Cancer Symptoms: ಉಗುರಲ್ಲೇ ಗೊತ್ತಾಗುತ್ತೆ ಮಾರಾಣಾಂತಿಕ ರೋಗದ ಕುರುಹು!
ಕ್ಯಾನ್ಸರ್ ಎಂಬ ಮಾರಕ ರೋಗ ಸದ್ದಿಲ್ಲದೇ ವೃದ್ಧಿಯಾಗುತ್ತಲೇ ಇದೆ. ಇದಕ್ಕೆ ಕಾರಣಗಳು ಹಲವು. ಆದರೆ ಅಚ್ಚರಿ ಅನ್ನೋ ಹಾಗೆ ಕ್ಯಾನ್ಸರ್ ಸೂಚನೆ ನಿಮ್ಮ ಉಗುರುಗಳಲ್ಲಿ ಕಾಣಬಹುದು. ಹೀಗಾಗಿ ಉಗುರನ್ನು ಆಗಾಗ ಹುಷಾರಾಗಿ ಗಮನಿಸುತ್ತಿರಿ.
ಸೌರವ್ ಐವತ್ತು ವರ್ಷ ವಯಸ್ಸಿನ ಬ್ಯಾಂಕ್ (Bank) ಉದ್ಯೋಗಿ. ಕಳೆದ ಕೆಲವು ವರ್ಷಗಳಿಂದ ಸದಾ ಒತ್ತಡದಲ್ಲಿ ಕೆಲಸ ಮಾಡುವುದು ರೂಢಿಯಾಗಿದೆ. ಮಕ್ಕಳನ್ನು ಓದಿಸುವ ಹೊಣೆಗಾರಿಕೆಯೂ ಇರುವ ಕಾರಣ ಅದು ಅನಿವಾರ್ಯ. ಜೊತೆಗೆ ಕೆಲಸದಲ್ಲಿ ಹೆಚ್ಚೆಚ್ಚು ಯುವಕರಿಗೇ ಮನ್ನಣೆ ಸಿಗುತ್ತಿರುವುದು ಅವರ ಅಭದ್ರತೆಯನ್ನು ಹೆಚ್ಚಿಸಿದೆ. ಯಾವಾಗ ಕೆಲಸ ಕಳೆದುಕೊಳ್ಳುತ್ತೇನೋ, ಕೆಲಸ ಹೋದರೆ ಮಕ್ಕಳ ವಿದ್ಯಾಭ್ಯಾಸ, ಅದಕ್ಕೆಂದು ಮಾಡಿದ ಸಾಲದ ಕತೆಯೇನು ಅನ್ನುವ ಯೋಚನೆಯಲ್ಲಿ ಎಷ್ಟೋ ಸಲ ನಿದ್ದೆಯನ್ನೂ ಬಿಟ್ಟಿದ್ದಾರೆ. ಹೀಗೆ ಸದಾ ಭವಿಷ್ಯದ ಚಿಂತೆಯಲ್ಲೇ ತಮ್ಮ ದೇಖಾರೇಖಿ ನೋಡಿಕೊಳ್ಳುವುದನ್ನೂ ಮರೆತ ಸೌರವ್‌ಗೆ ಇತ್ತೀಚೆಗೆ ಗಾಯದ ಮೇಲೆ ಬರೆ ಎಳೆದಂತೆ ಒಂದು ಶಾಕಿಂಗ್ ನ್ಯೂಸ್ (Shockig news) ಗೊತ್ತಾಯ್ತು.
ಸೌರವ್ ಆಫೀಸಿಗೆ ಹೋಗುವ ಗಡಿಬಿಡಿಯಲ್ಲೇ ಸ್ನಾನಕ್ಕಿಳಿದಿದ್ದರು. ಸಡನ್ನಾಗಿ ಉಗುರುಗಳ (Nails) ಸುತ್ತ ಊದಿಕೊಂಡ ಹಾಗನಿಸಿತು. ಇದೇನಪ್ಪಾ ವಿಚಿತ್ರ ಅಂದುಕೊಳ್ಳುತ್ತಲೇ ಸ್ನಾನ ಮುಗಿಸಿ ಬಂದರು. ಆಮೇಲೆ ಆಫೀಸ್ ಕೆಲಸದಲ್ಲಿ ಮುಳುಗಿಹೋದವರಿಗೆ ಉಗುರಿನ ನೆನಪೇ ಬರಲಿಲ್ಲ. ಸಣ್ಣಗೆ ನೋವಾದಂತೆ ಅನಿಸಿದರೂ ಅತ್ತ ಲಕ್ಷ ಹರಿಸುವಷ್ಟು ಸಮಯ ಅವರ ಬಳಿ ಇರಲಿಲ್ಲ. ಇದಾಗಿ ಕೆಲವು ದಿನಕ್ಕೇ ಅವರ ಆಫೀಸಿನಲ್ಲಿ ಹೆಲ್ತ್ ಚೆಕಪ್‌ಗೆ (Health checkup) ಬಂದ ಡಾಕ್ಟರ್‌ಗೆ ಏಕೋ ಅನುಮಾನ ಬಂದು ಕೆಲವು ಟೆಸ್ಟ್ ಮಾಡಿಸಲು ಹೇಳಿದರು. ಆ ಟೆಸ್ಟ್ ಮಾಡಿಸಿದ ಸೌರವ್‌ಗೆ ದೊಡ್ಡ ಆಘಾತ ಕಾದಿತ್ತು. ಅವರಿಗೆ ಕ್ಯಾನ್ಸರ್ (Cancer) ಅಟ್ಯಾಕ್ ಆಗಿತ್ತು.
Anxiety Symptoms: ನಿಮಗೂ ಕಾಡುತ್ತಿದ್ಯಾ ಈ ವ್ಯಾಧಿ? ಟೆಸ್ಟ್ ಮಾಡಿಕೊಳ್ಳಿ
ಆ ಡಾಕ್ಟರ್ ಈ ಸೂಕ್ಷ್ಮ ವಿವರ ಗ್ರಹಿಸಿ ಕೂಡಲೇ ಟೆಸ್ಟ್ ಮಾಡಿಸಿದ ಕಾರಣ ಇನ್ನೂ ಆರಂಭಿಕ ಹಂತದಲ್ಲಿದ್ದ ಕ್ಯಾನ್ಸರ್‌ಗೆ ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುವುದು ಸಾಧ್ಯವಾಯ್ತು. ಆದರೆ ಹೆಚ್ಚಿನವರು ಈ ಬಗ್ಗೆ ಲಕ್ಷ್ಯ ವಹಿಸೋದಿಲ್ಲ. ವಯಸ್ಸು ಐವತ್ತಾಗುತ್ತಿದ್ದಂತೆ, ಇನ್ನು ವಯಸ್ಸಾಯ್ತಲ್ಲಾ, ಉಗುರಲ್ಲಿ ಹೀಗೆಲ್ಲ ಆಗೋದು ಕಾಮನ್ ಇರಬಹುದು, ಇದು ವಯೋ ಸಹಜ ಎಂದು ಭಾವಿಸಿಬಿಡುತ್ತಾರೆ. ಈ ನಿರ್ಲಕ್ಷ್ಯವೇ ಅವರ ಜೀವಕ್ಕೆ ಎರವಾಗುವ ಉದಾಹರಣೆಯೂ ಇವೆ. ಹೀಗಾಗಿ ಉಗುರನ್ನು ಆಗಾಗ ಗಮನಿಸೋದನ್ನು, ಉಗುರಿನಲ್ಲಿ ಸೂಕ್ಷ್ಮ ವ್ಯತ್ಯಾಸವಾದಾಗ ವೈದ್ಯರನ್ನು ಸಂಪರ್ಕಿಸೋದನ್ನು ಮರೆಯಬೇಡಿ.
ಉಗುರುಗಳ ಬಣ್ಣ ಬದಲಾದರೂ ಅದು ಕ್ಯಾನ್ಸರ್ ಸೂಚನೆ ಆಗಿರಬಹುದು. ಹೆಚ್ಚಾಗಿ ಚರ್ಮದ (Skin) ಕ್ಯಾನ್ಸರ್‌ನಿಂದ ದೇಹದ ಬಣ್ಣದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದರಲ್ಲಿ ಉಗುರುಗಳ ಬಣ್ಣ ಬದಲಾಗೋದೂ ಮುಖ್ಯ ಲಕ್ಷಣ. ಇದರ ಜೊತೆಗೆ ಉಗುರಿನಲ್ಲಿ ಆಳವಾದ ಗೆರೆಗಳ ರಚನೆಯನ್ನು ಕಾಣಬಹುದು. ಉಗುರಿನ ಸುತ್ತಲಿನ ಚರ್ಮ ಕಪ್ಪಾಗುವುದೂ ಕ್ಯಾನ್ಸರ್ ಲಕ್ಷಣವೆಂದು ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ಕ್ಯಾನ್ಸರ್ ರೋಗಿಗಳಿಗೆ ಅವರು ಸೇವಿಸುವ ಮೆಡಿಸಿನ್‌ಗಳ (Medicines) ಸೈಡ್ ಎಫೆಕ್ಟ್‌ನಿಂದ ಉಗುರಿನ ಬಣ್ಣ ಬದಲಾವಣೆ ಆಗೋದೂ ಇದೆ. ಇದರ ಜೊತೆಗೆ ಲಿವರ್ (Liver) ಕ್ಯಾನ್ಸರ್ ಬಂದಾಗ ಕೆಲವರಿಗೆ ಉಗುರಿನ ಸುತ್ತ ಊತ ಕಂಡು ಬರುವುದುಂಟು. ಕೆಲವರಿಗೆ ಉಗುರುಗಳ ಬದಿಯಲ್ಲಿ ರಕ್ತಸ್ರಾವ (Bleeding) ವಾಗೋದೂ ಇದೆ.
Tattoo Side Effects: ಹಚ್ಚೆ ಹಾಕಿಸ್ಕೊಳ್ಳೋ ಮುನ್ನ ಈ ವಿಚಾರ ಗೊತ್ತಿರಲಿ
ಇಂಥಾ ಲಕ್ಷಣಗಳು ಕಂಡುಬಂದಾಗ ವಯಸ್ಸಾಯ್ತು, ಹೀಗಾಗಿ ಚರ್ಮ ಊದಿಕೊಂಡಿದೆ ಅಂತಲೋ, ಚರ್ಮದ ಬಣ್ಣ ಬದಲಾಗೋದೆಲ್ಲ ವಯಸ್ಸಾದಾಗ ಸಹಜ ಅಂತ ಭಾವಿಸುವುದನ್ನೋ ಬಿಟ್ಟು ನೇರವಾಗಿ ವೈದ್ಯರನ್ನು ಸಂಪರ್ಕಿಸಿ. ಅವರು ಸೂಚಿಸಿದರೆ ಬಯಾಪ್ಸಿ (Biopsy) ಮಾಡಿಸಿ. ಕ್ಯಾನ್ಸರ್ಅನ್ನು ಈ ಟೆಸ್ಟ್ ಪತ್ತೆ ಮಾಡುತ್ತದೆ. ಇದರ ಜೊತೆಗೆ ಉಗುರುಗಳಲ್ಲಿ ಕಪ್ಪು ಅಥವಾ ಕಂದು ಬಣ್ಣದ ಗೆರೆಗಳು ಕಾಣಿಸಿಕೊಂಡರೂ ನಿರ್ಲಕ್ಷಿಸಬೇಡಿ.
ಉಗುರಿನಲ್ಲಿ ಕಾಣುವ ಎಲ್ಲಾ ಬದಲಾವಣೆಗಳೂ ಕ್ಯಾನ್ಸರ್‌ನಿಂದಲೇ ಎನ್ನಲಾಗದು. ಕೆಲವೊಮ್ಮೆ ಶಿಲೀಂಧ್ರ (Fungus) ಸೋಂಕು ಆದರೆ ಉಗುರು ಹಳದಿ ಬಣ್ಣಕ್ಕೆ ತಿರುಗಬಹುದು. ರಕ್ತಹೀನತೆ ಉಂಟಾದರೆ ಉಗುರು ಒರಟಾಗಿ ದುರ್ಬಲ ಸ್ಥಿತಿಗೆ ಬರಬಹುದು. ಉಗುರಿನ ಮೇಲೆ ಬಿಳಿ ಗೆರೆಗಳು ಕಾಣಿಸಿಕೊಂಡರೆ ಅದು ಲಿವರ್ ಅಥವಾ ಕಿಡ್ನಿಗೆ (Kidney) ಸಂಬಂಧಿಸಿದ ಯಾವುದೋ ಸಮಸ್ಯೆಯ ಸೂಚನೆ ಆಗಿರಬಹುದು. ಹೀಗಾಗಿ ಉಗುರನ್ನು ಸೂಕ್ಷ್ಮವಾಗಿ ಗಮನಿಸುತ್ತಿರಿ.
Health Alert: ಬಿಯರ್ ಜೊತೆ ಯಾವತ್ತೂ ಈ ಆಹಾರ ಸೇವಿಸಬೇಡಿ..