ಚಳಿಗಾಲದಲ್ಲಿ ಕಾಡೋ ಶೀತ, ಒಣ ಚರ್ಮಕ್ಕಿಲ್ಲಿವೆ ಮದ್ದು

ಚಳಿಗಾಲದಲ್ಲಿ ಚರ್ಮ ಒಣಗುವುದು, ನೆಗಡಿ, ದೇಹದ ಬಿಗಿತ ಸಾಮಾನ್ಯ ಸಮಸ್ಯೆಗಳು. ಬೆಚ್ಚಗಿನ ನೀರು ಕುಡಿಯುವುದು, ಚರ್ಮಕ್ಕೆ ಎಣ್ಣೆ ಹಚ್ಚುವುದು, ಮನೆಯಲ್ಲಿ ತಯಾರಿಸಿದ ಲಿಪ್ ಬಾಮ್ ಬಳಸುವುದು, ವ್ಯಾಯಾಮ, ಯೋಗ ಮತ್ತು ಸಾಕಷ್ಟು ನಿದ್ರೆ ಚಳಿಗಾಲದಲ್ಲಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. 

winter health care skin cold solution and lifestyle tips

- ಪೂಜಾ.ಬಿ.ಆರ್, 2ನೇ ವರ್ಷದ ಎಂಎ (ಪತ್ರಿಕೋದ್ಯಮ), 
ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ

ಚಳಿಗಾಲ ಎಂದರೆ ಒಣ ಚರ್ಮ ಮತ್ತು ನೆಗಡಿ ಹೆಚ್ಚಾಗಿ ಕಾಡೋ ಸಮಸ್ಯೆ. ಚಳಿಗಾಲದಲ್ಲಿ ಮತ್ತೊಂದು ಸಾಮಾನ್ಯ ಸಮಸ್ಯೆ ಎಂದರೆ ದೇಹದ ಬಿಗಿತ. ಚರ್ಮ ಮತ್ತು ಕೂದಲು ಕೂಡ ಒಣಗುತ್ತದೆ. ಸೋಂಕಿನ ವಿರುದ್ಧ ಹೋರಾಡಲು ದೇಹವನ್ನು ಬೆಚ್ಚಗಾಗಿಸಬೇಕು. 

ಚರ್ಮದ ಆರೈಕೆ 
ಚಳಿಗಾಲದಲ್ಲಿ ದೇಹದ ಬಿಗಿತ ಮತ್ತು ಶುಷ್ಕತೆ ಸಾಮಾನ್ಯ. ಇವನ್ನು ಎದುರಿಸಲು ಚಳಿಗಾಲದಲ್ಲಿ ನಮ್ಮ ಜೀವನ ಶೈಲಿ ಬದಲಾಯಿಸಿ, ಕೆಲವು ಆರೋಗ್ಯ ಸಲಹೆಗಳನ್ನು ಪಾಲಿಸಬೇಕಾಗುತ್ತದೆ. 

ಅಬ್ಬಾ ಚಳಿಯಲ್ಲಿ ನೀರು ಕುಡಿಯುವುದೆಂದರೆ ಕಷ್ಟ ಕಷ್ಟ. ಆದರೆ, ದೇಹಕ್ಕೆ ನೀರು ಬೇಕು. ಎಷ್ಟು ಸಾಧ್ಯವೋ ಅಷ್ಟು, ಅದರಲ್ಲಿಯೂ ಬೆಚ್ಚಗಿನ ನೀರು ಕುಡಿದರೆ, ಶರೀರಕ್ಕೆ ಒಳಿತು. ಆಗ ಚರ್ಮ ಒಣಗುವ ಜೊತೆಗೆ, ಬೇರೆ ಬೇರೆ ಸಮಸ್ಯೆಗಳೂ ಕಡಿಮೆಯಾಗುತ್ತದೆ. 

ಸ್ನಾನದ ನಂತರ ತಕ್ಷಣವೇ ಬಾಡಿ ಲೋಷನ್ ಹಚ್ಚಿ. ತೆಂಗಿನ ಎಣ್ಣೆ, ಆಲಿವ್ ಎಣ್ಣೆ  ಅಥವಾ ಎಳ್ಳೆಣ್ಣೆ ಚರ್ಮವನ್ನು ತೇವಗೊಳಿಸಲು ತುಂಬಾ ಒಳ್ಳೆಯದು. ವಿಟಮಿನ್ ಇ ಎಣ್ಣೆಯೂ ಚರ್ಮದಲ್ಲಿ ತೈಲಾಂಶ ಉಳಿಯುವಂತೆ ಮಾಡುತ್ತದೆ. 

ದೇಹದ ಬೊಜ್ಜಿಗೂ ಅಸ್ತಮಾಕ್ಕೂ ಇದೆ ನಂಟು, ಚಳಿಗಾಲದಲ್ಲಿ ಎಚ್ಚರ!

ತುಟಿ ಒಡೆತ
ತುಟಿಗಳನ್ನು ಹೈಡ್ರೇಟ್ ಮಾಡಲು ಮನೆಯಲ್ಲೇ ತಯಾರಿಸಿದ ಲಿಪ್ ಬಾಮ್ ಬಳಸಿ. ಜೇನು ಮೇಣದಿಂದ ಮಾಡಿದ ಲಿಪ್ ಬಾಂಬ್ ಬಳಸಿ, ಇದು ತುಟಿಯಲ್ಲಿ ತೇವಾಂಶ ಇರುವಂತೆ ಮಾಡುತ್ತದೆ. ತುಟಿ ಕಪ್ಪಾಗಿದ್ದರೆ ಕೆಂಪಾಗಿಸುತ್ತದೆ. ಇದನ್ನು ಬರಿ ತುಟಿಗಳಿಗೆ ಮಾತ್ರವಲ್ಲದೆ ಒಡೆದ ಪಾದಕ್ಕೂ ಅತ್ಯುತ್ತಮ ಮದ್ದು. 

 ಮಾಡುವ ವಿಧಾನ : ಮೊದಲಿಗೆ ಜೇನು ಮೇಣವನ್ನು ಬೆಂಕಿಯಲ್ಲಿ ಕಾಯಿಸಿ. ನಂತರ ಅದಕ್ಕೆ  ಬೆಣ್ಣೆ ಮತ್ತು ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿ. ಅದು ಗಟ್ಟಿ ಆದ ನಂತರ ಆರಿಸಿ. ಅದನ್ನು ತುಟಿಗಳಿಗೆ ಮತ್ತು ಕಾಲುಗಳ ಒಡೆತಕ್ಕೆ ಬಳಸಬಹುದು. 

ಸಾಮಾನ್ಯ ಶೀತಕ್ಕೆ ಚಿಕಿತ್ಸೆ
ಶೀತ ಚಳಿಗಾಲದಲ್ಲಿ ಕಾಡುವ ದೊಡ್ಡ ಸಮಸ್ಯೆ. ಈ ಚಳಿಗಾಲದ ಕಾಯಿಲೆಯನ್ನು ಎದುರಿಸಲು, ಬಿಸಿ ನೀರು ಕುಡಿಯಬೇಕು. ನೀಲಗಿರಿ ಎಣ್ಣೆ ಅಥವಾ ಮುಲಾಮನ್ನು ಬಳಸಬೇಕು. ಅರಶಿಣ,  ಶುಂಠಿ, ಗಂಧ ತೇಯ್ದು ಹತ್ತಿಗೆ ಹಚ್ಚಿ ಬತ್ತಿ ರೀತಿಯಲ್ಲಿ ಮಾಡಿ ಒಣಗಿಸಡಬೇಕು. ಅದನ್ನು ಶೀತವಾದಾಗ ಸುಟ್ಟು ಮೂಗಲ್ಲಿ ಎಳೆದರೆ ಶೀತ ಕಡಿಮೆಯಾಗುತ್ತದೆ. ಗಿಡಮೂಲಿಕೆ ಚಹಾ ಮತ್ತು ಸೂಪ್‌ಗಳಂತಹ ಬೆಚ್ಚಗಿನ ದ್ರವಗಳನ್ನು ಸೇವಿಸುವುದರಿಂದಲೂ ಶೀತ ತಡೆಯಬಹುದು.

ಕೂದಲ ಆರೋಗ್ಯ
ಚಳಿಗಾಲದಲ್ಲಿ ಕೂದಲು ಕೂಡ ಒಣಗುತ್ತದೆ. ಕೂದಲನ್ನು ತೊಳೆಯುವ ಮೊದಲು ರಾತ್ರಿ ನೆತ್ತಿಗೆ ಸ್ವಲ್ಪ ಎಣ್ಣೆಯನ್ನು ಮಸಾಜ್ ಮಾಡಿ. ಒಡೆದ ತುದಿಗಳನ್ನು ತಡೆಗಟ್ಟಲು ಕೂದಲಿನ ತುದಿವರೆಗೂ ಎಣ್ಣೆ ಹಚ್ಚಬೇಕು. ಚಳಿಗಾಲದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಕಂಡಿಷನರ್‌ಗಳೂ ಸಹಕರಿಸುತ್ತವೆ. ಆದ್ದರಿಂದ, ಚಳಿಗಾಲದಲ್ಲಿ ಕಂಡೀಷನರ್ ಅನ್ನು ಅನ್ವಯಿಸಬಹುದು. ಹೆಚ್ಚು ಶಾಂಪೂ ಬಳಸಿದರೆ ಕೂದಲು ಒಣಗುವುದರಿಂದ, ಬಳಕೆ ಕಡಿಮೆ ಮಾಡಬೇಕು. 

ಚಳಿಗಾಲದಲ್ಲಿ ಖರ್ಜೂರ ತಿನ್ನೋದ್ರಿಂದ ಎಷ್ಟೊಂದು ಲಾಭ ಇದೆ ನೋಡಿ

ವ್ಯಾಯಾಮ ಮದ್ದು
ಚಳಿಗಾಲದ ಪ್ರಮುಖ ಆರೋಗ್ಯ ಸಲಹೆಗಳಲ್ಲಿ ವ್ಯಾಯಾಮ ಕೂಡ ಒಂದು. ಇದು ಫಿಟ್ ಆಗಿರಲು ಸಹಾಯ ಮಾಡುತ್ತದೆ. ಬೇಸಿಗೆಗೆ ಹೋಲಿಸಿದರೆ ಚಳಿಗಾಲದಲ್ಲಿ ಬೆವರೋದು ಕಡಿಮೆ. ಆದರೆ ವ್ಯಾಯಾಮ ಮಾಡುವ ಸಂದರ್ಭವೂ ಮುಖ್ಯ. ವಾರದಲ್ಲಿ 5 ರಿಂದ 6 ದಿನಗಳವರೆಗೆ ಕನಿಷ್ಠ 30 ನಿಮಿಷಗಳ ವ್ಯಾಯಾಮ ದೇಹಕ್ಕೆ ಅತ್ಯಗತ್ಯ. ಶೀತ ಹವಾಮಾನದ ವಿರುದ್ಧ ಹೋರಾಡಲು ವ್ಯಾಯಾಮ ಸಹಕರಿಸುತ್ತದೆ. ಯೋಗವೂ ದೇಹವನ್ನು ಬೆಚ್ಚಗಿಡುತ್ತದೆ. ವ್ಯಾಯಾಮವು ದೇಹದ ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಿ, ಶೀತಕ್ಕೆ ಕಾರಣವಾಗುವ ಬ್ಯಾಕ್ಟಿರಿಯಾವನ್ನು ಸಾಯಿಸುತ್ತದೆ. ಮುಂಜಾನೆ ಸೂರ್ಯನ ಬೆಳಕಿಗೆ ಮೈಯೊಡ್ಡಿ. ಇದು ದೇಹಕ್ಕೆ ಅತ್ಯಗತ್ಯವಾದ ವಿಟಮಿನ್ ಡಿ ಒದಗಿಸುತ್ತದೆ. ವ್ಯಾಯಾಮದ ಹೊರತಾಗಿ ದೇಹಕ್ಕೆ ವಿಶ್ರಾಂತಿಯೂ ಮುಖ್ಯ. ಚಳಿಗಾಲದಲ್ಲಿ8 ರಿಂದ 9 ಗಂಟೆ ನಿದ್ರಿಸಿ.

ಗಿಡಮೂಲಿಕೆ ಮತ್ತು ಮಸಾಲೆ ಪದಾರ್ಥಗಳನ್ನು ಹೆಚ್ಚೆಚ್ಚು ಬಳಸಿ. 

Latest Videos
Follow Us:
Download App:
  • android
  • ios