ಲಕ್ನೋ[ಜು. 12] ಉತ್ತರ ಪ್ರದೇಶದಿಂದ ವೈರಲ್ ಆಗಿರುವ ಸುದ್ದಿ ನಿಜ್ಕಕೂ ನಾವು ಯಾವ ಪ್ರಪಂಚದಲ್ಲಿ ಇದ್ದೇವೆ ಎನ್ನುವುದನ್ನು ಅಣಕಿಸುವಂತಿದೆ. ತಾತ ಮೊಮ್ಮಕ್ಕಳನ್ನು ಕೂರಿಸಿಕೊಂಡು ಮದ್ಯಪಾನದ ಪಾಠ ಮಾಡಿದ್ದಾರೆ.

ಪೊಲೀಸರು ಸಹ ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸಿದ್ದಾರೆ. ಮಕ್ಕಳಿಗೆ ಆಂಗ್ಲ ವರ್ಣಮಾಲೆಯ ಪಾಠ ಮಾಡಿರುವ ತಾತ ಎ ಫಾರ್ ಆಲ್ಕೋ ಹಾಲ್, ಬಿ ಫಾರ್ ಬೀಡಿ ಎಂದು ಹೇಳಿಕೊಟ್ಟಿದ್ದಾರೆ.

ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಸರ್ಕಾರ

ಉತ್ತರಪ್ರದೇಶದ  ಬಹಾದುರ್ಪುರದಲ್ಲಿನ ಈ ಘಟನಾವಳಿ  ವೈರಲ್ ಆಗಿದೆ. ಚಾಪೆಯೊಂದರ ಮೇಲೆ ಕುಳಿತುಕೊಂಡಿರುವ ತಾತ ಮಕ್ಕಳಿಗೆ  ಮದ್ಯಪಾನ ಮತ್ತು ಧೂಮಪಾನದ ಬೋಧನೆ ಮಾಡುತ್ತಿದ್ದು ಎಣ್ಣೆ  ಗ್ಲಾಸ್ ಗಳು ಸಹ ಏನೂ ಅರಿಯದ ಮಕ್ಕಳ ಕೈಯಲ್ಲಿದೆ.  ಮದ್ಯಕ್ಕೆ ನೀರು ಸೇರಿಸಿ ಕುಡಿಯಲು ಅಜ್ಜನೇ ಪ್ರೇರೇಪಣೆ ನೀಡುತ್ತಿರುವುದು ದುರ್ದೈವ ಎಂದಷ್ಟ ಹೇಳಬಹುದು!