Health Tips: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕ್ಯಾನ್ಸರ್ ನಿಮ್ಮ ಬಳಿ ಸುಳಿಬಾರದು ಅಂದ್ರೆ ಪ್ರತಿ ದಿನ ಒಂದೇ ಒಂದು ವರ್ಕ್ ಔಟ್ ಮಾಡಿದ್ರೆ ಸಾಕು. ಯಾವ್ದು ಅದು ? 

ಆರೋಗ್ಯ (health)ವಾಗಿರಲು ಫಿಟ್ನೆಸ್ ಎಷ್ಟು ಮುಖ್ಯ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತು. ಪ್ರತಿ ದಿನ ಹತ್ತು ನಿಮಿಷವಾದ್ರೂ ವ್ಯಾಯಾಮ (exercise) ಮಾಡಿ ಅಂತ ವೈದ್ಯರು ಸಲಹೆ ನೀಡ್ತಾರೆ. ನೀವು ನಿತ್ಯ ಮಾಡುವ ವರ್ಕ್ ಔಟ್ ನಿಮ್ಮನ್ನು ಫಿಟ್ ಆಗಿಡೋದಲ್ದೆ ಕ್ಯಾನ್ಸರ್ (cancer) ಮಹಾಮಾರಿಯಿಂದ ನಿಮ್ಮನ್ನು ರಕ್ಷಿಸುತ್ತದೆ. ನಿತ್ಯ ವರ್ಕ್ ಔಟ್ ಮಾಡುವವರಿಗೆ ಶೇಕಡಾ 30ರಷ್ಟು ಕ್ಯಾನ್ಸರ್ ರಿಸ್ಕ್ ಕಡಿಮೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ. ಅದ್ರ ಪ್ರಕಾರ, ವ್ಯಕ್ತಿ ದಿನಕ್ಕೆ 30 -40 ನಿಮಿಷ ವ್ಯಾಯಾಮ ಮಾಡ್ಬೇಕು. ಯಾವ ವ್ಯಾಯಾಮ ಮಾಡಿದ್ರೆ ಬ್ರೆಸ್ಟ್ ಕ್ಯಾನ್ಸರ್ ಸೇರಿದಂತೆ ಅಪಾಯಕಾರಿ ಕ್ಯಾನ್ಸರ್ ನಿಂದ ದೂರ ಇರ್ಬಹುದು ಎಂಬುದನ್ನು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.

ಹೊಸ ಸಂಶೋಧನೆ ಹೇಳೋದೇನು? : ಹೊಸ ಸಂಶೋಧನೆ ಪ್ರಕಾರ, ಯಾವುದೇ ವ್ಯಕ್ತಿ ನಿತ್ಯ ವ್ಯಾಯಾಮ ಮಾಡೋದ್ರಿಂದ ಎಂಡಾರ್ಫಿನ್ ಎಂಬ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಅದು ಮನಸ್ಥಿತಿಯನ್ನು ಸುಧಾರಿಸುತ್ತದೆ. ಅಲ್ಲದೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. 30 ನಿಮಿಷಗಳ ಕಾಲ ನೀವು ವ್ಯಾಯಾಮ ಮಾಡಿದ್ರೆ ಅದ್ರ ನಂತ್ರ TNF ಆಲ್ಫಾದಂತಹ ಉರಿಯೂತದ ಅಂಶಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಇದು ಕ್ಯಾನ್ಸರ್ ಕೋಶಗಳು ಬೆಳೆಯುವುದನ್ನು ತಡೆಯುತ್ತವೆ ಎಂದು ಸಂಶೋಧನೆ ಹೇಳಿದೆ.

ಕ್ಯಾನ್ಸರ್ ನಿಂದ ದೂರ ಇರಲು ಯಾವ ವ್ಯಾಯಾಮ ಮಾಡ್ಬೇಕು? : ಸಂಶೋಧನೆ ಹೆಚ್ಚು ತೀವ್ರವಾಗಿರುವ ವ್ಯಾಯಾಮಕ್ಕೆ ಆದ್ಯತೆ ನೀಡಿದೆ. ನೀವು ಸೈಕ್ಲಿಂಗ್, ಈಜು ಇಲ್ಲವೆ ರನ್ನಿಂಗ್ ನಂತಹ ದಣಿವಾಗುವ ವ್ಯಾಯಾಮವನ್ನು ಮಾಡ್ಬೇಕು. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಹೇಳಿದೆ. ನೀವು ಹೆಚ್ಚು ಸಮಯ ಯೋಗ ಮಾಡಿದ್ರೆ ಇಲ್ಲವೆ ವೇಗವಾಗಿ ವಾಕಿಂಗ್ ಮಾಡುವುದು ಕೂಡ ಪ್ರಯೋಜನಕಾರಿ. ನಿಯಮಿತವಾಗಿ ನೀವು 30 ರಿಂದ 40 ನಿಮಿಷಗಳ ಕಾಲ ವ್ಯಾಯಾಮ ಮಾಡ್ಬೇಕಾಗುತ್ತದೆ ಎಂದು ಸಂಶೋಧನೆ ಹೇಳಿದೆ. ನೀವು ಇಷ್ಟು ಸಮಯ ವರ್ಕ್ ಔಟ್ ಮಾಡಿದ್ರೆ ಹಾರ್ಮೋನ್ ಸಮತೋಲನಗೊಳ್ಳುತ್ತದೆ. ಕರುಳಿನ ಆಕ್ಟಿವಿಟಿಯಲ್ಲಿ ಸುಧಾರಣೆ ಕಂಡು ಬರುತ್ತದೆ. ಸ್ತನ ಮತ್ತು ಕೊಲೊನ್ ಕ್ಯಾನ್ಸರ್ ಅಪಾಯವನ್ನು ಶೇಕಡಾ 30 ರಿಂದ 40 ರಷ್ಟು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ವರದಿ ಮಾಡಿದೆ.

ಗಂಟೆಗಟ್ಟಲೆ ಬೆವರು ಸುರಿಸ್ಬೇಕಾಗಿಲ್ಲ : ಜನರು 30 -40 ನಿಮಿಷದ ವರ್ಕ್ ಔಟ್ ಗಳನ್ನು ಪರಿಗಣಿಸೋದಿಲ್ಲ. ಗಂಟೆಗಟ್ಟಲೆ ಜಿಮ್ ನಲ್ಲಿ ಬೆವರು ಸುರಿಸಿದ್ರೆ ಮಾತ್ರ ಅದನ್ನು ವರ್ಕ್ ಔಟ್ ಅಂತ ಭಾವಿಸ್ತಾರೆ. ತಜ್ಞರ ಪ್ರಕಾರ, ನೀವು ಒಂದೆರಡು ಗಂಟೆ ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ಅಗತ್ಯವಿಲ್ಲ. ನಿಮಗೆ ಸಮಯ ಇಲ್ಲ ಎಂದಾದ್ರೆ ದಿನಕ್ಕೆ 30 ನಿಮಿಷ ಮೀಸಲಿಡಿ. ಈ ಸಮಯದಲ್ಲಿ ನೀವು ಮಾಡುವ ವರ್ಕ್ ಔಟ್ ನಿಮ್ಮ ಆರೋಗ್ಯವನ್ನು ಸುಧಾರಿಸಬಲ್ಲದು. ಕೇವಲ ಒಂದೇ ಒಂದು ವರ್ಕ್ ಔಟ್ ಮಾಡಿಯೂ ನೀವು ರೋಗದಿಂದ ದೂರ ಇರ್ಬಹುದು ಎನ್ನುತ್ತಾರೆ ತಜ್ಞರು.

ಇದನ್ನು ನೆನಪಿನಲ್ಲಿಡಿ : ನೀವಿನ್ನೂ ಆರಂಭದಲ್ಲಿದ್ದೀರಿ ಎಂದಾದ್ರೆ ಮೊದಲ ದಿನವೇ ವೇಗವಾದ ವ್ಯಾಯಾಮ ಮಾಡ್ಬೇಡಿ. ಆರಂಭದಲ್ಲಿ ನಿಮ್ಮ ವ್ಯಾಯಾಮ ನಿಧಾನವಾಗಿರಲಿ. ಕ್ರಮೇಣ ನಿಮ್ಮ ವ್ಯಾಯಾಮದ ವೇಗ ಹಾಗೂ ಸಮಯವನ್ನು ಹೆಚ್ಚಿಸಿ. ದಿನ ಕಳೆದಂತೆ ಸ್ಟ್ರೆಚಿಂಗ್, ಲಘು ಕಾರ್ಡಿಯೋವನ್ನು ನೀವು ಸೇರಿಸಬಹುದು. ಆರಂಭದ ದಿನವೇ ನೀವು ವೇಗವಾದ ವ್ಯಾಯಾಮ ಮಾಡಿದ್ರೆ ಅದು ನಿಮಗೆ ಹಾನಿಯುಂಟು ಮಾಡುವ ಅಪಾಯ ಹೆಚ್ಚು. ವ್ಯಾಯಾಮದ ಜೊತೆ ಆಹಾರದ ಬಗ್ಗೆ ಕಾಳಜಿವಹಿಸಿದ್ರೆ ಆರೋಗ್ಯದಲ್ಲಿ ಬೇಗ ಸುಧಾರಣೆ ಕಾಣ್ಬಹುದು.