WHO : 2023ರ ವೇಳೆಗೆ ಹೆಚ್ಚಾಗಲಿದೆ ಈ ರೋಗ, ಈಗ್ಲೇ ಎಚ್ಚೆತ್ತುಕೊಂಡ್ರೆ ಒಳಿತು
ನಮ್ಮ ಆರೋಗ್ಯ ನಮ್ಮ ಕೈನಲ್ಲಿದೆ. ದೈಹಿಕ ಚಟುವಟಿಕೆ ನಿಷ್ಕ್ರಿಯಗೊಂಡ್ರೆ ಅನೇಕ ಸಮಸ್ಯೆ ನಮ್ಮನ್ನು ಕಾಡುತ್ತದೆ. ಸಾಂಕ್ರಾಮಿಕವಲ್ಲದ ರೋಗಗಳಿಗೆ ಜನರು ಬಲಿಯಾಗ್ತಾರೆ. ವಿಶ್ವಸಂಸ್ಥೆ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದೆ.
ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ, ಖಿನ್ನತೆ ಸೇರಿದಂತೆ ಅನೇಕ ಗಂಭೀರ ಅನಾರೋಗ್ಯ ಸಮಸ್ಯೆ ಹೆಚ್ಚಾಗ್ತಿದೆ. ಆದ್ರೆ ಈ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ದೈಹಿಕ ಚಟುವಟಿಕೆಯ ಮೇಲಿನ ಜಾಗತಿಕ ಕ್ರಿಯಾ ಯೋಜನೆ 2018–2030 (GAPPA)ಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ನಿಯಮಿತ ದೈಹಿಕ ಚಟುವಟಿಕೆ ಅಗತ್ಯವನ್ನು ಎತ್ತಿ ಹಿಡಿದಿದೆ.
ಸೈಕ್ಲಿಂಗ್ (Cycling), ಕ್ರೀಡೆ, ವಾಕಿಂಗ್ ಮತ್ತು ಇತರ ದೈಹಿಕ ಚಟುವಟಿಕೆಗಳು (Physical Activities) ಕೇವಲ ಒಬ್ಬ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ (Mental Health) ವನ್ನು ಮಾತ್ರ ಸುಧಾರಿಸುವುದಿಲ್ಲ. ಈ ದೈಹಿಕ ಚಟುವಟಿಕೆಗಳು ಸಮಾಜ, ಪರಿಸರ ಮತ್ತು ಆರ್ಥಿಕತೆಗೂ ಹೆಚ್ಚು ಪ್ರಯೋಜನಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ. ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಜಡ ಜೀವನಶೈಲಿ ಸಾಂಕ್ರಾಮಿಕವಲ್ಲದ ರೋಗವನ್ನು ಹೆಚ್ಚಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳಿದೆ. 2020 ಮತ್ತು 2030 ರ ನಡುವೆ ಸುಮಾರು 500 ಮಿಲಿಯನ್ ಹೊಸ ಎನ್‌ಸಿಡಿ ಪ್ರಕರಣಗಳು ವರದಿಯಾಗಲಿವೆ ಎಂದು ವರದಿಯಲ್ಲಿ ಹೇಳಳಾಗಿದೆ. ಅದರಲ್ಲಿ ಸುಮಾರು ಶೇಕಡಾ 47ರಷ್ಟು ಅಧಿಕ ರಕ್ತದೊತ್ತಡದಿಂದ ಉಂಟಾಗುವ ಕಾಯಿಲೆಗಳಾಗಿರುತ್ತದೆ. ಶೇಕಡಾ 43ರಷ್ಟು ಖಿನ್ನತೆಯಿಂದ ಉಂಟಾಗುವ ಖಾಯಿಲೆಗಳಾಗಿರುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ.
ದೈಹಿಕವಾಗಿ ಸಕ್ರಿಯವಾಗಿಲ್ಲ ಇಷ್ಟು ಯುವಕರು: ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಈಗಿನ ಯುವಕರು ದೈಹಿಕವಾಗಿ ಕ್ರೀಯಾಶೀಲರಾಗಿಲ್ಲ. ನಾಲ್ಕರಲ್ಲಿ ಒಬ್ಬರು ಯಾವುದೇ ದೈಹಿಕ ಚಟುವಟಿಕೆ ಮಾಡುವುದಿಲ್ಲ. ವಿಶ್ವದಾದ್ಯಂತ ಶೇಕಡಾ 80ರಷ್ಟು ಯುವಕರು ದೈಹಿಕ ಚಟುವಟಿಕೆಯಿಂದ ದೂರವುಳಿದಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅದ್ರಲ್ಲೂ ದೈಹಿಕ ಚಟುವಟಿಕೆ ಹುಡುಗಿಯರಲ್ಲಿ ಕಡಿಮೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದೈಹಿಕ ಚಟುವಟಿಕೆ ನಮ್ಮ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ ಎಂದು ವಿಶ್ವಸಂಸ್ಥೆಯ ಅನೇಕ ಅಧ್ಯಯನಗಳಿಂದ ಪತ್ತೆಯಾಗಿದೆ. ಧೂಮಪಾನ ಹಾಗೂ ಆಲ್ಕೋಹಾಲ್ ನಿಂದ ಗಂಭೀರ ಖಾಯಿಲೆ ಬರುವಂತೆ ನಿಷ್ಕ್ರಿಯ ದೈಹಿಕ ಚಟುವಟಿಕೆಯಿಂದ ಕೂಡ ಅನೇಕ ಅಪಾಯಕಾರಿ ರೋಗ ಬರುತ್ತದೆ. ದಿನದಲ್ಲಿ ಕನಿಷ್ಠ ಒಂದು ಗಂಟೆ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಂಡರೂ ಅನೇಕ ರೋಗಗಳಿಂದ ದೂರವಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಮಾನಸಿಕ ಆರೋಗ್ಯಕ್ಕೂ (Mental Health) ಒಳ್ಳೆಯದು ದೈಹಿಕ ಚಟುವಟಿಕೆ (Physical Activity) : ದೈಹಿಕ ನಿಷ್ಕ್ರಿಯತೆ ಖಿನ್ನತೆ, ಆತಂಕ ಮತ್ತು ಮಕ್ಕಳ ಮೆದುಳಿನ ಬೆಳವಣಿಗೆಯನ್ನು ತಡೆಯುತ್ತದೆ. ನಿಯಮಿತವಾಗಿ ದೈಹಿಕ ಚಟುವಟಿಕೆಯಲ್ಲಿ ತೊಡಗುವ ಜನರು ಅಕಾಲಿಕ ಮರಣ ಹೊಂದುವುದು ಶೇಕಡಾ 20ರಷ್ಟು ಕಡಿಮೆಯಿರುತ್ತದೆ. ಇಂಥವರಿಗೆ ಹೃದಯರೋಗ, ಖಿನ್ನತೆ, ಬುದ್ಧಿಮಾಂದ್ಯತೆ ಅಪಾಯ ಶೇಕಡಾ 7ರಿಂದ 8ರಷ್ಟು ಕಡಿಮೆಯಿರುತ್ತದೆ. ಟೈಪ್ 2 ಮಧುಮೇಹ ಶೇಕಡಾ 5ರ ರಷ್ಟು ಕಡಿಮೆ ಇರುತ್ತದೆ. ದೈಹಿಕ ಚಟುವಟಿಕೆಯಿಂದ ಮೂಳೆಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತದೆ.
Personal Care: ಸುಸ್ತಾಗಿ ಬಂದವರನ್ನು ರಿಲ್ಯಾಕ್ಸ್ ಮಾಡುತ್ತೆ ಈ ಮಸಾಜ್ ಆಯಿಲ್
ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತೆ ಸಾಂಕ್ರಾಮಿಕವಲ್ಲದ ಖಾಯಿಲೆ : ಮುಂದಿನ ವರ್ಷಗಳಲ್ಲಿ ಸಾಂಕ್ರಾಮಿಕವಲ್ಲದ ಖಾಯಿಲೆ ಹೆಚ್ಚಾಗುತ್ತದೆ. ಪಾರ್ಶ್ವವಾಯು, ಹೃದ್ರೋಗ, ಮಧುಮೇಹ, ಮಾನಸಿಕ ಆರೋಗ್ಯ, ಕ್ಯಾನ್ಸರ್‌ನಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹೊಸ ಪ್ರಕರಣಗಳ ಚಿಕಿತ್ಸೆಯ ವೆಚ್ಚವು 2030 ರ ವೇಳೆಗೆ 300 ಡಾಲರ್ ತಲುಪಲಿದೆ. ಇದ್ರಿಂದ ಎಲ್ಲ ದೇಶದ ಮೇಲೆ ಆರ್ಥಿಕ ಹೊಣೆ ಹೆಚ್ಚಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ನೀವು ಮಾಡೋ ತಪ್ಪಿಗೆ ನಿಮ್ಮ ಮಕ್ಕಳು ಶಿಕ್ಷೆ ಅನುಭವಿಸ್ಬೇಕು ಜೋಪಾನ
ಸಮಸ್ಯೆಗೆ ಇಲ್ಲಿದೆ ಪರಿಹಾರ : ಸಮಸ್ಯೆಗೆ ಪರಿಹಾರ ನಮ್ಮ ಕೈನಲ್ಲೇ ಇದೆ. ದೈಹಿಕ ಚಟುವಟಿಕೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಜನರಿಗೆ ಇದ್ರ ಬಗ್ಗೆ ಪ್ರೋತ್ಸಾಹ ನೀಡಬೇಕು. ಜನರನ್ನು ಜಾಗೃತಗೊಳಿಸಬೇಕು ಎನ್ನುತ್ತದೆ ವಿಶ್ವಸಂಸ್ಥೆ.