Anxiety Symptoms: ನಿಮಗೂ ಕಾಡುತ್ತಿದ್ಯಾ ಈ ವ್ಯಾಧಿ? ಟೆಸ್ಟ್ ಮಾಡಿಕೊಳ್ಳಿ

ಸದಾಕಾಲ ಯೋಚಿಸಿ ಯೋಚಿಸಿ ಹೈರಾಣಾಗುವ ಮಿದುಳು, ದೇಹದಲ್ಲಿ ಏನೋ ಆಯಾಸ, ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು. ಇಂಥವೆಲ್ಲ ಬದಲಾವಣೆಗಳು ನಿಮ್ಮಲ್ಲಿ ಉಂಟಾದರೆ ನಿರ್ಲಕ್ಷಿಸಬೇಡಿ. ಇವು ಆತಂಕದ ಪ್ರಾರಂಭಿಕ ಲಕ್ಷಣಗಳಾಗಿರಬಹುದು.
 

Get checked whether you have anxiety symptoms and solution to overcome

ಸುಮ್ಮಸುಮ್ಮನೆ ಉದ್ವೇಗಕ್ಕೆ ಒಳಗಾಗುವ ಹೃದಯ, ಏನೇನೋ ಅತಿಯಾದ ಯೋಚನೆಗಳು (Thougt) ಹಾಗೂ ಅದಕ್ಕೂ ದುಪ್ಪಟ್ಟು ಪ್ರಮಾಣದ ನಕಾರಾತ್ಮಕ (Negative) ವಿಚಾರಗಳು (Feelings) ಪದೇ ಪದೆ ನಿಮ್ಮಲ್ಲಿ ಮೂಡುತ್ತಿದೆಯೇ? ಎಷ್ಟು ನಿಯಂತ್ರಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ  ಅರಿಯದ ಆತಂಕ(Anxiety) ವೊಂದು ನಿಮ್ಮೊಳಗೆ ತುಂಬಿಕೊಳ್ಳುತ್ತಿದೆ ಎಂದರ್ಥ.
ಸಾಮಾನ್ಯವಾಗಿ ಸಣ್ಣದೊಂದು ಆತಂಕ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ, ಮನಸ್ಸಿಗೆ ಸಮಸ್ಯೆಯಾಗುವಷ್ಟು ಎಲ್ಲದರ ಬಗ್ಗೆ ಆತಂಕ ತುಂಬಿಕೊಂಡಾಗ ಹೆಚ್ಚು ಪ್ರಮಾಣದಲ್ಲಿ ನಕಾರಾತ್ಮಕ ಭಾವನೆಗಳು ತುಂಬಿಕೊಳ್ಳುತ್ತ ಹೋಗುತ್ತವೆ. ಎಲ್ಲರಿಗೂ ಒಂದೇ ರೀತಿಯ ಲಕ್ಷಣಗಳು (Symtoms) ಇರಬೇಕೆಂದಿಲ್ಲ. ಆದರೆ, ಸಾಮಾನ್ಯವಾಗಿ ಒಂದಿಷ್ಟು ಪ್ರಾಥಮಿಕ ಲಕ್ಷಣಗಳು ಆತಂಕಕ್ಕಿವೆ. ಅವುಗಳನ್ನು ಗಮನಿಸಿ ಆರಂಭದಲ್ಲೇ ಆತಂಕದ ಮನಸ್ಥಿತಿಗೆ ಬೆಳೆಯಲು ಬಿಡದೆ ಒಂದಿಷ್ಟು ಎಚ್ಚರಿಕೆ ತೆಗೆದುಕೊಳ್ಳಿ. ಆತಂಕಕ್ಕೆ ಒಳಗಾಗುವವರಲ್ಲಿ ಸಾಮಾನ್ಯವಾಗಿ ಈ ಲಕ್ಷಣಗಳು ಸಾಮಾನ್ಯ.

•    ಆಹಾರದ ಆಸೆ ಕಡಿಮೆಯಾಗುವುದು. (Loss of Appetite)
ಆಹಾರ ಸೇವಿಸುವ ಬಯಕೆ ಕಡಿಮೆಯಾಗುವುದು ಆರೋಗ್ಯಕ್ಕೆ ಸಂಬಂಧಿಸಿದ ಇನ್ನಿತರ ಹಲವಾರು ಸಮಸ್ಯೆಗಳಿಂದ ಇರಬಹುದು. ಆದರೆ, ಆತಂಕದಷ್ಟು ಹೆಚ್ಚಿನ ಕಾರಣ ಬೇರೆ ಯಾವುದೂ ಅಲ್ಲ. ಆತಂಕಕ್ಕೆ ಒಳಗಾಗಿದ್ದರೆ ಅದು ಮೊದಲನೆಯದಾಗಿ ಕಾಣಿಸಿಕೊಳ್ಳುವುದೇ ಆಹಾರದ ಕುರಿತ ಅನಾಸಕ್ತಿಯಲ್ಲಿ. ನಿಮ್ಮ ಫೇವರಿಟ್ ಆಹಾರ (Food) ಕೂಡ ಅಪಥ್ಯವಾಗುತ್ತದೆ. ನಿಮ್ಮ ಊಟದ ಪ್ರಮಾಣ ಅತ್ಯಲ್ಪವಾಗುತ್ತದೆ. 

•    ಎಲ್ಲದರ ಬಗೆಗೂ ಅತಿಯಾದ ಚಿಂತೆ (Worry about everything)
ಚಿಕ್ಕದೊಂದು ವಿಚಾರದ ಬಗೆಗೂ ಅತಿಯಾಗಿ ತಲೆಕೆಡಿಸಿಕೊಳ್ಳುವುದು ಆತಂಕದ ಮತ್ತೊಂದು ಪ್ರಾರಂಭಿಕ ಲಕ್ಷಣ. ನೀವು ನಿಮ್ಮ ಕುಟುಂಬದ ಬಗ್ಗೆ ಅತಿಯಾಗಿ ಚಿಂತೆ ಮಾಡಲು ಆರಂಭಿಸಿದ್ದೀರಾ? ಅವರಿಗೇನೂ ಸಹಾಯ ಮಾಡಲು ನಿಮ್ಮಿಂದಾಗದು, ಆದರೆ, ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಅವರ ಕುರಿತು ಚಿಂತೆಯಾಗುತ್ತಿದೆಯೇ? ದಿನನಿತ್ಯದ ಬದುಕಿಗೆ ತೊಂದರೆಯಾಗುವಷ್ಟು ಚಿಂತೆಯಾಗುತ್ತಿದೆಯೇ? ಹಾಗಿದ್ದರೆ ಎಚ್ಚೆತ್ತುಕೊಳ್ಳಿ. 

ಆತಂಕವನ್ನು ಹೋಗಲಾಡಿಸೋದು ಹೇಗೆ?

•    ಯಾವುದೇ ವಸ್ತುಗಳ ಬಗ್ಗೆ ನಿರಾಸಕ್ತಿ (Lack of interest)
ಹಿಂದೊಮ್ಮೆ ನಿಮ್ಮ ಕಣ್ಣುಗಳನ್ನು ಅರಳಿಸಿದ್ದ ಅದೇ ವಸ್ತುಗಳ ಕುರಿತು ಈಗ ನಿರಾಸಕ್ತಿ ಆವರಿಸಬಹುದು. ಅಥವಾ ಅದೇ ನಿಮ್ಮನ್ನು ಒತ್ತಡಕ್ಕೆ ತಳ್ಳಬಹುದು. ಕೆಲವೊಮ್ಮೆ ತುಂಬ ಬೇಸರವಾಗುವುದು ಸಹಜ. ಆದರೆ, ಆ ಭಾವನೆ ಕೆಲವೇ ಸಮಯದಲ್ಲಿ ಇಲ್ಲವಾಗುತ್ತದೆ. ಆದರೆ, ಯಾವುದರ ಬಗೆಗೂ ಕನಿಷ್ಠ ಆಸಕ್ತಿಯೂ ಇಲ್ಲದಂತೆ ನಿರಂತರವಾಗಿ ಬೋರಾಗುತ್ತಿದ್ದರೆ ಖಂಡಿತವಾಗಿ ನಿರ್ಲಕ್ಷ್ಯ ಮಾಡಬೇಡಿ. 

•    ಅತಿಯಾಗಿ ಯೋಚಿಸಲು ಆರಂಭ (Overthinking)
ಮಿದುಳಿಗೆ ಒಂದು ನಿಮಿಷವೂ ಪುರುಸೊತ್ತಿಲ್ಲದಂತೆ ಅತಿಯಾಗಿ ಯೋಚನೆ ಮಾಡುವುದು ಆತಂಕದ ಪ್ರಾರಂಭಿಕ ಲಕ್ಷಣಗಳಲ್ಲೊಂದು. ಸದಾಕಾಲ ನಕಾರಾತ್ಮಕ ಭಾವನೆಗಳು ಮೂಡಬಹುದು. ಯಾರೊಬ್ಬರ ಕುರಿತಾಗಿ ಯೋಚನೆ ಬರಬಹುದು. ಅವರ ಪ್ರತಿ ನಡೆನುಡಿಗಳ ಕುರಿತು ನೆಗೆಟಿವ್ ವಿಚಾರ ಬರಬಹುದು. ಒಟ್ಟಿನಲ್ಲಿ ಕ್ಷಣಕಾಲವೂ ಬಿಡುವಿಲ್ಲದಂತೆ ಯೋಚಿಸುತ್ತಿರುವುದು ಮಿದುಳಿನ ಆರೋಗ್ಯಕ್ಕೆ ಹಾನಿಕರ. ಸಾಮಾನ್ಯವಾಗಿ ಯಾವತ್ತೂ ನೀವು ಭಾಗವಹಿಸುವ ಮೀಟಿಂಗ್, ಅಸೈನ್ ಮೆಂಟ್ ಅಥವಾ ಕಾರ್ಯಗಳ ಕುರಿತು ಭಯವಾಗಲು ಆರಂಭವಾಗುತ್ತಿದೆಯೇ? ಹಾಗಿದ್ದರೆ ಖಂಡಿತವಾಗಿ ಎಚ್ಚರಿಕೆ ವಹಿಸಬೇಕು. ಏಕೆಂದರೆ, ನೀವು ಮೊದಲೇ ಅತಿಯಾದ ಯೋಚನೆಯಿಂದ ಬಳಲುತ್ತಿದ್ದೀರಿ. ಹೀಗಾಗಿ, ಈ ಕಾರ್ಯಗಳೆಲ್ಲ ಇನ್ನಷ್ಟು ಭಾರವೆನಿಸಲು ಆರಂಭವಾಗಿವೆ ಅಷ್ಟೆ. ಅತಿಯಾದ ಯೋಚನೆ ನಮ್ಮನ್ನು ಒತ್ತಡಕ್ಕೀಡು ಮಾಡುತ್ತದೆ. ಇದರಿಂದ ನಿದ್ರಾಹೀನತೆ ಉಂಟಾಗಬಹುದು. 

ದಾಂಪತ್ಯಕ್ಕೆ ಮುಳ್ಳಾಗಬಹುದು ಆತಂಕ

ಈ ಯಾವುದೇ ಲಕ್ಷಣಗಳು ಕಾಣಿಸಿಕೊಂಡಾಗ ಅದರಿಂದ ಆಚೆ ಬರುವ ಕುರಿತು ಸಕಾರಾತ್ಮಕವಾಗಿ ಯೋಚಿಸಬೇಕು, ಹಾಗೂ ಅದರಂತೆಯೇ ನಡೆದುಕೊಳ್ಳಬೇಕು. ಕೆಲವು ಟಿಪ್ಸ್ ನಿಮಗಾಗಿ;
•    ಪ್ರಸ್ತುತ ಕಣ್ಣೆದುರು ನಡೆಯುತ್ತಿರುವ ಆಗುಹೋಗುಗಳ ಕುರಿತು ಗಮನ ನೀಡಿ. 
•    ವ್ಯಾಯಾಮ (Exercise) ಮಾಡಿ. ಯೋಗ (Yoga), ಪ್ರಾಣಾಯಾಮಗಳ (Pranayama) ಮೊರೆ ಹೋಗಿ.
•    ಉತ್ತಮ ಪೌಷ್ಟಿಕ (Nutrition) ಆಹಾರ ಸೇವನೆ ಮಾಡಿ. 
•    ಖುಷಿಯಾಗುತ್ತದೆ ಎಂದಾದರೆ ಪ್ರವಾಸ (Travel) ಹೋಗಿ. 
 

Latest Videos
Follow Us:
Download App:
  • android
  • ios