Health Tips: ಈ ಕಾರಣದಿಂದ ಮೂತ್ರ ಕಟ್ಟಿಕೊಳ್ಳೋದು ಕಷ್ಟ!

ಚಿಕ್ಕವರಿದ್ದಾಗ ನಿಂತಲ್ಲೇ ಮೂತ್ರ ಮಾಡಿಕೊಳ್ಳೋದು ಮಾಮೂಲಿ. ದೊಡ್ಡವರಾದ್ಮೇಲೂ ಸೀನಿದಾಗ, ಕೆಮ್ಮಿದಾಗ ಇಲ್ಲವೆ ಟಾಯ್ಲೆಟ್ ಗೆ ಹೋಗುವ ಮುನ್ನವೇ ಮೂತ್ರ ವಿಸರ್ಜನೆಯಾಗ್ತಿದ್ದರೆ ಮುಜುಗರಕ್ಕೀಡಾಗಬೇಕಾಗುತ್ತದೆ. ಈ ಸಮಸ್ಯೆ ನಿಮಗೂ ಇದ್ರೆ ಕಾರಣವೇನು ಎಂಬುದನ್ನು ತಿಳಿದ್ಕೊಳ್ಳಿ. 
 

Why Some People Can Not Hold Urine For Long Time

ಮೂತ್ರ ವಿಸರ್ಜನೆ ನಮ್ಮ ಶರೀರದ ಆರೋಗ್ಯವನ್ನು ಪ್ರತಿಬಿಂಬಿಸುತ್ತೆ. ಒಬ್ಬ ವ್ಯಕ್ತಿ ಪದೇ ಪದೇ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ, ಮೂತ್ರವನ್ನು ಕಟ್ಟಿಕೊಂಡರೆ, ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯಾದರೆ, ಮೂತ್ರ ಹೆಚ್ಚು ವಾಸನೆಯಿಂದ ಕೂಡಿದ್ದರೆ ಅಥವಾ ಮೂತ್ರದ ಬಣ್ಣ ಬದಲಾದರೆ ಅದು ಆ ವ್ಯಕ್ತಿಯ ಶರೀರದಲ್ಲಿನ ತೊಂದರೆಗಳ ಸಂಕೇತವಾಗಿದೆ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನಕ್ಕೆ 4-5 ಬಾರಿ ಮೂತ್ರ (Urine) ವಿಸರ್ಜನೆ ಮಾಡುತ್ತಾನೆ. ಮೂತ್ರಕೋಶ (Bladder) ದಲ್ಲಿ ತೊಂದರೆ ಇರುವವರು ಹಲವು ಬಾರಿ ಟಾಯ್ಲೆಟ್ (Toilet) ಗೆ ಹೋಗ್ತಾರೆ. ಇನ್ನು ಕೆಲವರು ಅತೀ ಕಡಿಮೆ ಬಾರಿ ಮೂತ್ರಕ್ಕೆ ಹೋಗುತ್ತಾರೆ ಅಂದ್ರೆ ಅದಕ್ಕೆ ಮೂತ್ರ  ಕಟ್ಟಿಕೊಳ್ಳೋದು ಅಥವಾ ನೀರನ್ನು ಕಡಿಮೆ ಕುಡಿಯೋದು ಕಾರಣವಿರಬಹುದು. ಹಲವು ಮಂದಿಗೆ ಮೂತ್ರವನ್ನು ಕಂಟ್ರೋಲ್ ಮಾಡುವುದು ಕಷ್ಟವಾಗುತ್ತೆ. ಇದರಿಂದ ಅವರು ಮುಜುಗರಕ್ಕೀಡಾಗುವ ಪರಿಸ್ಥಿತಿಯೂ ಎದುರಾಗುತ್ತದೆ. ಪುಟ್ಟ ಮಕ್ಕಳು ಹಾಸಿಗೆಯಲ್ಲಿ ಮೂತ್ರವಿಸರ್ಜನೆ ಮಾಡುವುದು ಸಾಮಾನ್ಯ ಸಂಗತಿ. ಆದರೆ ದೊಡ್ಡವರಿಗೆ ಕೆಲವೊಮ್ಮೆ ಓಡುವಾಗ, ಸೀನುವಾಗ, ಟೆನ್ಶನ್ ಆದಾಗ, ಕೆಮ್ಮಿದಾಗ ಮೂತ್ರ ಸೋರಿಕೆಯಾಗುತ್ತದೆ. ಇದರ ಹೊರತಾಗಿ ಈ ಕೆಳಗಿನ ಕಾರಣಗಳಿಂದ ಕೂಡ ಮೂತ್ರವನ್ನು ತಡೆಯುವುದು ಸಾಧ್ಯವಾಗುವುದಿಲ್ಲ.

CARROT DAY : ಕಣ್ಣಗೂ ಬೆಸ್ಟು, ಹೃದಯಕ್ಕೂ ಬೇಕು ಈ ಕ್ಯಾರೇಟ್

ಈ ಕಾರಣದಿಂದ ಮೂತ್ರವನ್ನು ತಡೆಯುವುದು ಅಸಾಧ್ಯ :

ಗರ್ಭಾವಸ್ಥೆ (Pregnancy) : ಮಹಿಳೆ ಗರ್ಭವತಿಯಾದಾಗ ಪೆಲ್ವಿಕ್ ಸ್ನಾಯುಗಳು ವಿಸ್ತರಿಸಲ್ಪಡುತ್ತದೆ. ಪೆಲ್ವಿಕ್ ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ ಮೂತ್ರಕೋಶವು ಕೆಡುತ್ತದೆ. ಇದರಿಂದ ಸಿಸ್ಟೊಸಿಲ್ ಸಮಸ್ಯೆ ಉದ್ಭವವಾಗುತ್ತದೆ. ಇದು ಮಹಿಳೆಯರಲ್ಲಿ ಕಾಣುವ ಸಮಸ್ಯೆಯಾಗಿದೆ. ಇದರ ಹೊರತಾಗಿ ಮೂತ್ರನಾಳದ ಸುತ್ತಲಿನ ಸ್ನಾಯುಗಳ ಮೇಲೂ ಕೆಟ್ಟ ಪ್ರಭಾವ ಬೀರುತ್ತದೆ. ಹಾಗಾಗಿ ಗರ್ಭವತಿಯಾಗಿರುವವರಿಗೆ ಮೂತ್ರವನ್ನು ನಿಗ್ರಹಿಸುವುದು ಕಷ್ಟವಾಗುತ್ತದೆ.

ತೂಕ ಹೆಚ್ಚಳ ಹಾಗೂ ಸ್ಥೂಲಕಾಯ : ನಿಮ್ಮ ತೂಕದಲ್ಲಿ ಏರಿಕೆ ಹಾಗೂ ಬೊಜ್ಜಿನ ಸಮಸ್ಯೆಯಿಂದ ಹೊಟ್ಟೆಯ ಮೇಲೆ ಒತ್ತಡ ಹೆಚ್ಚುತ್ತದೆ. ಹೊಟ್ಟೆಯ ಮೇಲೆ ಒತ್ತಡ ಹೆಚ್ಚಿದಾಗ ಮೂತ್ರಕೋಶದ ಮೇಲೆ ದುಷ್ಪರಿಣಾಮ ಬೀರುತ್ತದೆ. ಎಬ್ಡೊಮಿನಲ್ ಮೇಲೆ ಬೀಳುವ ಒತ್ತಡ ಪೆಲ್ವಿಕ್ ಪ್ಲೋರ್ ಅನ್ನು ಬಲಹೀನವಾಗಿಸುತ್ತೆ. ಈ ಎಲ್ಲ ತೊಂದರೆಗಳಿಂದ ಮೂತ್ರವನ್ನು ತಡೆಹಿಡಿಯುವುದು ಕಷ್ಟವಾಗುತ್ತೆ.

Health Tips : ದಿನಕ್ಕೆ 10 ಸಾವಿರ ಸ್ಟೆಪ್ಸ್ ನಡೆಯೋದು ಕಷ್ಟವೇನಲ್ಲ! ಇಷ್ಟ್ ಮಾಡಿ ಸಾಕು

ಮಲಬದ್ಧತೆ : ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಮೂತ್ರವನ್ನು ನಿಗ್ರಹಿಸುವುದು ಕಷ್ಟವಾಗುತ್ತದೆ. ನಿಮ್ಮ ಕೊಲೊನ್ ನಲ್ಲಿ ಶೇಖರಣೆಯಾದ ಹೆಚ್ಚಿನ ಪ್ರಮಾಣದ ಮಲವು ಮೂತ್ರಕೋಶದ ಮೇಲೆ ಒತ್ತಡವನ್ನು ಹೆಚ್ಚಿಸುತ್ತೆ. ಅದರಿಂದ ಮೂತ್ರವು ಎಷ್ಟು ಪ್ರಮಾಣದಲ್ಲಿ ಸಂಗ್ರಹವಾಗಬೇಕೋ ಅಷ್ಟು ಸಂಗ್ರಹವಾಗುವುದಿಲ್ಲ. ಇದರಿಂದ ಮೂತ್ರವನ್ನು ಕಟ್ಟಿಕೊಳ್ಳುವುದು ಅಸಾಧ್ಯವಾಗುತ್ತೆ. ಹಾಗೆ ಕಟ್ಟಿಕೊಳ್ಳುವುದರಿಂದ ನೋವು ಕೂಡ ಕಾಣಿಸಿಕೊಳ್ಳಬಹುದು.

ಭಾರವಾದ ವಸ್ತುಗಳನ್ನು ಎತ್ತುವುದು : ಹೆಚ್ಚು ಎಕ್ಸಸೈಜ್ ಮಾಡುವುದರಿಂದ ಮತ್ತು ಭಾರವಾದ ವಸ್ತುಗಳನ್ನು ಎತ್ತವುದು ಮುಂತಾದ ಹೆಚ್ಚಿನ ವರ್ಕ್ ಔಟ್ ಮಾಡುವುದರಿಂದಲೂ ಮೂತ್ರಕೋಶವು ದುರ್ಬಲವಾಗುತ್ತೆ. ಇದರಿಂದ ಮೂತ್ರವನ್ನು ನಿಲ್ಲಿಸುವುದು ಕಷ್ಟವಾಗುತ್ತೆ.

ಮುಟ್ಟಿನ ಸಮಯ : ಹೆಣ್ಣುಮಕ್ಕಳಿಗೆ ಋತುಸ್ರಾವದ ಸಮಯದಲ್ಲಿ ಯೂಟ್ರಸ್ ತನ್ನ ಲೈನಿಂಗ್ ಅನ್ನು ಹೆಚ್ಚಿಸುತ್ತದೆ ಮತ್ತು ಎಗ್ ಇಂಪ್ಲಾಂಟೇಶನ್ ನಿಂದಾಗಿ ಊತಗಳು ಕಾಣಿಸಿಕೊಳ್ಳುತ್ತವೆ. ಗರ್ಭಾಶಯದಲ್ಲಿನ ಈ ಬದಲಾವಣೆ ಗಾಳಿಗುಳ್ಳೆಯ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಈ ಒತ್ತಡದಿಂದಲೇ ಮೂತ್ರವನ್ನು ನಿಗ್ರಹಿಸಲು ತೊಂದರೆಯಾಗುತ್ತದೆ.

ಸ್ನಾಯುಗಳು ಹಾಗೂ ಮೂತ್ರದ ಕೊಳವೆಗಳ ಮೇಲೆ ಬೀಳುವ ಅತಿಯಾದ ಒತ್ತಡದಿಂದ ಹಾಗೂ ಹೆರಿಗೆಯ ಸಮಸ್ಯೆಯಿಂದ ಕಿಬ್ಬೊಟ್ಟೆಯ ಮೇಲೆ ಒತ್ತಡ ಬಿದ್ದರೂ ಕೂಡ ಮತ್ತೆ ಮತ್ತೆ ಮೂತ್ರ ವಿಸರ್ಜನೆಯಾಗುತ್ತದೆ. ಇದನ್ನು ಓವರ್ ಎಕ್ಟಿವ್ ಬ್ಲ್ಯಾಡರ್ ಎನ್ನಲಾಗುತ್ತದೆ. ಇದರ ಹೊರತಾಗಿ ಮಧುಮೇಹ, ಮೂತ್ರನಾಳದ ಸೋಂಕು, ಪಾರ್ಶ್ವವಾಯುವಿನಂತಹ ನರ ಸಂಬಂಧಿ ಸಮಸ್ಯೆಗಳು, ಪ್ರಾಸ್ಟೇಟ್ ಸಮಸ್ಯೆ ಮುಂತಾದವುಗಳಿಂದಲೂ ಮೂತ್ರವನ್ನು ತಡೆಹಿಡಿಯುವುದು ಅಸಾಧ್ಯವಾಗುತ್ತದೆ.

Latest Videos
Follow Us:
Download App:
  • android
  • ios