನಂತಹ ಜ್ವರ, ಕೀಲು ನೋವು, ದೇಹದ ಮೇಲೆ ದದ್ದು, ಆಯಾಸ, ತಲೆನೋವು ಮತ್ತು ಕಣ್ಣುಗಳು ಕೆಂಪಾಗುವುದು ಮೊದಲಾದವುಗಳನ್ನು ಒಳಗೊಂಡಿದೆ. ಝಿಕಾ ವೈರಸ್ ಮೈಕ್ರೊಸೆಫಾಲಿ ಕಾಯಿಲೆಗೆ ಕಾರಣವಾಗುತ್ತದೆ, ಗರ್ಭಿಣಿಗೆ ತಗುಲಿದರೆ ಹುಟ್ಟುವ ಮಗುವಿ ಬೆಳವಣಿಗೆ ಕುಂಠತವಾಗಿ, ಬೆಳೆಯದ ಮೆದುಳಿನೊಂದಿಗೆ ಮಗು ಜನಿಸುವ ಸಾಧ್ಯತೆ ಇರುತ್ತದೆ.  ಮತ್ತೊಂದೆಡೆ, ಸಂಭವಿಸುವ ಗ್ಲುಲೆನ್-ಬಾರಾಸಿಂಡ್ರೋಮ್ ದೇಹದ ನರವ್ಯೂಹದ ಮೇಲೆ ದಾಳಿ ಮಾಡುತ್ತದೆ, ಇದು ಇತರೆ ಅನೇಕ ದೈಹಿಕ ಸಮಸ್ಯೆಗಳನ್ನು ಉಂಟುಮಾಡಬಹುದು.

ಗರ್ಭಿಣಿಯರಿಗೆ ಹೆಚ್ಚು ಮಾರಕ ಝೀಕಾ ವೈರಸ್
ಝೀಕಾ ಎನ್ನುವುದು ವೈರಸ್‌ನಿಂದ ಹರಡುವ ಸೋಂಕು. ಇದು ಮುಖ್ಯವಾಗಿ ಸೊಳ್ಳೆಗಳಿಂದ ಹರಡುವ ಕಾಯಿಲೆಯಾಗಿದೆ. ಪ್ರಾರಂಭದಲ್ಲಿ ಸೌಮ್ಯ ಲಕ್ಷಣ ತೋರಲಿದ್ದು, ನಂತರದಲ್ಲಿ ಜೀವ ತೆಗೆಯುವ ಮಾರಣಾಂತಿಕ ರೋಗವಾಗಿ ಬದಲಾಗುತ್ತದೆ. ಗರ್ಭಿಣಿ ಸೋಂಕಿಗೆ ಒಳಗಾದಾಗ ಈ ರೋಗವು ಹುಟ್ಟಲಿರುವ ಮಗುವಿನ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ. ಹೀಗಾಗಿ ಗರ್ಭಿಣಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎನ್ನುತ್ತಾರೆ ವೈದ್ಯರು.

ಏಷ್ಯನ್ ಟೈಗರ್ ಸೊಳ್ಳೆ ಕಚ್ಚೋದರಿಂದ ಸಾವು ಸಂಭವಿಸಬಹುದು ಜೋಪಾನ!

ಈ ಸೋಂಕಿಗೆ ಔಷಧಿ ಇಲ್ಲ
ಝೀಕಾ ವೈರಸ್ ಸೋಂಕಿಗೆ ಯಾವುದೇ ನಿರ್ದಿಷ್ಟ ಔಷಧಿ  ಇಲ್ಲ.  ವಿಜ್ಞಾನಿಗಳು ದೀರ್ಘಕಾಲದವರೆಗೆ ವೈರಸ್ ಹಾನಿಕರವಲ್ಲ ಅಂತ ಭಾವಿಸಿದ್ದರು,ಸದ್ಯ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದ್ದರಿಂದ ನಿಮ್ಮ ವೈದ್ಯರು ಜ್ವರ ಕಡಿಮೆ ಮಾಡುವವರು ಮತ್ತು ವಾಂತಿ ಮತ್ತು ದದ್ದುಗಳಿಗೆ ಔಷಧಿಗಳನ್ನು ಸೂಚಿಸಬಹುದು. 

ಝೀಕಾ ವೈರಸ್ ತಡೆಗಟ್ಟುವುದು ಹೇಗೆ? 
ಝೀಕಾ ವೈರಸ್ ತಡೆಗಟ್ಟಲು ಸೊಳ್ಳೆ ಕಡಿತವನ್ನು ತಪ್ಪಿಸಬೇಕು. ಇದಕ್ಕಾಗಿ ದೇಹದ ಗರಿಷ್ಠ ಭಾಗವನ್ನು ಮುಚ್ಚಿರಬೇಕು. ಬಯಲಿನಲ್ಲಿ ಮಲಗಿದರೆ ಸೊಳ್ಳೆ ಪರದೆ ಬಳಸುವುದು ಒಳ್ಳೆಯದು. ಮನೆ ಮತ್ತು ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ. ಸೊಳ್ಳೆಗಳು ಬೆಳೆಯದಂತೆ ತಡೆಯಲು ನಿಂತ ನೀರನ್ನು ಸಂಗ್ರಹಿಸಲು ಬಿಡಬೇಡಿ. ಅಲ್ಲದೆ ಜ್ವರ, ಗಂಟಲು ನೋವು, ಕೀಲು ನೋವು, ಕೆಂಪಗಾಗಿಸುವಿಕೆಯಂತಹ ರೋಗ ಲಕ್ಷಣಗಳನ್ನು ಗಮನಿಸಿದರೆ, ತಕ್ಷಣವೇ ವೈದ್ಯರನ್ನು ಭೇಟಿಮಾಡಿ. ಸಾಕಷ್ಟು ವಿಶ್ರಾಂತಿಯೊಂದಿಗೆ ಸಾಧ್ಯವಾದಷ್ಟು ದ್ರವಾಹಾರ ಸೇವಿಸಿ.   

Latest Videos
Follow Us:
Download App:
  • android
  • ios