Asianet Suvarna News Asianet Suvarna News

ನರಕಯಾತನೆ ನೀಡುವ Acidityಗೆ ಮುಕ್ತಿ ಸಿಗಬೇಕೆಂದ್ರೆ ಹೀಗೆ ಮಾಡಿ

ಇವತ್ತು ತಿಂದಿದ್ದು ಹೆಚ್ಚು ಕಮ್ಮಿ ಆಗಿದೆ. ಹೊಟ್ಟೆ ಊದಿಕೊಂಡಿದೆ. ಈ ಅಸಿಡಿಟಿ ಸಾಕಾಯ್ತು ಎಂಬ ಮಾತು ಬಹುತೇಕ ಎಲ್ಲರ ಬಾಯಲ್ಲಿ ಕೇಳಿರ್ತೀರಿ. ಅಸಿಡಿಟಿ ಈಗ ಸಾಂಕ್ರಾಮಿಕ ಎನ್ನುವಂತಾಗಿದೆ. ಇದು ಗುಣವಾಗದ ಕಾಯಿಲೆಯಲ್ಲ. ತಾಳ್ಮೆಯಿದ್ರೆ ಎಲ್ಲವೂ ಸಾಧ್ಯ.
 

Yoga For Acidity And Gas Problem
Author
Bangalore, First Published Jan 19, 2022, 4:35 PM IST

ಆಹಾರ (Food) ಸೇವನೆಯಲ್ಲಿ ಏರುಪೇರಾದ್ರೆ ಅಸಿಡಿಟಿ (Acidity )ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಇತ್ತೀಚಿನ ದಿನಗಳಲ್ಲಿ ಅಸಿಡಿಟಿ ಸರ್ವೆ ಸಾಮಾನ್ಯವಾಗಿದೆ. ಇದನ್ನು ಆಸಿಡ್ ರಿಫ್ಲಕ್ಸ್ ಎಂದೂ ಕರೆಯುತ್ತಾರೆ. ಆರೋಗ್ಯ(Health) ತಜ್ಞರ ಪ್ರಕಾರ, ಅತಿಯಾದ ಎಣ್ಣೆ, ಉಪ್ಪು, ಮಸಾಲೆಯುಕ್ತ ಆಹಾರದಿಂದ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಇದಲ್ಲದೆ ಕೆಫೀನ್(Caffeine), ತಂಬಾಕು ಮತ್ತು ಮದ್ಯದ ಅತಿಯಾದ ಸೇವನೆಯು ಈ ಸಮಸ್ಯೆಯನ್ನು ಹೆಚ್ಚಿಸಬಹುದು. ಮನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಮಸಾಲೆಯುಕ್ತ,ರುಚಿ ರುಚಿ ಆಹಾರಗಳ ಸೇವನೆಯೂ ಹೆಚ್ಚಾಗಿದೆ.

ದೈಹಿಕ ಶ್ರಮವಿಲ್ಲದೆ ಹೊಟ್ಟೆಗೆ ಮಾತ್ರ ಆಹಾರ ಹೋಗುತ್ತಿದ್ದರೆ ಅನಾರೋಗ್ಯ ಕಾಡುವುದು ಮಾಮೂಲಿ.  ಹೆಚ್ಚಿದ ಆಮ್ಲೀಯತೆಗೆ ಮತ್ತೊಂದು ಕಾರಣವೆಂದರೆ ಊಟದ ನಂತರ ತಕ್ಷಣವೇ ಮಲಗುವುದು. ಈ ಎಲ್ಲಾ ಅಭ್ಯಾಸಗಳು ನಮ್ಮ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತವೆ. ನೀವು ನಿರಂತರವಾಗಿ ಅಸಿಡಿಟಿಯ ಸಮಸ್ಯೆಯನ್ನು ಹೊಂದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಇದಕ್ಕಾಗಿ ಕೆಲವು ಯೋಗಾಸನಗಳನ್ನು ಅಭ್ಯಾಸ ಮಾಡುವುದ್ರಿಂದ ಜೀರ್ಣಕ್ರಿಯೆ ಸುಧಾರಿಸುವುದರೊಂದಿಗೆ ಅಸಿಡಿಟಿಯಂತಹ ಸಮಸ್ಯೆ  ಕಡಿಮೆಯಾಗುತ್ತವೆ. ಅಸಿಡಿಟಿ ಸಮಸ್ಯೆ ಹೊಂದಿರುವವರು ನಿಯಮಿತವಾಗಿ ಯಾವ ಯೋಗಾಭ್ಯಾಸ  ಮಾಡಬೇಕು ಎಂಬುದರ ಬಗ್ಗೆ ಇಂದು ಮಾಹಿತಿ ನೀಡ್ತೆವೆ. 

ಮಾರ್ಜರಿ ಆಸನ : ಮಾರ್ಜರಿ ಆಸನ ಅಥವಾ ಬೆಕ್ಕಿನ ಭಂಗಿಯ ಆಸನ ಅಸಿಡಿಟಿಗೆ ಒಳ್ಳೆಯದು. ಇದ್ರ ಅಭ್ಯಾಸ ಮಾಡುವುದು ಆಮ್ಲೀಯತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.  ಈ ಆಸನವು ದೇಹದ ರಕ್ತ ಪರಿಚಲನೆಯನ್ನು ಸುಧಾರಿಸುವುದರ ಜೊತೆಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಅಂಗಗಳಿಗೆ ವಿಶ್ರಾಂತಿ ನೀಡುತ್ತದೆ. ಇದು ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಇದನ್ನು ನಿಯಮಿತವಾಗಿ ಮಾಡಿದಲ್ಲಿ ಅಸಿಡಿಟಿ ಸಮಸ್ಯೆಯನ್ನು ಹೋಗಲಾಡಿಸಬಹುದು.

ಪವನಮುಕ್ತಾಸನ ಯೋಗ : ಪವನಮುಕ್ತಾಸನ ಯೋಗವನ್ನು ನಿಯಮಿತವಾಗಿ ಮಾಡುವುದು ಉತ್ತಮ ಫಲಿತಾಂಶ ನೀಡುತ್ತದೆ. ಕರುಳಿನ ಚಲನೆಯ ಪ್ರಕ್ರಿಯೆಯನ್ನು ಸರಾಗಗೊಳಿಸುವ ಜೊತೆಗೆ ಜೀರ್ಣಾಂಗ ವ್ಯವಸ್ಥೆಯಿಂದ ವಿಷವನ್ನು ತೆಗೆದುಹಾಕಲು ಬಹಳ ಪ್ರಯೋಜನಕಾರಿ. ಜೀರ್ಣಕ್ರಿಯೆ ಸರಿಯಾದ್ರೆ ಆಮ್ಲೀಯತೆ ಮತ್ತು ಇತರ ಹೊಟ್ಟೆಯ ಸಮಸ್ಯೆ ಕಡಿಮೆಯಾಗುತ್ತದೆ. 

Yoga For Health: ಗರ್ಭಾಸನ ಮಾಡಿ ಪೀರಿಯಡ್ಸ್ ನೋವು, ಮಲಬದ್ಧತೆ ಸಮಸ್ಯೆಗೆ ಗುಡ್ ಬೈ ಹೇಳಿ..

ವಜ್ರಾಸನ ಯೋಗ : ವಜ್ರಾಸನ ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಹೊಟ್ಟೆ ಮತ್ತು ಕರುಳಿಗೆ ರಕ್ತದ ಹರಿವು ಹೆಚ್ಚಾಗುತ್ತದೆ. ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ದುರ್ಬಲ ಜೀರ್ಣಾಂಗ ವ್ಯವಸ್ಥೆಯಿಂದ ಬಳಲುತ್ತಿರುವ ಜನರು ಈ ಯೋಗವನ್ನು ಪ್ರತಿ ದಿನ ಮಾಡಬೇಕು. ಯೋಗ ತಜ್ಞರ ಪ್ರಕಾರ, ಈ ಯೋಗದಿಂದ ಜೀರ್ಣಾಂಗದ  ಸಮಸ್ಯೆ  ನಿವಾರಣೆಯಾಗುತ್ತದೆ. ಬೆನ್ನು ನೋವು ಕಡಿಮೆಯಾಗುತ್ತದೆ. ಒಳ್ಳೆಯ ನಿದ್ರೆಗೆ ಇದು ಸಹಕಾರಿ.

ಮಲಾಸನ : ಮಲವನ್ನು ಹೊರಹಾಕುವಾಗ ನಾವು ಕುಳಿತುಕೊಳ್ಳುವ  ಭಂಗಿಯನ್ನು ಮಲಸಾನ ಎಂದು ಕರೆಯಲಾಗುತ್ತದೆ. ಈ ಭಂಗಿ  ಹೊಟ್ಟೆ ಮತ್ತು ಬೆನ್ನಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಮಲಸಾನವು ಮೊಣಕಾಲುಗಳು, ಕೀಲುಗಳು, ಬೆನ್ನು ಮತ್ತು ಹೊಟ್ಟೆಯ ಒತ್ತಡವನ್ನು ನಿವಾರಿಸುತ್ತದೆ. ಇವುಗಳನ ನೋವನ್ನು ಕಡಿಮೆ ಮಾಡುತ್ತದೆ.  ಇದು ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

Face Yoga For Beauty: ವಯಸ್ಸಾದರೂ ಯಂಗ್ ಆಗಿ ಕಾಣಬೇಕಾದರೆ ಹೀಗೆ ಮಾಡಿ 

ಭುಜಂಗಾಸನ : ಈ ಭಂಗಿಯಲ್ಲಿ, ದೇಹವನ್ನು ಎತ್ತರದ ಹಾವಿನಂತೆ ಮಾಡಲಾಗುತ್ತದೆ. ಇದನ್ನು ಸರ್ಪಾಸನ ಎಂದೂ ಕರೆಯಲಾಗುತ್ತದೆ. ಈ ಭಂಗಿಯು ಬೆನ್ನುಮೂಳೆಯನ್ನು ಬಲಪಡಿಸುತ್ತದೆ.  ಈ ಆಸನವು ಶ್ವಾಸಕೋಶದ ಶುದ್ಧೀಕರಣಕ್ಕೂ ತುಂಬಾ ಒಳ್ಳೆಯದು. ಗಂಟಲು ಕೆಟ್ಟಿರುವವರು, ಅಸ್ತಮಾ, ದೀರ್ಘಕಾಲದ ಕೆಮ್ಮು ಅಥವಾ ಶ್ವಾಸಕೋಶಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆ ಇರುವವರು ಈ ಆಸನವನ್ನು ಮಾಡಬೇಕು. ಈ ಆಸನವು ಪಿತ್ತಕೋಶದ ಆರೋಗ್ಯ ವೃದ್ಧಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ತೋಳುಗಳಿಗೆ ಬಲವನ್ನು ನೀಡುತ್ತದೆ. ಇದು ಮೂಲವ್ಯಾಧಿ ಇರುವವರಿಗೂ ಪ್ರಯೋಜನಕಾರಿಯಾಗಿದೆ. 
 

Follow Us:
Download App:
  • android
  • ios