ಜಿಮ್ ಮಾಡುವಾಗ ಹಾರ್ಟ್‌ ಅಟ್ಯಾಕ್ ಆಗೋ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗ್ತಿದೆ. ಚೆನ್ನೈನಲ್ಲಿ ವರ್ಕೌಟ್ ಮಾಡುವಾಗ ಮಹಿಳಾ ವೈದ್ಯೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಹೃದಯಾಘಾತ ಆಗೋದು ಯಾಕೆ? ಈ ಅಪಾಯವನ್ನು ಕಡಿಮೆ ಮಾಡೋಕೆ ಏನ್ ಮಾಡ್ಬೋದು. ಇಲ್ಲಿದೆ ಮಾಹಿತಿ.

ಚೆನ್ನೈ: ತೂಕ ಇಳಿಸಿಕೊಳ್ಳಲು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಚೆನ್ನೈನ ಯುವ ಮಹಿಳಾ ವೈದ್ಯರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತರನ್ನು ಅನ್ವಿತಾ (24) ಎಂದು ಗುರುತಿಸಲಾಗಿದ್ದು, ಚೆನ್ನೈನ ಕಿಲ್ಪಾಕ್ಕಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಮುಗಿಸಿದ್ದಾರೆ. ಖ್ಯಾತ ನೇತ್ರಶಾಸ್ತ್ರಜ್ಞರ ಪುತ್ರಿ ಅನ್ವಿತಾ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದರು. 

ಅನ್ವಿತಾ ತಮ್ಮ ದಿನಚರಿಯಂತೆ ತೂಕ ಇಳಿಸಿಕೊಳ್ಳಲು (Weight loss) ಕಿಲ್ಪಾಕ್ಕಂನ ನ್ಯೂ ಅವಡಿ ರಸ್ತೆಯಲ್ಲಿರುವ ಖಾಸಗಿ ಫಿಟ್‌ನೆಸ್ ಸೆಂಟರ್‌ನಲ್ಲಿ ವರ್ಕೌಟ್ ಮಾಡುತ್ತಿದ್ದರು. ವ್ಯಾಯಾಮ (Exercise) ಮಾಡಿದ ಕೆಲವೇ ನಿಮಿಷಗಳಲ್ಲಿ ಅವರು ಇದ್ದಕ್ಕಿದ್ದಂತೆ ಮೂರ್ಛೆ ಹೋದರು. ಇದರಿಂದ ಗಾಬರಿಗೊಂಡ ಜಿಮ್ ಸಿಬ್ಬಂದಿ ತಕ್ಷಣ ಧಾವಿಸಿ ಅನ್ವಿತಾಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ (Heartattack) ಅನ್ವಿತಾ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

Exercise ಅತಿಯಾದ್ರೆ ಹಾರ್ಟ್ ಅಟ್ಯಾಕ್ ಗ್ಯಾರಂಟಿ, ಅತಿಯಾಗ್ತಿದೆ ಅಂತ ತಿಳ್ಕೊಳ್ಳೋದು ಹೇಗೆ ?

ಕೊರೊನಾವೈರಸ್ ಸಾಂಕ್ರಾಮಿಕದ ನಂತರ ಯುವಜನರಲ್ಲಿ ಹೃದಯಾಘಾತದಿಂದ ಹಲವಾರು ಸಾವುಗಳು (Death) ಸಂಭವಿಸಿವೆ. ಕೊರೊನಾ ವೈರಸ್ ಲಸಿಕೆ ಈ ಸಾವಿಗೆ ಕಾರಣ ಎಂದು ಹಲವಾರು ಬಾರಿ ಚರ್ಚೆಗಳು ನಡೆದಿವೆ, ಆದರೆ, ಯುವಜನರಲ್ಲಿ ಹೃದಯಾಘಾತದಿಂದ ಹಠಾತ್ ಸಾವುಗಳು ಹೆಚ್ಚಾಗುತ್ತಿರುವುದಕ್ಕೆ ಕರೋನಾ ಲಸಿಕೆ ಕಾರಣವಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಇತ್ತೀಚೆಗೆ ಸ್ಪಷ್ಟಪಡಿಸಿದೆ. ಐಸಿಎಂಆರ್ ಇತ್ತೀಚೆಗೆ ನಡೆಸಿದ ಅಧ್ಯಯನದ (Study) ಆಧಾರದಲ್ಲಿ ಇದನ್ನು ಹೇಳಲಾಗಿದೆ.

ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಹೃದಯಾಘಾತ ಆಗೋದು ಯಾಕೆ?
ಜಿಮ್‌ನಲ್ಲಿ ಕೆಲಸ ಮಾಡುವುದು ಉತ್ತಮ ಮತ್ತು ಆರೋಗ್ಯಕರವಾಗಿರಲು ಉತ್ತಮ ಮಾರ್ಗವಾಗಿದೆ. ಆದರೆ ಇತ್ತೀಚಿಗೆ ವರ್ಕೌಟ್ ಮಾಡುವಾಗಲೇ ಹಾರ್ಟ್‌ಅಟ್ಯಾಕ್ ಆಗೋ ಹಲವಾರು ಘಟನೆಗಳು ವರದಿಯಾಗಿವೆ. ನಿಯಮಿತ ವ್ಯಾಯಾಮವು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ನಿಜವಾಗಿದ್ದರೂ, ತೀವ್ರವಾದ ವ್ಯಾಯಾಮವು ಕೆಲವೊಮ್ಮೆ ರಕ್ತದೊತ್ತಡದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಇದು ಹೃದಯಾಘಾತಕ್ಕೆ ಕಾರಣವಾಗಬಹುದು. 

ಜಾಗಿಂಗ್‌ ಮಾಡುವಾಗಲೇ ಸಿಇಒಗೆ ಹೃದಯಾಘಾತ, ಸ್ಮಾರ್ಟ್‌ವಾಚ್‌ನಿಂದ ಬದುಕಿತು ಜೀವ!

ಈಗಾಗಲೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ಹೃದಯಾಘಾತದ ಅಪಾಯವು ಇನ್ನೂ ಹೆಚ್ಚಾಗಿರುತ್ತದೆ. ಅಧಿಕ ರಕ್ತದೊತ್ತಡವು ಅಪಧಮನಿಗಳು ಮತ್ತು ಹೃದಯರಕ್ತನಾಳದ ವ್ಯವಸ್ಥೆಯ ಇತರ ಭಾಗಗಳನ್ನು ಹಾನಿಗೊಳಿಸುತ್ತದೆ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತವಾಗುವ ಸಾಧ್ಯತೆಯನ್ನು ಹೆಚ್ಚಿಸುವ ಕೆಲವು ಅಪಾಯಕಾರಿ ಅಂಶಗಳಿವೆ. ಇವುಗಳಲ್ಲಿ ಬೊಜ್ಜು, ಧೂಮಪಾನ (Smoking), ಅತಿಯಾದ ಮದ್ಯಪಾನ ಮತ್ತು ನಿಯಮಿತ ವ್ಯಾಯಾಮದ ಕೊರತೆಯೂ ಸೇರಿದೆ.

ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಹೀಗೆ ಮಾಡಿ
ಜಿಮ್‌ನಲ್ಲಿ ಹೃದಯಾಘಾತವನ್ನು ಅನುಭವಿಸುವ ಸಾಧ್ಯತೆಯನ್ನು ಕಡಿಮೆ ಮಾಡಲು ಸುರಕ್ಷಿತವಾಗಿ ವ್ಯಾಯಾಮ ಮಾಡುವುದು ಅತ್ಯಗತ್ಯ. ಯಾವುದೇ ಹೊಸ ಫಿಟ್‌ನೆಸ್ ದಿನಚರಿಯನ್ನು ಪ್ರಾರಂಭಿಸುವ ಮೊದಲು ವೈದ್ಯರೊಂದಿಗೆ ಚರ್ಚೆಯನ್ನು ನಡೆಸಿ ಸಲಹೆ ಪಡೆಯಲು ಮರೆಯದಿರಿ.ವ್ಯಾಯಾಮದ ಸಮಯದಲ್ಲಿ ರಕ್ತದೊತ್ತಡವನ್ನು ನಿಯಮಿತವಾಗಿ ಪರಿಶೀಲಿಸುವುದು ಒಳ್ಳೆಯದು. ತಾಲೀಮು ಅವಧಿಯ ಉದ್ದಕ್ಕೂ ಯಾವಾಗಲೂ ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಿ. ವರ್ಕೌಟ್ ಮಾಡುವಾಗ ವಿಶ್ರಾಂತಿ ಪಡೆಯುವುದನ್ನು ಮರೆಯದಿರಿ.