Asianet Suvarna News Asianet Suvarna News

ನೀವು ಮಾಡೋ ತಪ್ಪಿಗೆ ನಿಮ್ಮ ಮಕ್ಕಳು ಶಿಕ್ಷೆ ಅನುಭವಿಸ್ಬೇಕು ಜೋಪಾನ

ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ವರ್ಗವಾಗುವ ಖಾಯಿಲೆಯನ್ನು ಆನುವಂಶಿಕ ಎನ್ನಲಾಗುತ್ತದೆ. ನಮ್ಮ ಆರೋಗ್ಯ ಸರಿಯಾಗಿದ್ರೆ ನಮಗೆ ಮಾತ್ರ ಒಳ್ಳೆಯದಲ್ಲ, ನಮ್ಮ ಮಕ್ಕಳಿಗೂ ಒಳ್ಳೆಯದು. ಇಲ್ಲ ಅಂದ್ರೆ ನಮ್ಮಂತೆ ಮಕ್ಕಳು, ಮೊಮ್ಮಕ್ಕಳು ಕೂಡ ಚಿತ್ರಹಿಂಸೆ ಅನುಭವಿಸಬೇಕಾಗುತ್ತದೆ.
 

Genetically Diseases Pass From One Generation To Another
Author
First Published Oct 24, 2022, 1:03 PM IST

ನಮ್ಮ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಆಗ್ತಿರುತ್ತದೆ. ಬದಲಾಗ್ತಿರುವ ಜೀವನ ಶೈಲಿಯಿಂದ ಚಿತ್ರವಿಚಿತ್ರ ಖಾಯಿಲೆಗಳು ನಮ್ಮನ್ನು ಕಾಡಲು ಶುರುವಾಗಿದೆ.  ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿ ಕಾಡುವ ಖಾಯಿಲೆ. ನಮಗೆ ಈಗ ಶುರುವಾಗುವ ಖಾಯಿಲೆ ಬರೀ ನಮ್ಮಲೇ ಮುಗಿಯುವುದಿಲ್ಲ. ಇಂದು ಕಾಡುತ್ತಿರುವ ರೋಗಗಳು ನಮ್ಮ ಮುಂದಿನ ಪೀಳಿಗೆಗೆ ವರ್ಗವಾಗುತ್ತದೆ. ಇದ್ರಿಂದ ನಮ್ಮ ಮುಂದಿನ ಪೀಳಿಗೆಯವರು ಈ ಖಾಯಿಲೆಗಳಿಗೆ ಬಲಿಯಾಗ್ತಾರೆ. ನಮ್ಮ ಮುಂದಿನ ಪೀಳಿಗೆಯವರಿಗೆ ನಮ್ಮ ರೋಗ ಬರಬಾರದು ಅಂದ್ರೆ ನಾವು ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಇಂದು ನಾವು ಜೆನೆಟಿಕ್ ಎಂದರೆ  ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ವರ್ಗಾವಣೆಯಾಗುವ ರೋಗಗಳ ಬಗ್ಗೆ ಮಾಹಿತಿ ನೀಡ್ತೇವೆ.  

ಜೆನೆಟಿಕ್ (Genetic) ರೋಗಗಳು ಯಾವುವು ಗೊತ್ತಾ? :

ಮಾನಸಿಕ ರೋಗ (Mental Illness) : ಮಾನಸಿಕ ಖಾಯಿಲೆಗಳನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಮಸ್ಯೆ ಮಿತಿಮೀರಿದಾಗ ಮಾತ್ರ ವೈದ್ಯ (doctor) ರ ಬಳಿ ಹೋಗ್ತಾರೆ. ಹಾಗೆ ಮನೆಯ ಹಿರಿಯರಿಗೆ ಮಾನಸಿಕ ಸಮಸ್ಯೆಯಿದ್ದರೆ ಅದು ನಮಗೂ ಬರಬಹುದು ಎಂಬ ಕಲ್ಪನೆ ಅವರಿಗೆ ಇರೋದಿಲ್ಲ. ಆದ್ರೆ ಮಾನಸಿಕ ಕಾಯಿಲೆಗೂ ಜೆನೆಟಿಕ್ಸ್ ಕಾರಣವಾಗುತ್ತದೆ. ಕುಟುಂಬದಲ್ಲಿ ಯಾರಿಗಾದರೂ ಖಿನ್ನತೆ, ಆತಂಕ, ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್‌ನಂತಹ (Obsessive Compulsive Disorder) ಕಾಯಿಲೆ ಇದ್ದರೆ  ಅದು ಮಕ್ಕಳು, ಮರಿ ಮಕ್ಕಳಿಗೆ ಬರಬಹುದು. ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆ ಹೋಗುವ ಖಾಯಿಲೆ ಇದು.

ಸ್ತನ ಕ್ಯಾನ್ಸರ್ (Breast Cancer) :  ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗ್ತಿದೆ. ಸ್ತನ ಕೋಶಗಳ ಅನಿಯಂತ್ರಿತ ಬೆಳವಣಿಗೆಯಿಂದಾಗಿ ಸ್ತನ ಕ್ಯಾನ್ಸರ್ ಕಾಡುತ್ತದೆ. ಕೆಲವು ಸಂದರ್ಭಗಳಲ್ಲಿ  ಸ್ತನ ಕ್ಯಾನ್ಸರ್ ಇತರ ಸ್ತನ ಅಂಗಾಂಶಗಳ ಮೇಲೆ ಪರಿಣಾಮ ಬೀರುತ್ತದೆ. ಈ ರೋಗ ಕೂಡ ಆನುವಂಶಿಕವಾಗಿ ಬರುವ ಸಾಧ್ಯತೆಯಿದೆ.

ಪಾಲಕ್ ಅಥವಾ ಮೆಂತ್ಯ ಸೊಪ್ಪು…. ಉತ್ತಮ ಆರೋಗ್ಯಕ್ಕೆ ಯಾವುದು ಬೆಸ್ಟ್?

ಮಧುಮೇಹ (Diabetes) : ಈಗಾಗಲೇ ನಿಮ್ಮ ಅಜ್ಜ ಅಥವಾ ತಂದೆಗೆ ಇದ್ದ ಮಧುಮೇಹ ನಿಮಗೆ ವರ್ಗವಾಗಿರಬಹುದು. ಇಲ್ಲ ನಿಮಗೆ ಶುರುವಾದ ಮಧುಮೇಹ ನಿಮ್ಮ ಮಕ್ಕಳಿಗೆ ಅಥವಾ ಮೊಮ್ಮಕ್ಕಳಿಗೆ ಬರುವ ಸಾಧ್ಯತೆಯಿದೆ. ಮಧುಮೇಹ ಜೆನೆಟಿಕ್ ರೋಗ. ದೇಹದಲ್ಲಿ ಇರುವ ಮೇದೋಜ್ಜೀರಕ ಗ್ರಂಥಿಯ ಕೆಲಸವು ಇನ್ಸುಲಿನ್ ಅನ್ನು ತಯಾರಿಸುವುದು. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಾಪಾಡಿಕೊಳ್ಳುವುದು ಇನ್ಸುಲಿನ್‌ನ ಕೆಲಸ. ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದನೆಯನ್ನು ನಿಲ್ಲಿಸಿದರೆ ಅಥವಾ ಅದನ್ನು ಕಡಿಮೆ ಮಾಡಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ  ಹೆಚ್ಚಾಗಲು ಪ್ರಾರಂಭಿಸುತ್ತದೆ. ಈ ಸ್ಥಿತಿಯನ್ನು ಮಧುಮೇಹ ಎಂದು ಕರೆಯಲಾಗುತ್ತದೆ. ಮಧುಮೇಹ ಆನುವಂಶಿಕವಾಗಿದೆ.  

ಈಗಾಗಲೇ ನಿಮ್ಮ ಹಿರಿಯರಿಗೆ ಈ ರೋಗವಿದ್ದರೆ ನೀವು ಎಚ್ಚರಿಕೆಯಿಂದ ಇರಲಿ. ನಿಮ್ಮ ವೈದ್ಯರನ್ನು ಭೇಟಿಯಾಗಿ, ಇದು ಬರದಂತೆ ತಡೆಯುವ ಬಗ್ಗೆ ಮಾಹಿತಿ ಪಡೆಯಿರಿ.  ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. 

ಅಧಿಕ ರಕ್ತದೊತ್ತಡ (High Blood Pressure) : ಅಧಿಕ ರಕ್ತದೊತ್ತಡ ಅಂದ್ರೆ ಬಿಪಿ ಕೂಡ ಆನುವಂಶಿಕವಾಗಿ ಬರುವ ರೋಗವಾಗಿದೆ. ರಕ್ತವನ್ನು ಪಂಪ್ ಮಾಡುವುದು ಹೃದಯದ ಮುಖ್ಯ ಕಾರ್ಯವಾಗಿದೆ. ಅಪಧಮನಿಗಳ ಮೂಲಕ ರಕ್ತದ ಹರಿಯಲು ನಿರ್ದಿಷ್ಟ ಪ್ರಮಾಣದ ಒತ್ತಡವನ್ನು 80/120 ಮಿಮೀಗೆ ನಿಗದಿಪಡಿಸಲಾಗಿದೆ. ರಕ್ತದ ಹರಿವಿನ ಈ ಒತ್ತಡವು ಸಾಮಾನ್ಯಕ್ಕಿಂತ ಹೆಚ್ಚಿದ್ದರೆ  ಅಪಧಮನಿಗಳ ಮೇಲೆ ಹೆಚ್ಚುವರಿ ಒತ್ತಡ ಬರುತ್ತದೆ.  ಇದನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ. 

ನಾನ್‌ವೆಜ್‌ ತಿನ್ನೋದು ಓಕೆ, ಆದ್ರೆ ಡೆಂಗ್ಯೂ ಇದ್ದಾಗ ಅಪ್ಪಿತಪ್ಪಿಯೂ ಮುಟ್ಬೇಡಿ

ಅಧಿಕ ರಕ್ತದೊತ್ತಡದಿಂದ ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡದ ಸಮಸ್ಯೆ ಮತ್ತು ಬುದ್ಧಿಮಾಂದ್ಯತೆಯಂತಹ ಗಂಭೀರ ಆರೋಗ್ಯ ಸಮಸ್ಯೆ ಕಾಡುತ್ತದೆ. ನಿಮಗೆ ಬಿಪಿ ಕಾಡಲು ನಿಮ್ಮ ಕುಟುಂಬದ ಹಿನ್ನಲೆ ಕೂಡ ಕಾರಣವಾಗಿರಬಹುದು. ನಿಮ್ಮ ಈ ಬಿಪಿ ಸಮಸ್ಯೆ ನಿಮ್ಮ ಮಕ್ಕಳಿಗೂ ಕಾಡಬಹುದು.

Follow Us:
Download App:
  • android
  • ios