ಮೀನುಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್, ಪ್ರೊಟೀನ್, ವಿಟಮಿನ್ ಡಿ ಖನಿಜಾಂಶಗಳು ಸಮೃದ್ಧವಾಗಿವೆ. ಹೃದಯದ ಆರೋಗ್ಯದಿಂದ ಹಿಡಿದು ಮೆದುಳಿನ ಬೆಳವಣಿಗೆಯವರೆಗೆ ಪ್ರಯೋಜನಗಳಿವೆ.
food Mar 12 2026
Author: Chethan Kumar Image Credits:stockPhoto
Kannada
ಸಾಲ್ಮನ್ ಮೀನು (Salmon)
EPA ಮತ್ತು DHA ನಂತಹ ಒಮೆಗಾ-3 ಫ್ಯಾಟಿ ಆಸಿಡ್‌ಗಳು ಅಧಿಕವಾಗಿವೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಹಾರ್ಟ್ ಅಟ್ಯಾಕ್ ಅಪಾಯವನ್ನು ತಡೆಯುತ್ತದೆ. ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
Image credits: stockPhoto
Kannada
ಬಾಂಗ್ಡಾ ಮೀನು (Mackerel)
ಒಮೆಗಾ-3 ಮತ್ತು ವಿಟಮಿನ್ ಡಿ ಇದರಲ್ಲಿ ಸಮೃದ್ಧವಾಗಿದೆ. ಈ ಮೀನನ್ನು ನಿಯಮಿತವಾಗಿ ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜೊತೆಗೆ ನರವ್ಯೂಹವನ್ನು ರಕ್ಷಿಸುತ್ತದೆ.
Image credits: stockPhoto
Kannada
ಬೂತಾಯಿ ಮೀನು (Sardines)
ಒಮೆಗಾ-3, ಫಾಸ್ಪರಸ್, ಪೊಟ್ಯಾಶಿಯಂ, ಸೆಲೆನಿಯಮ್, ಕ್ಯಾಲ್ಶಿಯಂ, ಕಬ್ಬಿಣಾಂಶದಿಂದ ಸಮೃದ್ಧವಾಗಿದೆ. ಮೂಳೆ, ಹಲ್ಲುಗಳ ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುತ್ತದೆ.
Image credits: stockPhoto
Kannada
ಬೈಗೆ ಮೀನು (Anchovies)
ಒಮೆಗಾ-3 ,ಕ್ಯಾಲ್ಶಿಯಂ ಅಧಿಕ. ವಿಟಮಿನ್ ಬಿ3 (ನಿಯಾಸಿನ್) ದೇಹಕ್ಕೆ ಶಕ್ತಿ ನೀಡುವುದಲ್ಲದೆ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಣ್ಣು ಮತ್ತು ಮೂಳೆಗಳ ಆರೋಗ್ಯಕ್ಕೆ ಇದು ಉತ್ತಮ.
Image credits: stockPhoto
Kannada
ತುನಾ ಮೀನು (Tuna)
ಒಮೆಗಾ-3, ಪ್ರೊಟೀನ್ ಹೇರಳವಾಗಿದೆ. ಸ್ನಾಯುಗಳನ್ನು ಬಲಪಡಿಸುತ್ತದೆ. ತೂಕ ಇಳಿಸಲು ಸಹಾಯ ಮಾಡುತ್ತದೆ. ಈ ಮೀನನ್ನು ನಿಯಮಿತವಾಗಿ ಸೇವಿಸಿದರೆ ಗರ್ಭಾಶಯ ಬಲಗೊಳ್ಳುತ್ತದೆ. ಪುರುಷರಲ್ಲಿ ವೀರ್ಯದ ಗುಣಮಟ್ಟ ಹೆಚ್ಚಿಸುತ್ತದೆ.
Image credits: stockPhoto
Kannada
ಅಂಜಲ್ ಮತ್ತು ಸಂಕ್ರಾ ಮೀನು
ಇವುಗಳಲ್ಲಿ ಪ್ರೊಟೀನ್ ಅಂಶ ಅಧಿಕ. ವಿಟಮಿನ್ ಬಿ12 ಕೂಡ ಸಮೃದ್ಧವಾಗಿದೆ. ಈ ಮೀನುಗಳನ್ನು ನಿಯಮಿತವಾಗಿ ತಿನ್ನುವುದರಿಂದ ನರವ್ಯೂಹ ಬಲಗೊಳ್ಳುತ್ತದೆ. ಹೃದಯದ ಆರೋಗ್ಯ ಸುಧಾರಿಸುತ್ತದೆ. ದೇಹದ ತೂಕ ಇಳಿಸಲು ಸಹ ಸಹಕಾರಿ.
Image credits: stockPhoto
Kannada
ಮರಲ್ ಮತ್ತು ಕುಚ್ಚು ಮೀನು
ಮರಲ್ ಮತ್ತು ಕುಚ್ಚು ಮೀನುಗಳಲ್ಲಿ ಪ್ರೊಟೀನ್ ಅಂಶ ಹೆಚ್ಚಾಗಿರುತ್ತದೆ. ವಿಟಮಿನ್ ಬಿ12 ಕೂಡ ಅಧಿಕವಾಗಿದೆ. ಇವು ಸ್ನಾಯುಗಳನ್ನು ಬಲಪಡಿಸುತ್ತವೆ. ನರವ್ಯೂಹದ ಆರೋಗ್ಯವನ್ನು ವೃದ್ಧಿಸುತ್ತವೆ.