ದೇಹದ ಬೊಜ್ಜಿಗೂ ಅಸ್ತಮಾಕ್ಕೂ ಇದೆ ನಂಟು, ಚಳಿಗಾಲದಲ್ಲಿ ಎಚ್ಚರ!
ಅಧಿಕ ತೂಕ ಅಥವಾ ಬೊಜ್ಜು ಶ್ವಾಸಕೋಶದ ಕಾಯಿಲೆಗಳಾದ ಆಸ್ತಮಾ ಮತ್ತು ಅಬ್‌ಸ್ಟ್ರಾಕ್ಟಿವ್ ಸ್ಲೀಪ್ ಅಪ್ನಿಯ (OSA) ಅಪಾಯವನ್ನು ಹೆಚ್ಚಿಸುತ್ತದೆ. ಸ್ಥೂಲಕಾಯತೆಯು ಶ್ವಾಸಕೋಶದ ಕಾರ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ಉರಿಯೂತವನ್ನು ಉಂಟುಮಾಡುತ್ತದೆ,
- ಡಾ. ಭೀಮಸೇನ ರಾವ್ R S, ಹಿರಿಯ ಸಲಹೆಗಾರ-ಪಲ್ಮನಾಲಜಿ, ಫೋರ್ಟಿಸ್ ಆಸ್ಪತ್ರೆ, ರಾಜಾಜಿ ನಗರ
ಒಮ್ಮೆ ನಮ್ಮನ್ನು ಬೊಜ್ಜು ಆವರಿಸಿಕೊಂಡರೆ ಅನೇಕ ಕಾಯಿಲೆಗೆ ನಾವೇ ದಾರಿ ಮಾಡಿಕೊಟ್ಟಂತೆ. ಅತಿಯಾದ ಬೊಜ್ಜಿನಿಂದ ಅಸ್ತಮಾ ರೋಗಿಗಳಿಗೂ ಕಂಟಕ ತಪ್ಪಿದ್ದಲ್ಲ. ಹೌದು, ನಮ್ಮ ದೇಹದ ಬಾಡಿ ಮಾಸ್ ಇಂಡೆಕ್ಸ್ (BMI) 30 ದಾಟಿದರೆ ದೇಹದಲ್ಲಿ ಅನಗತ್ಯ ಕೊಬ್ಬಿಗೆ ಅವಕಾಶ ಮಾಡಿಕೊಡುತ್ತಿದ್ದೇವೆಂಬ ಸೂಚನೆ ನೀಡುತ್ತದೆ. ದೇಶದಲ್ಲಿ ಸರಿ ಸುಮಾರು ಶೇ.30 ರಷ್ಟು ಜನಸಂಖ್ಯೆಯನ್ನು ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವವರು ಎಂದು ವರ್ಗೀಕರಿಸಲಾಗಿದೆ. ಈ ಕಾರಣದಿಂದ ಅಸ್ತಮಾ ಅಥವಾ ಅಬ್‌ಸ್ಟ್ರಾಕ್ಟಿವ್ ಸ್ಲೀಪ್ ಅಪ್ನಿಯ (OSA) ನಂತಹ ಶ್ವಾಸಕೋಶದ ಕಾಯಿಲೆ ಬರುವ ಅಪಾಯವನ್ನು ವೈದ್ಯರು ಬಹಿರಂಗ ಪಡಿಸಿದ್ದಾರೆ. ಹೀಗಾಗಿ ನಿಮ್ಮ ಬೊಜ್ಜು ನಿಮ್ಮ ಶ್ವಾಸಕೋಶದ ಸಮಸ್ಯೆಗೂ ಕಾರಣವಾಗಬಹುದು ಎಚ್ಚರ!
ಬೊಜ್ಜಿಗೂ, ಆಸ್ತಮಾಕ್ಕೂ ಲಿಂಕ್
ಸ್ಥೂಲಕಾಯಕ್ಕೂ ಅಸ್ತಮಾಕ್ಕೂ ನೇರ ಸಂಬಂಧವಿದೆ ಎಂದು ಅಧ್ಯಯನಗಳು ದೃಢೀಕರಿಸಿವೆ. ಅದರಲ್ಲೂ ಮಕ್ಕಳು ಹಾಗೂ ವಯಸ್ಕರಲ್ಲಿ ಬೊಜ್ಜು ಹೆಚ್ಚಾದರೆ ಶ್ವಾಸಕೋಶದ ಸಮಸ್ಯೆಗೆ ತುತ್ತಾಗುವುದು ಖಚಿತ. ಹೆಚ್ಚು ದಪ್ಪವಿದ್ದಾಗ ಶ್ವಾಸಕೋಶ ಸರಾಗವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಇದರಿಂದ ಶ್ವಾಸಕೋಶ ಕಾರ್ಯಕ್ಷಮತೆ ಕಳೆದು ಕೊಳ್ಳುತ್ತದೆ. ಆಗಾಗ್ಗೆ ಆಸ್ಪತ್ರೆಗೆ ಸೇರಬೇಕಾಗುತ್ತದೆ. ಅಷ್ಟೇ ಅಲ್ಲದೆ, ಅಧಿಕ ತೂಕವು ಉರಿಯೂತ, ಆಕ್ಸಿಡೇಟಿವ್ ಒತ್ತಡಕ್ಕೂ ಕಾರಣವಾಗಬಹುದು. ಇದು ಶ್ವಾಸಕೋಶಗಳು ಸರಿಯಾಗಿ ಕಾರ್ಯನಿರ್ವಹಿಸಲು ಕಷ್ಟಪಡುತ್ತದೆ. ಇದಲ್ಲದೆ, ಸ್ಥೂಲಕಾಯತೆ ಶ್ವಾಸನಾಳದ ಪ್ರತಿರೋಧವನ್ನು ಹೆಚ್ಚಿಸಿ, ಶ್ವಾಸಕೋಶದ ಕಾರ್ಯಕ್ಷಮತೆ ಕಡಿಮೆ ಮಾಡುವ ಮೂಲಕ ಅಸ್ತಮಾವನ್ನು ಉಲ್ಬಣಗೊಳಿಸಬಹುದು.
ಅಬ್‌ಸ್ಟ್ರಾಕ್ಟಿವ್ ಸ್ಲೀಪ್ ಅಪ್ನಿಯ (OSA)ಗೂ ಬೊಜ್ಜು ಕಾರಣ:
ಪ್ರತಿರೋಧಕ ನಿದ್ರಾ ಉಸಿರುಕಟ್ಟುವಿಕೆ (OSA) ಸ್ಥೂಲಕಾಯತೆಗೆ ನಿಕಟ ಸಂಬಂಧ ಹೊಂದಿರುವ ಮತ್ತೊಂದು ಶ್ವಾಸಕೋಶದ ಕಾಯಿಲೆ. OSA ನಿದ್ರೆಯ ಸಮಯದಲ್ಲಿ ಭಾಗಶಃ ಅಥವಾ ಸಂಪೂರ್ಣ ಮೇಲ್ಭಾಗದ ಶ್ವಾಸನಾಳದ ಅಡಚಣೆಯಿಂದ ಸರಾಗವಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ. ಇದರಿಂದ ನಿದ್ರಾಹೀನತೆ ಕಾಡಬಹುದು, ಕೆಲವೊಮ್ಮೆ ನಿದ್ರೆಯಲ್ಲಿಯೇ ಉಸಿರುಗಟ್ಟಲೂ ಬಹುದು. ಈ ಸಮಸ್ಯೆಯಿಂದ ನಿದ್ರೆ ಇಲ್ಲದೇ ಹಗಲಿನಲ್ಲಿ ಆಯಾಸಕ್ಕೆ ಕಾರಣವಾಗಲಿದೆ.
ಊಟ ಆದ್ಮೇಲೆ ಸೋಂಪು ತಿಂದ್ರೆ ಎಷ್ಟೊಂದು ಲಾಭ ಇದೆ ನೋಡಿ
ಸ್ಥೂಲಕಾಯತೆಯು OSA ಗೆ ಪ್ರಾಥಮಿಕ ಅಪಾಯಕಾರಿ ಅಂಶವಾಗಿದ್ದು, OSA ಹೊಂದಿರುವ ಶೇ.70ರಷ್ಟು ವ್ಯಕ್ತಿಗಳು ಅಧಿಕ ತೂಕ ಹೊಂದಿರುತ್ತಾರೆ. ವಿಶೇಷವಾಗಿ ಕುತ್ತಿಗೆ ಮತ್ತು ಗಂಟಲಿನ ಸುತ್ತ ಹೆಚ್ಚು ಬೊಜ್ಜಿನಿಂದ ಜೋತು ಬೀಳುವ ಚರ್ಮ ಉಸಿರಾಟಕ್ಕೆ ಅಡೆತಡೆಯಾಗಲಿದೆ. OSAಗೆ ಸೂಕ್ತ ಚಿಕಿತ್ಸೆ ಪಡೆಯದೇ ಹೋದಲ್ಲಿ ಹೃದಯರಕ್ತನಾಳದ ಕಾಯಿಲೆ, ಮಧುಮೇಹ ಮತ್ತು ಗಂಭೀರ ನರ ಸಮಸ್ಯೆಗಳು ಕಾಡಬಹುದು.
ಇತರೆ ಸಮಸ್ಯೆಗಳು:
ಸ್ಥೂಲಕಾಯತೆಯಿಂದ ಶ್ವಾಸಕೋಶದ ಕಾಯಿಲೆ ಉಂಟಾಗುವ ಸಾಧ್ಯತೆ ಇದ್ದು, ಅದರಲ್ಲಿ ಈ ಕೆಳಗಿನವು ಪ್ರಮುಖವಾಗಿವೆ.
* ಉರಿಯೂತ: ಅಧಿಕ ತೂಕವು ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗುತ್ತದೆ, ಇದು ಶ್ವಾಸಕೋಶದ ಅಂಗಾಂಶವನ್ನು ಹಾನಿಗೊಳಿಸುತ್ತದೆ ಮತ್ತು ಆಸ್ತಮಾ, OSA ರೋಗಲಕ್ಷಣಗಳನ್ನು ಉಲ್ಬಣಗೊಳಿಸುತ್ತದೆ.
* ಯಾಂತ್ರಿಕ ಬದಲಾವಣೆಗಳು: ಸ್ಥೂಲಕಾಯತೆಯು ಶ್ವಾಸಕೋಶದ ಕಾರ್ಯವಿಧಾನವನ್ನು ಬದಲಾಯಿಸಬಹುದು,
* ಹಾರ್ಮೋನ್ ಅಸಮತೋಲನ: ಇನ್ಸುಲಿನ್ ಪ್ರತಿರೋಧ ಮತ್ತು ಲೆಪ್ಟಿನ್ ಅನಿಯಂತ್ರಣದಂತಹ ಸ್ಥೂಲಕಾಯ-ಸಂಬಂಧಿತ ಹಾರ್ಮೋನ್ ಬದಲಾವಣೆಗಳು ಶ್ವಾಸಕೋಶದ ಕಾಯಿಲೆ ಬೆಳವಣಿಗೆಗೆ ಕಾರಣವಾಗಬಹುದು
* ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (GERD): ಬೊಜ್ಜು GERD ಅಪಾಯವನ್ನು ಹೆಚ್ಚಿಸುತ್ತದೆ, ಇದು ಆಸ್ತಮಾ ಮತ್ತು OSA ರೋಗಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ.
ಅಸ್ತಮಾ ಔಷಧಕ್ಕೆ ಕೊಪ್ಪಳಕ್ಕೆ ಬಂದ 80 ಸಾವಿರಕ್ಕೂ ಹೆಚ್ಚಿನ ಜನರು!
ನಿರ್ವಹಣೆ ಹೇಗೆ?
* ತೂಕ ಇಳಿಸುವುದು: ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಬೇಕು.
* ಜೀವನಶೈಲಿಯಲ್ಲಿ ಬದಲಾವಣೆ: ಧೂಮಪಾನ ನಿಲ್ಲಿಸುವುದು, ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವುದು ಮತ್ತು ಒತ್ತಡ-ಕಡಿಮೆಗೊಳಿಸುವುದು
* ವೈದ್ಯಕೀಯ ನೆರವು: ಬೊಜ್ಜು ಇಳಿಸಲು ಬೆರಿಯಾಟ್ರಿಕ್ ಶಸ್ತ್ರಚಿಕಿತ್ಸೆಯಂತಹ ಔಷಧೀಯ ಮತ್ತು ಶಸ್ತ್ರಚಿಕಿತ್ಸೆಗಳು ತೀವ್ರ ಸ್ಥೂಲಕಾಯತೆಗೆ ಅಗತ್ಯವಾಗಬಹುದು.