Asianet Suvarna News Asianet Suvarna News

ರಾತ್ರಿ ಎಡಮಗ್ಗುಲಲ್ಲೇ ಯಾಕೆ ಮಲಗಬೇಕು ಗೊತ್ತೆ?

ಎಡ ಮಗ್ಗುಲಿಗೆ ತಿರುಗಿ ಮಲಗಿ ಎಂದು ಆಯುರ್ವೇದ ತಜ್ಞರು ಹೇಳಿರುವುದನ್ನು ನೀವು ಕೇಳಿರಬಹುದು. ಯಾಕೆ ಗೊತ್ತೆ?

 

 

Why should you lean on your left side while sleeping
Author
Bengaluru, First Published Jul 17, 2021, 2:51 PM IST

ನಮ್ಮ ರಾತ್ರಿ ನಿದ್ದೆಯ ಅವಧಿ ಸರಾಸರಿ ಎಂಟು ಗಂಟೆಗಳು. ಆದರೆ ಕೆಲವರು ಅಗತ್ಯಕ್ಕೂ ಕಡಿಮೆ ನಿದ್ರಿಸುತ್ತಿದ್ದು ಹೆಚ್ಚಿನ ನಿದ್ದೆಯ ಅವಶ್ಯಕತೆ ಖಂಡಿತಾ ಇದ್ದರೆ ಇದನ್ನು ನಿದ್ದೆಯ ಭಂಗಿಯನ್ನು ಕೊಂಚವೇ ಬದಲಿಸುವ ಮೂಲಕ ಸಾಧಿಸಿ ಕೊಳ್ಳಬಹುದು. ಎಡಮಗ್ಗುಲಲ್ಲಿ ಮಲಗುವುದರಿಂದ ಅನೇಕ ಪ್ರಯೋಜನಗಳಾಗುತ್ತವೆ. ಅವುಗಳನ್ನು ಇಲ್ಲಿ ಕೊಡಲಾಗಿದೆ. ಬನ್ನಿ ನೋಡೋಣ.

- ಹೊಟ್ಟೆ ನಮ್ಮ ದೇಹದ ನಡುಭಾಗದಲ್ಲಿದೆ. ಆದರೆ ವಾಸ್ತವದಲ್ಲಿ ಜಠರ ನಮ್ಮ ಹೊಟ್ಟೆಯ ಭಾಗದಲ್ಲಿ ಎಡಭಾಗಕ್ಕೆ ಹೆಚ್ಚು ವಾಲಿಕೊಂಡಿದೆ. ಎಡಮಗ್ಗುಲಲ್ಲಿ ಮಲಗಿದಾಗ ಜೀರ್ಣಿಸಿದ ಆಹಾರ ಮುಂದಿನ ಅಂಗಗಳಿಗೆ ಚಲಿಸಲು ಸುಲಭವಾಗುತ್ತದೆ. ತನ್ಮೂಲಕ ಸಣ್ಣ ಮತ್ತು ದೊಡ್ಡ ಕರುಳುಗಳಲ್ಲಿ ರಾತ್ರಿಯ ಸಮಯದಲ್ಲಿ ಜರುಗುವ ಅನೈಚ್ಛಿಕ ಕಾರ್ಯಗಳು ಸುಲಲಿತವಾಗಿ ನಡೆದು ಮುಂಜಾನೆಯ ವಿಸರ್ಜನಾ ಕಾರ್ಯ ಸುಲಭವಾಗುತ್ತದೆ. ಬದಲಿಗೆ, ಬಲಮಗ್ಗುಲಲ್ಲಿ ಮಲಗಿದರೆ ಪರಿಣಾಮ ವ್ಯತಿರಿಕ್ತವಾಗುತ್ತದೆ. ಜೀರ್ಣಕ್ರಿಯೆ ಕಷ್ಟಕರವಾಗುತ್ತದೆ, ಏಕೆಂದರೆ ಜಠರದ ಭಾರವೇ ಈ ಕ್ರಿಯೆಗೆ ಅಡ್ಡಿಪಡಿಸುತ್ತದೆ. ಇದೇ ರೀತಿಯಲ್ಲಿ, ಕೆಲವು ವೈದ್ಯರ ಪ್ರಕಾರ, ಮೇದೋಜೀರಕ ಗ್ರಂಥಿಯ ಸ್ರವಿಕೆಗಳೂ ರಾತ್ರಿಯ ಸಮಯದಲ್ಲಿ ಎಡಮಗ್ಗುಲಲ್ಲಿ ಮಲಗಿದ್ದಾಗ ಹೆಚ್ಚು ಫಲಕಾರಿಯಾಗಿರುತ್ತದೆ.


ಕಪ್ಪು ಕಡಲೆ ನೀರನ್ನು ಕುಡಿದು ಮಧುಮೇಹ ನಿಯಂತ್ರಣದಲ್ಲಿರಿಸಿ

- ಹಲವಾರು ಆಹಾರಗಳು ಜಠರದಲ್ಲಿ ಉರಿಯೂತವುಂಟು ಮಾಡುತ್ತವೆ. ಉರಿ ತರಿಸುವ ವಾಯುಗಳು ಅನ್ನನಾಳದ ಮೂಲಕ ಹಿಂದೆಬರಲು ಯತ್ನಿಸುವ ಕಾರಣ ಎದುರಾಗುವ ಹುಳಿತೇಗಿನ ತೊಂದರೆ ಅನುಭವಿಸಿದವರಿಗೇ ಗೊತ್ತು. ಆದರೆ ಎಡಮಗ್ಗುಲಲ್ಲಿ ಮಲಗಿದಾಗ ಜಠರದಲ್ಲಿ ಆಮ್ಲೀಯತೆ ಹಿಮ್ಮೆಟ್ಟುವುದು ಸಾಧ್ಯವಾಗದೇ ರಾತ್ರಿಯ ನಿದ್ದೆ ಸುಲಲಿತವಾಗುತ್ತದೆ. ವಾಸ್ತವದಲ್ಲಿ, ಬಲಮಗ್ಗುಲಲ್ಲಿ ಮಲಗಿದರೆ ಎದೆಯುರಿ ಮತ್ತು ಹುಳಿತೇಗು ಎದುರಾಗುವ ಸಾಧ್ಯತೆ ಹೆಚ್ಚುತ್ತದೆ ಹಾಗೂ ಇದು ಅಜೀರ್ಣತೆಗೂ ಕಾರಣವಾಗಬಹುದು. ಜಠರ ಎಡಭಾಗದಲ್ಲಿರುವ ಕಾರಣ ಗುರುತ್ವಾಕರ್ಷಣೆ ಈ ಕಾರ್ಯಕ್ಕೆ ನೆರವು ನೀಡುವ ಮೂಲಕ ಎದೆಯುರಿಯಾಗದಂತೆ ತಡೆಯುತ್ತದೆ.
 

Why should you lean on your left side while sleeping


- ನಮ್ಮ ದೇಹದಲ್ಲಿ ರಕ್ತಪ್ರಸಾರದಂತೆಯೇ ದುಗ್ಧರಸಗಳೂ ತ್ಯಾಜ್ಯಗಳನ್ನು ನಿವಾರಿಸುವ ಮೂಲಕ ಪ್ರಮುಖ ಕಾರ್ಯ ನಿರ್ವಹಿಸುತ್ತವೆ. ಇದರಲ್ಲಿ ದೇಹದ ಎಡಭಾಗದ ವ್ಯವಸ್ಥೆ ಅತಿ ಹೆಚ್ಚಿನ ಕಾರ್ಯ ನಿರ್ವಹಿಸುತ್ತವೆ. ಎಂದರೆ ಎಡಭಾಗದ ದುಗ್ಧನಾಳಗಳು ಹೃದಯದ ಎಡಭಾಗ ಮತ್ತು ದುಗ್ಧನಾಳದ ವ್ಯವಸ್ಥೆಯ ಎದೆಗೂಡಿನ ನಾಳಗಳಿಂದ ತ್ಯಾಜ್ಯಗಳನ್ನು ನಿವಾರಿಸುತ್ತದೆ. ಹಾಗಾಗಿ, ಎಡಭಾಗದಲ್ಲಿಯೇ ಪ್ರಮುಖವಾಗಿರುವ ದುಗ್ಧನಾಳಗಳ ವ್ಯವಸ್ಥೆ ಎಡಮಗ್ಗುಲಲ್ಲಿ ಮಲಗಿದ್ದಾಗ ಗುರುತ್ವಾಕರ್ಷಣೆಯ ಮೂಲಕ ಹೆಚ್ಚು ಫಲಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ದುಗ್ಧರಸಗಳನ್ನು ಸೋಸುವ ಕ್ಷಮತೆ ಎಡಮಗ್ಗುಲಲ್ಲಿ ಮಲಗಿದಾಗ ಉತ್ತಮವಾಗಿರುತ್ತದೆ. 

- ಎಡಮಗ್ಗುಲಲ್ಲಿ ಮಲಗುವ ಮೂಲಕ ನಮ್ಮ ಮೆದುಳಿನ ಭಾಗದಲ್ಲಿ ದಿನದ ಅವಧಿಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ದ್ರವಪದಾರ್ಥಗಳೂ ಪರಿಪೂರ್ಣವಾಗಿ ನಿವಾರಿಸಲ್ಪಟ್ಟು ಮೆದುಳಿನ ಕಾರ್ಯ ನಿರ್ವಹಣೆ ಗರಿಷ್ಟವಾಗುವಲ್ಲಿ ಸಹಕರಿಸುತ್ತವೆ. ತನ್ಮೂಲಕ ಬೆಳಗ್ಗೆದ್ದ ಬಳಿಕ ಎಚ್ಚರಿರುವ ಅಷ್ಟೂ ಹೊತ್ತಿನಲ್ಲಿ ಮೆದುಳು ಹೆಚ್ಚು ಚುರುಕಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಮಣ್ಣಿನ ಮಡಿಕೆಯಲ್ಲಿ ಆಹಾರವನ್ನೇಕೆ ಬೇಯಿಸಿ ತಿನ್ನಬೇಕು?

- ಪಿತ್ತಕೋಶ ಮತ್ತು ಪಿತ್ತಜನಕಾಂಗಗಳು ನಮ್ಮ ದೇಹದ ಬಲಭಾಗದಲ್ಲಿವೆ. ಹಾಗಾಗಿ ಬಲಮಗ್ಗುಲಲ್ಲಿ ಮಲಗಿದಾಗ ಇತರ ಅಂಗಗಳ ಭಾರ ಇದರ ಮೇಲೆ ಬೀಳುವ ಕಾರಣ ಒತ್ತಡದಲ್ಲಿಯೇ ಇವು ಸ್ರವಿಸಬೇಕಾಗುತ್ತದೆ. ಬದಲಿಗೆ ಎಡಮಗ್ಗುಲಲ್ಲಿ ಮಲಗಿದಾಗ ಇವುಗಳ ಮೇಲೆ ಭಾರ ಬೀಳದೇ ಪೂರ್ಣಕ್ಷಮತೆಯಲ್ಲಿ ಸುಲಭವಾಗಿ ರಸಗಳನ್ನು ಸ್ರವಿಸಲು ಸಾಧ್ಯವಾಗುತ್ತದೆ., ಆದಾಗ್ಯೂ, ನೀವು ನಿಮ್ಮ ಬಲಭಾಗದಲ್ಲಿ ಮಲಗಿದಾಗ, ಗುರುತ್ವಾಕರ್ಷಣೆಯ ಸಹಾಯದಿಂದ ಪಿತ್ತವನ್ನು ಸುಲಭವಾಗಿ ಸ್ರವಿಸಬಹುದು.a

- ಗುಲ್ಮವು ದುಗ್ಧರಸ ವ್ಯವಸ್ಥೆಯ ಒಂದು ಭಾಗವಾಗಿದ್ದು ದುಗ್ಧರಸ ಮತ್ತು ರಕ್ತವನ್ನು ಸೋಸುವ ಕಾರ್ಯವನ್ನು ನಿರ್ವಹಿಸುತ್ತದೆ. ಮತ್ತು ಗುಲ್ಮ ಎಡಭಾಗದಲ್ಲಿದೆ. ಗುರುತ್ವಾಕರ್ಷಣೆಯ ಸಹಾಯದಿಂದಾಗಿ ನಿಮ್ಮ ಎಡಭಾಗದಲ್ಲಿ ಮಲಗುವ ಮೂಲಕ ಗುಲ್ಮ ದೇಹದಿಂದ ತ್ಯಾಜ್ಯಗಳನ್ನು ನಿವಾರಿಸುವ ಕೆಲಸ ಸುಲಭವಾಗಿ ನಿರ್ವಹಿಸುತ್ತದೆ.

- ಹೃದಯವು ನಮ್ಮ ದೇಹದ ಎಡಭಾಗಕ್ಕೆ ಹೆಚ್ಚು ವಾಲಿಕೊಂಡಿದೆ. ವಿಶ್ರಾಂತಿಯ ಸಮಯದಲ್ಲಿ ಪ್ರಮುಖ ಅಂಗಗಳಿಗೂ ವಿಶ್ರಾಂತಿ ನೀಡುವಾಗ ಮಲಗುವ ಭಂಗಿ ಪ್ರಮುಖ ಪಾತ್ರ ವಹಿಸುತ್ತದೆ. ಎಡಭಾಗದಲ್ಲಿ ಮಲಗಿ ನಿದ್ದೆ ಹೋದಾಗ ನಿಮ್ಮ ಹೃದಯದ ಮೇಲೆ ಕನಿಷ್ಟ ಒತ್ತಡವವಿರಲು ಇದರಿಂದ ಸಾಧ್ಯವಾಗುತ್ತದೆ. ತನ್ಮೂಲಕ ಹೃದಯದ ಕಾರ್ಯವಿಧಾನ ಸುಲಭವಾಗಿ ರಕ್ತಪರಿಚಲನೆಯೂ ಉತ್ತಮಗೊಳ್ಳುತ್ತದೆ. ಆದರೆ ಈ ವಿಷಯದ ಬಗ್ಗೆ ಖಚಿತವಾದ ಅಭಿಪ್ರಾಯದ ಬಗ್ಗೆ ತಜ್ಞರಲ್ಲಿ ಚರ್ಚೆ ನಡೆಯುತ್ತಲೇ ಇದೆ.

- ಬೆನ್ನು ನೋವಿನಿಂದ ಬಳಲುತ್ತಿರುವ ಜನರಿಗೆ ತಮ್ಮ ಎಡಭಾಗದಲ್ಲಿ ಅಥವಾ ಬಲಭಾಗದಲ್ಲಿ ಮಲಗುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ, ಆದರೆ ಈ ವ್ಯಕ್ತಿಗಳು ಎಡಭಾಗದಲ್ಲಿ ಮಲಗುವುದು ಹೆಚ್ಚಿನವರಿಗೆ ಹೆಚ್ಚು ಪ್ರಯೋಜನಕಾರಿ ಎಂದು ಅಧ್ಯಯನಗಳು ಸಾರಿವೆ. ಎಡಮಗ್ಗುಲಲ್ಲಿ ಮಲಗುವುದರಿಂದ ಹೊಟ್ಟೆಯ ಭಾರವೂ ಬೆನ್ನಿನ ಮೇಲೆ ಬಿದ್ದು ಒತ್ತಡವನ್ನು ಉಂಟುಮಾಡುತ್ತದೆ. ಹಾಗಾಗಿ ಎಡಮಗ್ಗುಲಲ್ಲಿ ಮಲಗಿದ್ದಾಗ ಬೆನ್ನುಮೂಳೆಯ ಮೇಲೆ ಭಾರ ಬೀಳದೇ ನೋವು ಇಲ್ಲದಾಗಿರಲು ಸಾಧ್ಯವಾಗುತ್ತದೆ.

ಕೋಲ್ಡ್ ಡ್ರಿಂಕ್ ನಿಜವಾಗಿಯೂ ಹೊಟ್ಟೆ ಗ್ಯಾಸ್ ತೆಗೆದುಹಾಕುತ್ತದೆಯೇ?

- ವೈದ್ಯರು ಗರ್ಭಿಣಿಯರಿಗೆ ಸಾಧ್ಯವಾದಷ್ಟು ತಮ್ಮ ಬಲಭಾಗದಲ್ಲಿ ಮಲಗದೇ ಇರುವಂತೆ ಸಲಹೆ ನೀಡುತ್ತಿದ್ದಾರೆ. ವಿಶೇಷವಾಗಿ ಗರ್ಭಿಣಿಯರ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಕಾರಣಗಳಿಗಾಗಿ ಎಡಮಗ್ಗುಲಲ್ಲಿ ಮಲಗುವುದೇ ಅತ್ಯುತ್ತಮವಾಗಿದೆ. ಮೊದಲಿಗೆ, ಇದು ಭ್ರೂಣಕ್ಕೆ ರಕ್ತದ ಹರಿಯುವಿಕೆಯನ್ನು ಸುಲಭವಾಗಿಸುತ್ತದೆ; ಎರಡನೆಯದಾಗಿ, ಇದು ಬೆನ್ನು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ; ಮತ್ತು ಮೂರನೆಯದಾಗಿ, ಗರ್ಭಿಣಿ ಮಹಿಳೆಯರಿಗೆ ಎಡಭಾಗದಲ್ಲಿ ಮಲಗುವ ಮೂಲಕ ಅವರ ಗರ್ಭಾಶಯ ಮತ್ತು ಯಕೃತ್ತಿನ ಮೇಲೆ ಬೀಳುವ ಭಾರವನ್ನು ಇಲ್ಲವಾಗಿಸುತ್ತದೆ. ಅಂತಿಮವಾಗಿ, ಈ ಮೂಲಕ ಇಡೀ ದೇಹದಲ್ಲಿ ರಕ್ತ ಪರಿಚಲನೆ ಉತ್ತಮವಾಗುತ್ತದೆ.

Follow Us:
Download App:
  • android
  • ios