MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
Bike Taxi Approval
Karnataka KPSC Scam
Bengaluru Airport Flyover
Mysuru Dasara 2026 Scehdule
Rohit Sharma Retirement Rumors
Gowri Ganesha Festival
Yeshwantpur Mangaluru Vande Bharat
India Iran Relationship
  • Home
  • Life
  • Health
  • Yoga For Health: ಗರ್ಭಾಸನ ಮಾಡಿ ಪೀರಿಯಡ್ಸ್ ನೋವು, ಮಲಬದ್ಧತೆ ಸಮಸ್ಯೆಗೆ ಗುಡ್ ಬೈ ಹೇಳಿ..

Yoga For Health: ಗರ್ಭಾಸನ ಮಾಡಿ ಪೀರಿಯಡ್ಸ್ ನೋವು, ಮಲಬದ್ಧತೆ ಸಮಸ್ಯೆಗೆ ಗುಡ್ ಬೈ ಹೇಳಿ..

ನೀವು ಈ ಯೋಗಾಸನ ಮಾಡುವುದರಿಂದ ಖಂಡಿತವಾಗಿಯೂ ಅಮ್ಮನ ನೆನಪಾಗುತ್ತದೆ. ಯಾಕೆಂದರೆ ಇದು ಗರ್ಭಾಸನ. ಆದರೆ ನೀವು ಪ್ರತಿದಿನ ಈ ಆಸನ ಮಾಡುವುದರಿಂದ  ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ. ಈ ಆಸನದ ಪ್ರಯೋಜನಗಳನ್ನು ತಿಳಿಯಲು ನೀವು ಮುಂದೆ ಓದಲೇಬೇಕು. 

2 Min read
Author : Suvarna News
Published : Jan 17 2022, 07:41 PM IST
Share this Photo Gallery
  • FB
  • TW
  • Linkdin
  • Whatsapp
19

ಈ ಲೇಖನದಲ್ಲಿ ನಾವು ಹೇಳುತ್ತಿರುವ ಯೋಗಾಸನವನ್ನು ಗರ್ಭಾಸನ ಯೋಗ(Yoga) ಎಂದು ಕರೆಯಲಾಗುತ್ತದೆ. ಗರ್ಭಾಸನ ಯೋಗ ಮಾಡುವುದು ತುಂಬಾ ಕಷ್ಟದ ಕೆಲಸ, ಆದರೆ ಪ್ರಯೋಜನಗಳು ಎಷ್ಟು ದೊಡ್ಡದಾಗಿವೆ ಎಂದರೆ ನೀವು ಖಂಡಿತವಾಗಿಯೂ ಈ ಯೋಗಾಸನವನ್ನು ಮಾಡಲು ಬಯಸುತ್ತೀರಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

ಗರ್ಭಾಸನವನ್ನು(Garbhasana) ಇಂಗ್ಲಿಷ್ ನಲ್ಲಿ ಭ್ರೂಣಭಂಗಿ (Fetus Pose) ಅಥವಾ  ಹಿಂದಿಯಲ್ಲಿ ಗರ್ಭಪಿಂಡಸನಾ  ಎಂದೂ ಕರೆಯಲಾಗುತ್ತದೆ, ಇದು ಹಠ ಯೋಗದ ಭಾಗವಾಗಿದೆ. ಈ ಕಷ್ಟವಾದ ಯೋಗ ಆಸನ ಮಾಡೋದು ಹೇಗೆ? ಇದರಿಂದ ಉಂಟಾಗುವ ಪ್ರಯೋಜನಗಳು ಯಾವುವು? ಮೊದಲಾದ ಮಾಹಿತಿ ತಿಳಿಯಲು ಬಯಸಿದರೆ ಇಲ್ಲಿದೆ ಸಂಪೂರ್ಣ ಮಾಹಿತಿ. 

39

ಗರ್ಭಾಸನ ಹಂತಗಳು
ಮೊದಲು ಪದ್ಮಾಸನ(Padmasana) ಯೋಗದ ಭಂಗಿಯಲ್ಲಿ ಯೋಗ ಚಾಪೆಯ ಮೇಲೆ ಕುಳಿತುಕೊಳ್ಳಿ.
ಈಗ ಎರಡೂ ಕೈಗಳನ್ನು ತೊಡೆ ಮತ್ತು ಕಾಲಿನ ನಡುವಿನ ಖಾಲಿ ಜಾಗದಲ್ಲಿ ಇರಿಸಿ.
ನಂತರ ಕಾಲಿನ ಕೆಳಗಿನಿಂದ ಕೈಗಳನ್ನು ತೆಗೆದು ಹೊರಗೆ ತನ್ನಿ.
ನಂತರ ಉಸಿರನ್ನು ಹೊರಬಿಟ್ಟು ಎರಡೂ ಕೈಗಳನ್ನು ಕಿವಿಯ ಕಡೆಗೆ ತರಲು ಪ್ರಯತ್ನಿಸಿ ಮತ್ತು ಪಾದಗಳನ್ನು ಪದ್ಮಾಸನದ ಸ್ಥಾನದಲ್ಲಿ ಎದೆಯ ಕಡೆಗೆ ತನ್ನಿ.

49

ನಿಮ್ಮ ದೇಹದ ಸಂಪೂರ್ಣ ತೂಕ(Weight)ವನ್ನು ಸೊಂಟದ ಮೇಲೆ ಸಮತೋಲನದಲ್ಲಿಡಿ ಮತ್ತು ನಿಮ್ಮ ಕೈಗಳಿಂದ ಎರಡೂ ಕಿವಿಗಳನ್ನು ಹಿಡಿದುಕೊಳ್ಳಿ.
ಇದೇ ಪರಿಸ್ಥಿತಿಯಲ್ಲಿ ಸ್ವಲ್ಪ ಕಾಲ ಸಮತೋಲನವನ್ನು ಕಾಯ್ದುಕೊಳ್ಳಿ ಮತ್ತು ನಿಧಾನವಾಗಿ ಉಸಿರಾಡಿ.
ಈಗ ಕಿವಿಯಿಂದ ಕೈಗಳನ್ನು ತೆಗೆದು ನಿಧಾನವಾಗಿ ಕೆಳಗಿಳಿಸಿ ನಂತರ ಸ್ವಲ್ಪ ಕಾಲ ಪದ್ಮಾಸನದ ಸ್ಥಾನದಲ್ಲಿ ಕುಳಿತುಕೊಳ್ಳಿ.
 

59

ಗರ್ಭಾಸನ ಅತ್ಯಂತ ಕಷ್ಟಕರವಾದ ಯೋಗಾಸನಗಳಲ್ಲಿ(Yogasana) ಒಂದಾಗಿದೆ. ಆದಾಗ್ಯೂ, ಈ ಯೋಗಾಸನವನ್ನು ಹೆಚ್ಚು ಸವಾಲಿನದನ್ನಾಗಿ ಮಾಡಲು ನಿಮ್ಮ ಕೈಗಳಿಂದ ವಿರುದ್ಧ ಬದಿಯ ಕಿವಿಯನ್ನು ಹಿಡಿಯಲು ಪ್ರಯತ್ನಿಸಿ. ಕಿವಿಗಳನ್ನು ಕೈಗಳು ಹಿಡಿಯದಿದ್ದರೆ, ಕೈಗಳನ್ನು ನಮಸ್ಕಾರದ ಭಂಗಿಯಲ್ಲಿಯೂ ಇರಿಸಬಹುದು.

69

ಗರ್ಭಾಸನ ಭಂಗಿಯ  ಮುನ್ನೆಚ್ಚರಿಕೆ
ಗರ್ಭಾಸನ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಲು(Consult Doctor) ಮರೆಯದಿರಬೇಕು.
ಖಾಲಿ ಹೊಟ್ಟೆಯಲ್ಲಿ ಮತ್ತು ಸಡಿಲವಾದ ಬಟ್ಟೆಗಳಲ್ಲಿ ಮಾತ್ರ ಗರ್ಭಾಸನ ಮಾಡಿ . ಭಿಗಿಯಾದ ಉಡುಪುಗಳನ್ನು ಧರಿಸಿದರೆ ಈ ಯೋಗಾಸನ ಮಾಡಲು ಸಾಧ್ಯವಿಲ್ಲ. 

79

ಸೊಂಟ ಅಥವಾ ದೇಹದ ಕೆಳಭಾಗದ ನೋವು ಅಥವಾ ಗಾಯವಾದ ಸಂದರ್ಭದಲ್ಲಿ ಈ ಯೋಗಾಸನ ಮಾಡಬೇಡಿ.
ಅಧಿಕ ರಕ್ತದೊತ್ತಡ(High BP) ರೋಗಿಗಳು ಗರ್ಭಾಸನ ಮಾಡಬಾರದು.
ಗರ್ಭಿಣಿಯರು ವೈದ್ಯರ ಸಲಹೆಯ ಮೇರೆಗೆ ಮಾತ್ರ ಈ ಯೋಗಾಸನ ಮಾಡಬೇಕು.

89

ಗರ್ಭಾಸನ ಪ್ರಯೋಜನಗಳು
ಮಹಿಳೆಯರಿಗೆ ಮುಟ್ಟಿನ ನೋವು ಮತ್ತು ಅಸ್ವಸ್ಥತೆಯಿಂದ ಪರಿಹಾರ ಸಿಗುತ್ತದೆ.
ಕಿಬ್ಬೊಟ್ಟೆಯ ಸ್ನಾಯುಗಳು ಪ್ರಬಲವಾಗಿರುತ್ತವೆ ಮತ್ತು ಗ್ಯಾಸ್ ಮತ್ತು ಮಲಬದ್ಧತೆ(Constipation)ಯನ್ನು ನಿವಾರಿಸುತ್ತವೆ.
ಮಾನಸಿಕ ಆರೋಗ್ಯ ಉತ್ತಮವಾಗಿದ್ದು ಕೋಪ ಮತ್ತು ಒತ್ತಡ ಕಡಿಮೆಯಾಗುತ್ತದೆ

99

ಏಕಾಗ್ರತೆ(Concentration) ಶಕ್ತಿ ಮತ್ತು ಶಾಂತಿ ಬೆಳೆಯುತ್ತದೆ.
ದೈಹಿಕ ಸಮತೋಲನ ಹೆಚ್ಚಾಗುತ್ತದೆ.
ದೇಹದಲ್ಲಿ ರಕ್ತ ಮತ್ತು ಆಮ್ಲಜನಕ ಉತ್ತಮವಾಗಿರುವ ಕಾರಣ ಚರ್ಮ ಹೊಳೆಯುವಂತೆ ಮಾಡುತ್ತದೆ.
ಕೈಗಳು ಮತ್ತು ಬೆನ್ನುಮೂಳೆ ಬಲಗೊಳ್ಳುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಮಲಬದ್ಧತೆ
ಋತುಚಕ್ರ

Latest Videos
Recommended Stories
Recommended image1
ನಿಮ್ಮ ಹಳದಿ ಹಲ್ಲುಗಳು ಮಾಯವಾಗಿ ಫಳಫಳನೆ ಹೊಳೆಯುವಂತೆ ಆಗಲು ಈ ಟ್ರಿಕ್ಸ್‌ ಬಳಸಿ
Recommended image2
ಮಕ್ಕಳಿಗೆ ಕತ್ತೆ ಹಾಲು ಯಾಕೆ ಕೊಡ್ತಾರೆ? ಆರೋಗ್ಯಕ್ಕೆ ನಿಜವಾಗಿಯೂ ಒಳ್ಳೆಯದೇ?
Recommended image3
ಮಧುಮೇಹಿಗಳಲ್ಲಾಗುವ ಪಾದದ ಉರಿ ಕಡಿಮೆಯಾಗಲು ಏನು ಮಾಡಬೇಕು? ಇಲ್ಲಿದೆ ಸರಳ ಪರಿಹಾರಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved