Asianet Suvarna News Asianet Suvarna News

Dry Mouth: ಬಾಯಿ ಒಣಗುವುದೇ? ಈ 6 ರೋಗಗಳ ಲಕ್ಷಣವಿರಬಹುದು

ಬಾಯಿ ಒಣಗುವ ಸಮಸ್ಯೆ ಹಲವಾರು ಗಂಭೀರ ರೋಗಗಳ ಲಕ್ಷಣವಾಗಿರಬಹುದು. ಮಧುಮೇಹ ಸೇರಿದಂತೆ 6 ಪ್ರಮುಖ ಸಮಸ್ಯೆಗಳು ಬಾಯಿ ಒಣಗುವ ಪ್ರಾಥಮಿಕ ಲಕ್ಷಣವನ್ನು ತೋರ್ಪಡಿಸುತ್ತವೆ. ಅದರ ಕುರಿತು ಎಚ್ಚರಿಕೆ ಅಗತ್ಯ.
 

Dry Mouth is a symptom of many disease
Author
Bangalore, First Published May 13, 2022, 6:25 PM IST

ಬೇಸಿಗೆಯಲ್ಲಿ (Summer) ಬಾಯಾರುವುದು ಸಹಜ. ಪದೇ ಪದೆ ನೀರು (Water) ಕುಡಿಯಬೇಕು ಎನಿಸುತ್ತದೆ. ತಣ್ಣಗಿನ ಫ್ರಿಡ್ಜ್ ನೀರೇ ಬೇಕೆನಿಸುತ್ತದೆ. ಆದರೂ ಬಾಯಾರಿಕೆ ಆರುವುದಿಲ್ಲ. ಆದರೆ, ನಿಮಗೆ ಕೇವಲ ಬಾಯಾರಿಕೆ (Thirst) ಆಗುತ್ತದೆಯೇ ಅಥವಾ ಆಗಾಗ್ಗೆ ನೀರು ಕುಡಿದರೂ ಬಾಯಿ ಒಣಗಿದಂತೆ (Dry Mouth) ಭಾಸವಾಗುತ್ತದೆಯೇ? ಬಾಯಾರಿಕೆ ಸಹಜವಾದರೆ, ಪದೇ ಪದೆ ಬಾಯಿ ಒಣಗಿದಂತೆ ಆಗುವುದು ಸಹಜವಲ್ಲ. ಅದು ಹಲವಾರು ಆರೋಗ್ಯ ಸಮಸ್ಯೆಗಳ ಲಕ್ಷಣವಾಗಿರಬಹುದು. 
ಬಹಳ ಸಮಯ ನೀರು ಕುಡಿಯದಿದ್ದರೆ ಬಾಯಿ ಒಣಗುತ್ತದೆ. ಆದರೆ, ಸಾಕಷ್ಟು ನೀರು ಕುಡಿಯುತ್ತಿದ್ದರೂ ಬಾಯಿ ಒಣಗುತ್ತಿದ್ದರೆ ಈ 6 ಕಾಯಿಲೆಗಳ ಲಕ್ಷಣ ಇರಬಹುದು. ಯಾವುದೇ ರೋಗವಾದರೂ ನಮ್ಮ ದೇಹದಲ್ಲಿ ಅದರ ಲಕ್ಷಣಗಳು ಗೋಚರಿಸಲು ಆರಂಭವಾಗುತ್ತವೆ. ಅವುಗಳನ್ನು ಸಹಜವೆಂದು ಪರಿಗಣಿಸಿ, ನಿರ್ಲಕ್ಷಿಸಿದರೆ ಅಪಾಯ ತಪ್ಪಿದ್ದಲ್ಲ. ಆರೋಗ್ಯ ತಜ್ಞರ ಪ್ರಕಾರ, ನಮ್ಮ ದೇಹದ ಪ್ರತಿಯೊಂದು ಅಂಗವೂ ಇನ್ನೊಂದರಲ್ಲಿ ಆಂತರಿಕವಾಗಿ ಬೆಸೆದುಕೊಂಡಿರುತ್ತದೆ. ದೇಹದ ಯಾವುದೇ ಭಾಗದಲ್ಲಿ ಸಮಸ್ಯೆ ಉಂಟಾದರೆ, ಇನ್ಯಾವುದೋ ಒಂದು ಭಾಗದಲ್ಲಿ ಅದರ ಪರಿಣಾಮ ಹಾಗೂ ಲಕ್ಷಣ ಕಂಡುಬರುತ್ತದೆ. 
ಒಂದೊಮ್ಮೆ ನಿಮಗೆ ಬಾಯಿಯ ಆರೋಗ್ಯ ಹಾಳಾಗಿದೆ ಎಂದಾದರೆ ಅದು ದೇಹದ ಗಂಭೀರವಾದ ಯಾವುದೋ ಸಮಸ್ಯೆಯ ರೂಪವಾಗಿರುತ್ತವೆ. ಬಾಯಿ ಒಣಗುವುದು ಸಹ ಅಂಥಹುದ್ದೇ ಇನ್ನೊಂದು ಲಕ್ಷಣ. ಹಾಗಿದ್ದರೆ ಬಾಯಿ ಒಣಗುವ ಸಮಸ್ಯೆ ಯಾವೆಲ್ಲ ರೋಗಗಳ ಲಕ್ಷಣವಾಗಿರಬಹುದು ಎಂದು ನೋಡಿ.
•    ಮಧುಮೇಹ (Diabetes)
•    ಸ್ಟ್ರೋಕ್ (Stroke)
•    ಎಚ್ ಐವಿ (HIV)

•    ಅಲ್ಜೀಮರ್
•    ಸ್ಜೊಗ್ರೇನ್ಸ್ ಸಿಂಡ್ರೋಮ್ (Sjograin’s Syndrome)
•    ನರಗಳ ಹಾನಿ (Nerves Damage)

ಇದನ್ನೂ ಓದಿ: ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡುವವರ ಆಹಾರಕ್ರಮ ಹೀಗಿದ್ದರೆ ಆರೋಗ್ಯವಾಗಿರ್ಬೋದು

ಜೊಲ್ಲು (Saliva) ಉತ್ಪಾದನೆ ಕಡಿಮೆ
ಬಾಯಿ ಒಣಗುವ ಸಮಸ್ಯೆಯನ್ನು ವೈದ್ಯಕೀಯವಾಗಿ ಕ್ಸೆರೊಸ್ಟೋಮಿಯಾ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಸಲೈವಾ ಅಂದರೆ ಜೊಲ್ಲು ಉತ್ಪಾದಿಸುವ ಗ್ರಂಥಿಗಳು ಅಗತ್ಯ ಪ್ರಮಾಣದಲ್ಲಿ ಜೊಲ್ಲು ಉತ್ಪಾದನೆ ಮಾಡುವುದಿಲ್ಲ. ಬಾಯಿಯ ಆರೋಗ್ಯಕ್ಕೆ ಎಷ್ಟು ಬೇಕೋ ಅಷ್ಟು ಜೊಲ್ಲು ಉತ್ಪಾದನೆ ಆಗದಿದ್ದಾಗ ಬಾಯಿ ಒಣಗುತ್ತದೆ. ಬಾಯಿಯ ಆರೋಗ್ಯ ಸರಿಯಾಗಿರಲು ಸಲೈವಾ ಪಾತ್ರ ಅಮೂಲ್ಯವಾದದ್ದು. ಬ್ಯಾಕ್ಟೀರಿಯಾಗಳಿಂದ ಉತ್ಪಾದನೆಯಾಗುವ ಆಸಿಡ್ ಅಂಶವನ್ನು ಜೊಲ್ಲು ನಿಯಂತ್ರಿಸುತ್ತದೆ. ಹಾಗೂ ಅದರ ಪರಿಣಾಮವುಂಟಾಗದಂತೆ ನೋಡಿಕೊಳ್ಳುತ್ತದೆ. ಹೀಗಾಗಿ, ಬಾಯಿ ಒಣಗುವ ಸಮಸ್ಯೆಗೆ ಹೆಚ್ಚು ನೀರು ಕುಡಿಯುವುದೊಂದೇ ಪರಿಹಾರವಲ್ಲ. ಸಮಸ್ಯೆಯ ಮೂಲವನ್ನು ಅರಿತುಕೊಳ್ಳುವುದು ಅಗತ್ಯ.

ಇದನ್ನೂ ಓದಿ: ಮೊಟ್ಟೆ ಮಾತ್ರವಲ್ಲ, ಅದರ ಸಿಪ್ಪೆಗಳಲ್ಲಡಗಿದೆ ಆರೋಗ್ಯ…. ಕೂದಲಿಗೆ ಬೆಸ್ಟ್

ಬಾಯಿ ಒಣಗುವ ಸಮಸ್ಯೆಯ ಸಾಮಾನ್ಯ ಲಕ್ಷಣಗಳು (Symtoms)
•    ಬಾಯಿ ಒಳಗೆ ಜಿಗುಟಾದಂತೆ (Sticky) ಭಾಸವಾಗುವುದು
•    ಜೊಲ್ಲು ಮಂದವಾಗಿರುವುದು 
•    ಉಸಿರಿನಿಂದ ವಾಸನೆ (Smell) ಬರುವುದು
•    ತ್ವರಿತವಾಗಿ ಮಾತನಾಡಲು, ಅಗಿಯಲು, ನುಂಗಲು ತೊಂದರೆ
•    ಗಂಟಲಿನಲ್ಲಿ ಏನೋ ಸಿಲುಕಿದಂತೆ ಆಗುವುದು
•    ನಾಲಿಗೆ (Tongue) ಒಣಗುವುದು
•    ರುಚಿಯಲ್ಲಿ (Taste) ವ್ಯತ್ಯಾಸ ಎನಿಸುವುದು

ಈ ಎಲ್ಲ ರೀತಿಯಲ್ಲಿ ಬಾಯಿ ಒಣಗಿದಂತೆ ಭಾಸವಾದರೆ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಆರು ತಿಂಗಳಿಂದ ಇಂತಹ ಸಮಸ್ಯೆ ಉಂಟಾದರೂ ವೈದ್ಯರ ಬಳಿ ಪರೀಕ್ಷೆ ಮಾಡದೆ ಇದ್ದರೆ ತೀವ್ರವಾದ ಸಮಸ್ಯೆ ಉಂಟಾಗಬಹುದು. ಏಕೆಂದರೆ, ಹಲವು ಸಮಸ್ಯೆಗಳಿಗೆ ತ್ವರಿತವಾಗಿ ಚಿಕಿತ್ಸೆ ದೊರೆಯಬೇಕಾಗುತ್ತದೆ. ಒಂದೊಮ್ಮೆ ಸಮಸ್ಯೆ ಕಡಿಮೆ ಇದ್ದರೂ ಸಹ ಬೇಗ ಚಿಕಿತ್ಸೆ ದೊರೆತರೆ ಉತ್ತಮ. ಬಾಯಿಯ ಸ್ವಚ್ಛತೆಗೂ (Oral Hygiene) ಬಾಯಿ ತೇವಭರಿತವಾಗಿರುವುದಕ್ಕೂ ಸಂಬಂಧವಿದೆ. ಒಣಗುತ್ತಿದ್ದರೆ ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಆಗ ವಾಸನೆಯೂ ಬರುತ್ತದೆ. ಹಲವರಿಗೆ ಬಾಯಿ ಒಣಗಿದಾಗ ಹಲ್ಲುಗಳ ಮೇಲೂ ದಪ್ಪನೆಯ ಜಿಡ್ಡು ಕುಳಿತಂತೆ ಭಾಸವಾಗುತ್ತದೆ. ಹೀಗೆ ಆಗುತ್ತಿದ್ದರೆ ವೈದ್ಯರನ್ನು ತಕ್ಷಣ ಭೇಟಿ ಮಾಡಬೇಕು.

Follow Us:
Download App:
  • android
  • ios