Asianet Suvarna News Asianet Suvarna News

ಹದಿಹರೆಯದವರು ಕುಡಿಯಲು ಕಾರಣವೇನು?

ದೇಶದ ಹದಿಯರೆಯದ ಮಕ್ಕಳಲ್ಲಿ ಕುಡಿತ ಹೆಚ್ಚುತ್ತಿದೆ. ಸಾಂಸ್ಕೃತಿಕ ಬದಲಾವಣೆ ಹಾಗೂ ಪಾಶ್ಚಾತ್ಯರ ಅನುಕರಣೆ ಇದಕ್ಕೆ ಮುಖ್ಯ ಕಾರಣಗಳು. ಇವಲ್ಲದೆಯೂ ಹಲವು ಕಾರಣಗಳಿವೆ. ಆದರೆ ಇದರಿಂದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳಾಗುತ್ತಿವೆ.

Why do Teenagers Drink
Author
Bangalore, First Published Dec 5, 2019, 1:17 PM IST

ಸಂಶೋಧನೆಯ ಪ್ರಕಾರ ಪ್ರಸ್ತುತ ವ್ಯಕ್ತಿಯು ಮೊದಲ ಬಾರಿಗೆ ಆಲ್ಕೋಹಾಲ್ ಟ್ರೈ ಮಾಡುವ ಸರಾಸರಿ ವಯಸ್ಸು 13.3. ಅಂದರೆ ಇನ್ನೂ ಟೀನೇಜ್‌ನ ಆರಂಭವಷ್ಟೇ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಮದ್ಯದ ಮೊರೆ ಹೋಗಲು ಕಾರಣವೇನು? ಮದ್ಯ ಏಕೆ ಮಕ್ಕಳಿಗೆ ಅಷ್ಟೊಂದು ಆಕರ್ಷಕವೆನಿಸುತ್ತದೆ? ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ಹದಗೆಡಿಸುವ ಆಲ್ಕೋಹಾಲ್‌ನಿಂದ ದೂರ ಇರುವಂತೆ ಪೋಷಕರು ಮಕ್ಕಳಿಗೆ ತಿಳಿ ಹೇಳುವ ವಿಧಾನ ಯಾವುದು? 

ಎ ಫಾರ್ ಆಲ್ಕೋಹಾಲ್, ಬಿ ಫಾರ್ ಬೀಡಿ.. ಮೊಮ್ಮಕ್ಕಳಿಗೆ ತಾತನ ‘ಎಣ್ಣೆ’ ಪಾಠ!

ಹದಿಹರೆಯದವರ ಕುಡಿತದ ಅಂಕಿಸಂಖ್ಯೆ

ಹೆಲ್ತ್ ಆ್ಯಂಡ್ ಸೋಷ್ಯಲ್ ಕೇರ್ ಮಾಹಿತಿ ಕೇಂದ್ರದ 2014ರ ವರದಿಯು ಹದಿಹರೆಯದವರಲ್ಲಿ ಕುಡಿತದ ಚಟದ ಕುರಿತು ಬೆಳಕು ಚೆಲ್ಲಿದೆ. ಭಾರತದಲ್ಲಿ ಶೇ. 23ರಷ್ಟು ಯುವಜನತೆ 18 ವರ್ಷಕ್ಕೆ ಕಾಲಿಡುವ ಮುಂಚೆಯೇ ಆಲ್ಕೋಹಾಲ್ ಸೇವನೆ ಮಾಡಿರುತ್ತದೆ. ಅದರಲ್ಲೂ ತಮ್ಮ ಕುಟುಂಬಗಳಿಗೆ ಗೊತ್ತಾಗದಂತೆ ನೋಡಿಕೊಳ್ಳುವಲ್ಲಿ ಜಾಗೃತೆ ವಹಿಸುತ್ತಾರೆ. ಇದರಲ್ಲಿ ಶೇ.66ರಷ್ಟು ಯುವಕರು ಆಲ್ಕೋಹಾಲನ್ನು ಬಾರ್‌ಗಳು, ಪಬ್ಸ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಖರೀದಿಸುತ್ತಾರೆ. 

Why do Teenagers Drink

ಹದಿಹರೆಯದವರು ಕುಡಿಯಲು ಕಾರಣವೇನು?

ಟೀನೇಜ್‌ನಲ್ಲಿ ಏನು ಮಾಡಬೇಡ ಎನ್ನುತ್ತಾರೋ ಅದನ್ನು ಯಾಕೆ ಮಾಡಬಾರದು ನೋಡಿಯೇ ಬಿಡೋಣ ಎಂಬ ಮನಸ್ಥಿತಿ ಹೆಚ್ಚು. ಇದಕ್ಕಾಗಿ ಮಕ್ಕಳು ಆಲ್ಕೋಹಾಲ್ ಸೇವನೆ ಟ್ರೈ ಮಾಡುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಇದರ ಹೊರತಾಗಿಯೂ ಟೀನೇಜ್ ಕುಡಿತಕ್ಕೆ ಹಲವು ಕಾರಣಗಳಿವೆ.

ಗೆಳೆಯರ ಒತ್ತಡ

ತಮ್ಮ ಗೆಳೆಯರು ಒತ್ತಾಯಿಸಿದಾಗ, ಕುಡಿಯದಿದ್ದರೆ ಗುಂಪಿನಿಂದ ಹೊರ ಉಳಿವ ಭಯದಿಂದ ಕೆಲ ಮಕ್ಕಳು ಕುಡಿತ ಆರಂಭಿಸುತ್ತಾರೆ. ಮತ್ತೆ ಕೆಲ ಮಕ್ಕಳು ಟಿವಿ ಹಾಗೂ ಜನಪ್ರಿಯ ಕಾರ್ಯಕ್ರಮಗಳಲ್ಲಿ ಹೀರೋ ಕುಡಿಯುವುದನ್ನು ನೋಡಿ ಕುಡಿತದತ್ತ ಸೆಳೆತಕ್ಕೊಳಗಾಗುತ್ತಾರೆ. ಇನ್ನು ಕೆಲವರಿಗೆ ಎಲ್ಲರೂ ಮಾಡುತ್ತಾರೆ, ನಾನು ಮಾಡಿದರೆ ತಪ್ಪೇನು ಎಂಬ ಭಾವ ಕಾಡಿದರೆ, ಮತ್ತೆ ಕೆಲವರು ಅಪ್ಪನನ್ನೇ ಹೀರೋವಾಗಿ ತೆಗೆದುಕೊಂಡು ಅಪ್ಪನ ದುಶ್ಚಟಗಳನ್ನೇ ರೂಢಿಸಿಕೊಳ್ಳುತ್ತಾರೆ. ಒಂದು ವೇಳೆ ಮನೆಯಲ್ಲಿ ಮದ್ಯ ತಂದಿಡುವ ಅಭ್ಯಾಸವಿದ್ದಲ್ಲಿ ಮಕ್ಕಳು ಅದೇನೆಂದು ಕುಡಿದು ನೋಡುವ ಸಾಹಸಕ್ಕಿಳಿಯುವುದು ಸಾಮಾನ್ಯ. 

ಕುಡಿತದಿಂದ ದುಃಖ ನೋವು ಮರೆಯಬಹುದೆನ್ನುವ ಮಾತು ಕೇಳಿ ಹಲವು ಮಕ್ಕಳು ಶಿಕ್ಷಣದ ಒತ್ತಡ, ಪ್ರೀತಿ ಕೈಕೊಟ್ಟಿತು, ತಾನು ನೋಡಲು ಚೆನ್ನಾಗಿಲ್ಲ ಇತ್ಯಾದಿ ಕೀಳರಿಮೆಗಳನ್ನು ತಾತ್ಕಾಲಿಕವಾಗಿ ಮರೆಯಲು ಕುಡಿತ ಆರಂಭಿಸುತ್ತಾರೆ. 

ಹದಿವಯಸ್ಸು ಬಹಳ ವಿಚಿತ್ರವಾದುದು. ಮಕ್ಕಳು ಮದ್ಯವು ತಮಗೆ ಯಾವುದಕ್ಕಾದರೂ ಹೊಂದಿಕೊಳ್ಳಲು ಸಹಾಯ ಮಾಡುತ್ತದೆಂದು ಭಾವಿಸುತ್ತಾರೆ. ಅಲ್ಲದೆ, ಎಲ್ಲೆಡೆ ಬಾರ್‌ಗಳು ಕಾಮನ್ ಆಗಿರುವುದು ಕೂಡಾ ಮಕ್ಕಳು ಕುಡಿದು ನೋಡಲು ಯೋಚಿಸಲು ಸಹಾಯ ಮಾಡುತ್ತವೆ. 

ಮೊಬೈಲ್ ಸ್ವಚ್ಛತೆಗೆ ಆಲ್ಕೋಹಾಲ್

ಕುಡಿತದಿಂದ ಹದಗೆಡುವ ಆರೋಗ್ಯ

ಕುಡಿತ ಯಾವಾಗಲೂ ಕೆಟ್ಟದ್ದೇ. ಅದರಲ್ಲೂ ಬಹಳ ಚಿಕ್ಕ ವಯಸ್ಸಿನಲ್ಲೇ ಮದ್ಯಸೇವನೆ ಆರಂಭಿಸಿದರೆ ಅದರಿಂದ ಮಕ್ಕಳ ಆರೋಗ್ಯದ ಮೇಲೆ ಹಲವು ಗಂಭೀರ ಪರಿಣಾಮಗಳಾಗಬಹುದು. ಅಲ್ಪಾವಧಿಯ ಪರಿಣಾಮಗಳೆಂದರೆ ತೂಕ ಹೆಚ್ಚುವುದು, ಚರ್ಮ ಪೇಲವವಾಗುವುದು, ವಾಸನೆಯ ಉಸಿರಾಟ ಇತ್ಯಾದಿ. ಆದರೆ, ಅತಿ ಹೆಚ್ಚು ಹಾನಿಯಾಗುವುದು ಎಳೆಯ ಮೆದುಳಿಗೆ.

ಟೀನೇಜ್ ಸಮಯವು ಮೆದುಳಿನ ಬೆಳವಣಿಗೆಯ ಬಹು ಮುಖ್ಯ ಹಂತ. 2009ರ ಚೀಫ್ ಮೆಡಿಕಲ್ ಆಫೀಸರ್ ವರದಿಯ ಪ್ರಕಾರ, 20 ವರ್ಷದೊಳಗಿನವರು ಮದ್ಯ ಸೇವಿಸುತ್ತಿದ್ದರೆ, ಪ್ರೇರಣೆ, ರೀಸನಿಂಗ್ ಹಾಗೂ ಸಂವಹನ ಪ್ರಕ್ರಿಯೆಯೊಂದಿಗೆ ಡೀಲ್ ಮಾಡುವ ಮೆದುಳಿನ ಭಾಗಗಳಿಗೆ ಹಾನಿಯಾಗುತ್ತದೆ. ಅಷ್ಟೇ ಅಲ್ಲ, ಮದ್ಯದ ಸೇವನೆಯ ಪರಿಣಾಮ ಟೀನೇಜ್ ಮಕ್ಕಳು ಗಲಾಟೆ, ಹೊಡೆದಾಟ, ಆ್ಯಕ್ಸಿಡೆಂಟ್, ಲೈಂಗಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಹೆಚ್ಚಾಗುತ್ತದೆ. 

ನಿಮ್ಮ ಮಕ್ಕಳೊಂದಿಗೆ ಹೇಗೆ ಮಾತಾಡಬೇಕು?

ನಿಮ್ಮ ಮಕ್ಕಳೊಂದಿಗೆ ಮದ್ಯ ಸೇವನೆ ಬಗ್ಗೆ ಮಾತನಾಡುವ ಅತ್ಯುತ್ತಮ ಮಾರ್ಗವೆಂದರೆ ಅವರೊಂದಿಗೆ ಕುಳಿತು ಓಪನ್ ಆಗಿ ಪ್ರಾಮಾಣಿಕವಾಗಿ ಮಾತನಾಡುವುದು. ಅವರು ಮದ್ಯ ಸೇವಿಸಲಾರಂಭಿಸಿದ್ದಾರೆ ಎಂದು ನಿಮಗೆ ಡೌಟ್ ಬರುವ ಮುನ್ನವೇ ಆ ಬಗ್ಗೆ ಮಾತನಾಡುವುದು ಉತ್ತಮ. ಸಿಟ್ಟಿಗೇಳುವ ಬದಲು ಫ್ರೆಂಡ್‌ನಂತೆ ಮಕ್ಕಳನ್ನು ಜಜ್  ಮಾಡದೆ ಮಾತನಾಡಿ.

Why do Teenagers Drink

ಒಂದು ವೇಳೆ ನಿಮಗೂ ಆ ಚಟವಿದ್ದಲ್ಲಿ, ಮಕ್ಕಳು ತಿರುಗಿ ಹೇಳಬಹುದು. ನೀವು ಮಾಡುವ ಕೆಲಸ ತಾನೇಕೆ ಮಾಡಬಾರದು ಎಂದು ಪ್ರಶ್ನಿಸಬಹುದು. ಇದಕ್ಕೆ ನೀವು ಚಟದಿಂದ ದೂರ ಉಳಿದೇ ಉತ್ತರಿಸುವುದು ಉತ್ತಮ. ಆಲ್ಕೋಹಾಲ್ ಸೇವನೆ ಯಾವ ಸಮಸ್ಯೆಗೂ ಪರಿಹಾರವಲ್ಲ, ಬದಲಿಗೆ ಅದೇ ಒಂದು ಸಮಸ್ಯೆ ಎಂಬುದನ್ನು ಮಕ್ಕಳಿಗೆ ತಿಳಿ ಹೇಳಿ. ಅಷ್ಟೇ ಅಲ್ಲ, ಅವರಿಗೆ ಜೀವನದಲ್ಲಿ ಏನೇ ಸಮಸ್ಯೆ ಬಂದರೂ ಅದನ್ನು ಮುಕ್ತವಾಗಿ ನಿಮ್ಮೊಂದಿಗೆ ಹಂಚಿಕೊಳ್ಳಲು ಪ್ರೇರೇಪಿಸಿ. ಸಮಸ್ಯೆ ಪರಿಹಾರಕ್ಕೆ ಸಹಾಯಕರಾಗಿ. 

Follow Us:
Download App:
  • android
  • ios