Asianet Suvarna News Asianet Suvarna News

ಎರಡಲ್ಲ..ಮೂರಲ್ಲ,ಬ್ರೆಜಿಲ್‌ನಲ್ಲಿ ಬರೋಬ್ಬರಿ 7.3 ಕೆಜಿ ತೂಕದ ದೈತ್ಯ ಮಗು ಜನನ

ಸಾಮಾನ್ಯವಾಗಿ ಹುಟ್ಟುವ ಮಗುವ 2ರಿಂದ 3 ಕೆಜಿಯ ವರೆಗೆ ಇರುತ್ತದೆ. ಆದರೆ ಬ್ರೆಜಿಲ್‌ನ ಮಹಿಳೆಯೊಬ್ಬರು 7.3 ಕೆ.ಜಿ ತೂಕದ ಮಗುವಿಗೆ ಜನ್ಮ ನೀಡಿದ್ದಾರೆ. ಇದು ಎಲ್ಲರ ಹುಬ್ಬೇರುವಂತೆ ಮಾಡಿದೆ. 

Woman gives birth to 2 feet-tall baby weighing 7 kg in Brazil, pic goes viral Vin
Author
First Published Feb 3, 2023, 10:52 AM IST

ಲ್ಯಾನ್ಕೆಸ್ಟರ್: ಸಾಮಾನ್ಯವಾಗಿ ನವಜಾತ ಶಿಶು 2.5 ಕೆಜಿಯಿಂದ 3.5 ಕೆಜಿ ಇರುತ್ತೆ. ದಷ್ಟಪುಷ್ಟವಾಗಿ ಬೆಳೆದಿದ್ರೆ 5 ಕೆಜಿ ಇರಬಹುದೇನೋ. ಆದ್ರೆ ಬ್ರೆಜಿಲ್​ನ ಮಹಾತಾಯಿಯೊಬ್ಬಳು 7.3 ಕೆ.ಜಿ ತೂಕದ, ಎರಡು ಅಡಿ ಉದ್ದದ ದೈತ್ಯ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ಪಾರಿಂಟಿನ್ಸ್‌ನ ಪಾಡ್ರೆ ಕೊಲಂಬೊ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿದ್ದು, ಆ್ಯಂಗರ್‌ಸನ್ ಸ್ಯಾಂಟೋಸ್ ಎಂದು ಹೆಸರಿಡಲಾಗಿದೆ. ಬ್ರೆಜಿಲ್‌ನಲ್ಲಿ ಈವರೆಗೆ ಜನಿಸಿದ ಅತ್ಯಂತ ತೂಕದ ಮಗು ಎಂಬ ದಾಖಲೆ ಹೊಂದಿತ್ತು.ಆಂಗರ್ಸನ್ ಸ್ಯಾಂಟೋಸ್ ಅವರು ಅಮೆಜಾನಾಸ್ ರಾಜ್ಯದ ಪ್ಯಾರಿಂಟಿನ್ಸ್‌ನಲ್ಲಿರುವ ಹಾಸ್ಪಿಟಲ್ ಪಾಡ್ರೆ ಕೊಲಂಬೊದಲ್ಲಿ ಸಿಸೇರಿಯನ್ ಮೂಲಕ ಮಗು ಜನಿಸಿತು.

1955ರಲ್ಲಿ ಇಟಲಿಯಲ್ಲಿ 10.2 ಕೆ.ಜಿ. ತೂಕದ ಮಗು ಜನಿಸಿತ್ತು
ಈ ಹಿಂದೆಯೂ ಅಸಹಜ ಗಾತ್ರ ಹಾಗೂ ತೂಕದ (Weight) ಮಕ್ಕಳು ಜನಿಸಿದ ಉದಾಹರಣೆಗಳಿವೆ. 2016ರಲ್ಲಿ ಮಗುವೊಂದು 6.8 ಕೆ.ಜಿ ತೂಕವಿತ್ತು. ಸದ್ಯ ಶಿಶು ಬ್ರೆಜಿಲ್​ನಲ್ಲಿ ಇದುವರೆಗೆ ಜನಿಸಿದ ಅತಿ ಹೆಚ್ಚು ತೂಕದ ಮಗು (Baby) ಎಂಬ ದಾಖಲೆ ಹೊಂದಿದೆ. ಆದರೆ, ವಿಶ್ವದಲ್ಲಿ ಇದಕ್ಕಿಂತ ಹೆಚ್ಚು ತೂಕದ ಮಗು ಜನಿಸಿರುವ ಉದಾಹರಣೆ ಇದೆ. 1955ರಲ್ಲಿ ಇಟಲಿಯಲ್ಲಿ 10.2 ಕೆ.ಜಿ. ತೂಕದ ಮಗು ಜನಿಸಿತ್ತು. ಜನನದ ಸಮಯದಲ್ಲಿ ಸಾಮಾನ್ಯವಾಗಿ ಗಂಡು ಮಗುವಿನ ತೂಕ 3.3 ಕೆಜಿ ಹಾಗೂ ಹೆಣ್ಣು ಮಗುವಿನ ತೂಕ 3.2 ಕೆಜಿ ವರೆಗೆ ಇರುತ್ತದೆ. 

ಮಗು ತೂಕ ಏರ್ತಿಲ್ಲ ಅನ್ನೋ ಚಿಂತೆನಾ? ಈ ಆಹಾರ ನೀಡಿದ್ದೀರಾ?

ಹೆಚ್ಚು ತೂಕವಿರುವ ಮಕ್ಕಳು ಮ್ಯಾಕ್ರೋಸೋಮಿಯಾ ಶಿಶುಗಳು
ಅಧಿಕ ತೂಕದ ದೈತ್ಯ ಶಿಶುಗಳನ್ನು ಮ್ಯಾಕ್ರೋಸೋಮಿಯಾ ಶಿಶುಗಳು (Infants) ಎಂದು ಹೇಳಲಾಗುತ್ತದೆ. 4 ಕೆಜಿಗಿಂತ ಹೆಚ್ಚು ತೂಕವಿರುವ ಯಾವುದೇ ಮಗುವನ್ನು ಹೀಗೆ ಕರೆಯಲಾಗುತ್ತದೆ. ಜಗತ್ತಿನಲ್ಲಿ ಮ್ಯಾಕ್ರೋಸೋಮಿಯಾ ಶಿಶುಗಳ ಜನನ ಶೇಕಡ 12ರಷ್ಟಿದೆ. ತಾಯಂದಿರಲ್ಲಿ ಗರ್ಭಾವಸ್ಥೆಯ ಹಲವು ಸಮಸ್ಯೆಗಳಿಂದಾಗಿ ಇಂಥಾ ಮಕ್ಕಳು ಜನಿಸುತ್ತಾರೆ. ಮಧುಮೇಹ (Diabetes) ಸಮಸ್ಯೆಯಿಂದಾಗಿ ಈ ರೀತಿಯ ಮಕ್ಕಳ ಜನನದ ಸಾಧ್ಯತೆ ಶೇಕಡ 15ರಿಂದ 45ರಷ್ಟು ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ. ಸ್ಥೂಲಕಾಯದ ತಾಯಂದಿರು ಮ್ಯಾಕ್ರೋಸೋಮಿಯಾ ಶಿಶುವಿಗೆ ಜನ್ಮ ನೀಡುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದು ವೈದ್ಯರು ಹೇಳುತ್ತಾರೆ.

ಗರ್ಭಾವಸ್ಥೆಯ ಮಧುಮೇಹ ಕೂಡ ಅಪಾಯಕಾರಿ ಅಂಶವಾಗಿದೆ. ಅದರಲ್ಲಿ ಕೆಲವು ಗರ್ಭಾವಸ್ಥೆಯಲ್ಲಿ ತಾಯಿಯಲ್ಲಿ ಇನ್ಸುಲಿನ್ ಪ್ರತಿರೋಧದ ಹೆಚ್ಚಳಕ್ಕೆ ಸಂಬಂಧಿಸಿವೆ. ಜರಾಯುವಿನ ಮೂಲಕ ಭ್ರೂಣಕ್ಕೆ ಚಲಿಸುವ ಗ್ಲುಕೋಸ್, ಭ್ರೂಣವು ಅತಿಯಾಗಿ ಬೆಳೆಯಲು ಸಹಾಯ ಮಾಡುತ್ತದೆ. ಈ ಸ್ಥಿತಿಯು ಲಿಪಿಡ್‌ಗಳು (ಕೊಬ್ಬುಗಳು) ಜರಾಯುವಿನೊಳಗೆ ಪ್ರವೇಶಿಸಲು ಸಹಾಯ ಮಾಡುತ್ತದೆ, ಮಗುವಿನ ಬೆಳವಣಿಗೆಗೆ ಹೆಚ್ಚಿನ ಇಂಧನವನ್ನು ಒದಗಿಸುತ್ತದೆ.

ಗರ್ಭಾವಸ್ಥೆಯಲ್ಲಿ ವಯಸ್ಸಾಗಿರುವುದು ಮ್ಯಾಕ್ರೋಸೋಮಿಯಾದೊಂದಿಗೆ ಮಗುವನ್ನು ಹೊಂದುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. 35 ವರ್ಷಕ್ಕಿಂತ ಮೇಲ್ಪಟ್ಟ ತಾಯಿಯ ವಯಸ್ಸು ಮಗುವಿಗೆ ಮ್ಯಾಕ್ರೋಸೋಮಿಯಾವನ್ನು ಹೊಂದುವ ಸಾಧ್ಯತೆ 20 ಪ್ರತಿಶತ ಹೆಚ್ಚು. ತಂದೆಯ ವಯಸ್ಸು ಕೂಡ ಲೆಕ್ಕಕ್ಕೆ ಬರುತ್ತದೆ. 35 ಕ್ಕಿಂತ ಹೆಚ್ಚಿನ ತಂದೆಯ ವಯಸ್ಸು ಮ್ಯಾಕ್ರೋಸೋಮಿಯಾ ಅಪಾಯವನ್ನು ಶೇಕಡಾ 10 ರಷ್ಟು ಹೆಚ್ಚಿಸುತ್ತದೆ.

Newborn Screening Test : ಜನನದ ನಂತರ ತಕ್ಷಣ ಮಗುವಿಗೆ ಈ ಟೆಸ್ಟ್ ಮಾಡಿಸಿ

ಹಿಂದಿನ ಗರ್ಭಧಾರಣೆಗಳು ಮ್ಯಾಕ್ರೋಸೋಮಿಯಾ ಅಪಾಯವನ್ನು ಹೆಚ್ಚಿಸುತ್ತವೆ ಏಕೆಂದರೆ. ಪ್ರತಿ ಸತತ ಗರ್ಭಧಾರಣೆಯೊಂದಿಗೆ, ಜನನ ತೂಕ ಹೆಚ್ಚಾಗುತ್ತದೆ. ಮಿತಿಮೀರಿದ ಗರ್ಭಧಾರಣೆಗಳು, ವಿಶಿಷ್ಟವಾದ 40 ವಾರಗಳ ಹಿಂದೆ ನಡೆಯುವ ಗರ್ಭಧಾರಣೆಗಳು, ವಿಶೇಷವಾಗಿ 42 ವಾರಗಳಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಸಮಯದಲ್ಲಿ ಮಗುವಿನ ಮ್ಯಾಕ್ರೋಸೋಮಿಕ್ ಆಗುವ ಅಪಾಯವನ್ನು ಹೆಚ್ಚಿಸುತ್ತವೆ. ಗಂಡು ಮಗುವನ್ನು ಹೊಂದಿರುವುದು ಮ್ಯಾಕ್ರೋಸೋಮಿಯಾ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹುಡುಗರು ಹುಡುಗಿಯರಿಗಿಂತ ಮೂರು ಪಟ್ಟು ಹೆಚ್ಚು ಮ್ಯಾಕ್ರೋಸೋಮಿಕ್ ಆಗಿ ಜನಿಸುತ್ತಾರೆ.

Follow Us:
Download App:
  • android
  • ios